Advertisement

ಅಕ್ರಮ ಮರಳುಗಾರಿಕೆ ಮತ್ತೆ ಆರಂಭ

05:05 AM Dec 31, 2018 | Team Udayavani |

ಶಹಾಬಾದ: ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಖಡಕ್‌ ಆದೇಶ ಮೇರೆಗೆ ಸ್ಥಗಿತಗೊಂಡಿದ್ದ ಮರಳು ಸಾಗಾಣಿಕೆ ಈಗ ಮತ್ತೆ ರೆಕ್ಕೆ ಪುಕ್ಕ ಬಿಚ್ಚಿಕೊಂಡಿದೆ.

Advertisement

ತಾಲೂಕಿನ ಕಾಗಿಣಾ ನದಿ ಒಡಲಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಸರಕಾರಿ ಆದೇಶವನ್ನು ಬಹಿರಂಗವಾಗಿ ಗಾಳಿಗೆ ತೂರಲಾಗುತ್ತಿದ್ದರು ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ನದಿ ಒಡಲು ಬರಿದಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕಾಗಿಣಾ ನದಿ ದಡದಲ್ಲಿ ಸಾಲು ಸಾಲು ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಮರಳು ತೆಗೆಯುವ ದಂಧೆ ಜೋರಾಗಿಯೇ ನಡೆದಿದೆ. ನಿತ್ಯ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳು ಸಾಗಾಗಿಸಲಾಗುತ್ತಿದೆ. ಅಲ್ಲದೇ ಅಕ್ರಮ ದಂಧೆ ನಿರಾಂತಕವಾಗಿ ಸಾಗಿದೆ. ಹೀಗಾಗಿ ಕಾಗಿಣಾ ನದಿಯಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಅಂತರ್ಜಲ ಮಟ್ಟ ಕುಸಿದಿದೆ. ನದಿಗೆ ಹೊಂದಿಕೊಂಡಿರುವ ಗ್ರಾಮಗಳ ರಸ್ತೆಗಳು ಹದಗೆಟ್ಟು ಹೋಗಿವೆ. ಹಗಲಿನಲ್ಲಿ ಮರಳು ಸಂಗ್ರಹಿಸಿ ರಾತ್ರಿ ರಾಜಾರೋಷವಾಗಿ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಕಚೇರಿ ಪಕ್ಕದಿಂದಲೇ ಮರಳು ತುಂಬಿದ ವಾಹನಗಳು ಹೋಗುತ್ತಿದ್ದರೂ, ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಅಲ್ಲದೇ ನಗರದಲ್ಲಿ ನಡೆಯುತ್ತಿರುವ ನಗರೋತ್ಥಾನ ಯೋಜನೆ ಕಾಮಗಾರಿಗಳಿಗೆ ಅಕ್ರಮ ಮರಳು
 ಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಎಲ್ಲ ಕಡೆ ಮರಳು ಸುರಿದ ಚಿತ್ರಣ ಕಾಣುತ್ತದೆ. ಪೊಲೀಸ್‌ ಇಲಾಖೆ ಮಾತ್ರ ಆಗೊಮ್ಮೆ ಇಗೊಮ್ಮೆ ಎನ್ನುವಂತೆ ಒಂದೆರಡು ಪ್ರಕರಣ ದಾಖಲಿಸಿ ನಾಮಕೇ ವಾಸ್ತೆ ತಮ್ಮ ಕರ್ತವ್ಯ ನಿಭಾಯಿಸಿದಂತೆ ತೋರಿಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಅಕ್ರಮ ಮರಳು ಸಾಗಾಣಿಕೆಯಿಂದ ಮಡ್ಡಿ ನಂ.2ರಲ್ಲಿ ಕುಡಿಯುವ ನೀರಿನ ಪೈಪ್‌ಗ್ಳು, ಚರಂಡಿಗಳು ಹಾಗೂ ಅದರ ಮೇಲಿನ ಛಾವಣಿಗಳು ಒಡೆದು ಹೋಗಿವೆ. ಅಲ್ಲದೇ ರಾತ್ರಿ ಮರಳು ತುಂಬಿದ ವಾಹನಗಳ ಕಿರಿಕಿರಿಯಿಂದ ನಿದ್ದೆ ಇಲ್ಲದಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದೇವೆ. ರಾಜ ಮಹ್ಮದ್‌ರಾಜಾ,ಅಧ್ಯಕ್ಷರು ಜೆಡಿಎಸ್‌ ಲೋಹಿತ್‌ ಕಟ್ಟಿ -ನವನಾಥ ಕುಸಾಳೆ, ಜೆಡಿಎಸ್‌ ಮುಖಂಡರು ಅಕ್ರಮ ಮರಳು ಸಾಗಾಟದ ಬಗ್ಗೆ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ.

ಈಗ ನಡೆದಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. 
ರವೀಂದ್ರ ಧಾಮಾ, ತಹಶೀಲ್ದಾರ್‌ ಶಹಾಬಾದ  

Advertisement

ಕಾಗಿಣಾ ನದಿಯಲ್ಲಿ ನೀರಿ ಪ್ರಮಾಣ ಕುಸಿಯುತ್ತಿದೆ. ನೀರು ಕಲುಷಿತವಾಗುತ್ತಿದೆ. ಈಗಾಗಲೇ ಪಟ್ಟಣ ಸೇರಿದಂತೆ ಅನೇಕ ನದಿ ತೀರದ ಗ್ರಾಮಗಳಲ್ಲಿ ಆರೋಗ್ಯದ ಸಮಸ್ಯೆ ಎದುರಾಗಿದೆ. ಅಕ್ರಮ ಮರಳು ಸಾಗಾಟ ಕೂಡಲೇ ನಿಲ್ಲಿಸಬೇಕು. 
ಹೊನಗುಂಟಾ-ಗೋಳಾ ಗ್ರಾಮಸ್ಥರು 

Advertisement

Udayavani is now on Telegram. Click here to join our channel and stay updated with the latest news.

Next