ಮಲ್ಪೆ: ಪಡುತೋನ್ಸೆ ಗ್ರಾಮದ ಕಂಬಳತೋಟದಲ್ಲಿ ಮರಳು ಅಕ್ರಮ ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಒಂದು ಯುನಿಟ್ ಮರಳು ಮತ್ತು ಅದಕ್ಕೆ ಬಳಸಿದ ವಾಹನವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.
ಅ. 17ರಂದು ರಾತ್ರಿ 11-50ರ ಸುಮಾರಿಗೆ ಅರ್ವಿನ್ ಕ್ವಾಡ್ರಸ್ ಅವರಿಗೆ ಸೇರಿದ ಜಾಗದಲ್ಲಿ ನಸ್ರುಲ್ಲಾ , ಪಜೂಲ್, ಸಾಗರ್ ಅವರು ಶೇಖರಿಸಿ ಸಾಗಿಸಲು ವಾಹನಕ್ಕೆ ತುಂಬಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ. ಸ್ವಾಧೀನ ಪಡಿಸಿಕೊಂಡ ಮರಳಿನ ಮೌಲ್ಯ 5 ಸಾ.ರೂ. ಮತ್ತು ವಾಹನದ ಮೌಲ್ಯ 2 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳು ಸಂಗ್ರಹ: ಇಬ್ಬರ ಬಂಧನ
ಮಲ್ಪೆ: ಪಡುತೋನ್ಸೆ ಗ್ರಾಮದ ತಿಮ್ಮಣ್ಣಕುದ್ರು ಬಳಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಿಸುತ್ತಿದ್ದ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮರಳು ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಪ್ರವೀಣ್ ಮತ್ತು ಹರೀಶ್ ಅವರು ಅಕ್ರಮವಾಗಿ ತೆಗೆದಿದ್ದ ಸುಮಾರು 5 ಯೂನಿಟ್ ಮರಳನ್ನು ಫ್ಲೇವಿ ಮಿನೇಜಸ್ ಅವರ ಜಾಗದಲ್ಲಿ ಸಂಗ್ರಹಿಸಿರುವುದು ಕಂಡು ಬಂದಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.