Advertisement

ಚೆಕ್‌ಪೋಸ್ಟ್‌  ಇದ್ದರೂ ಉತ್ತರ ಕನ್ನಡಕ್ಕೆ ಮರಳು ಸಾಗಾಟ!

06:15 AM Jun 11, 2018 | Team Udayavani |

ಬೈಂದೂರು: ಜಿಲ್ಲೆಯಲ್ಲಿ ಬಹುದೊಡ್ಡ ಸಮಸ್ಯೆಯಾಗಿದ್ದ ಮರಳು ಲಭ್ಯತೆ ಇದೀಗ ಕಳ್ಳವ್ಯವಹಾರಕ್ಕೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಚೆಕ್‌ಪೋಸ್ಟ್‌ ಇದ್ದರೂ, ಐದಾರು ಟ್ರಿಪ್‌ಗ್ಳಲ್ಲಿ ಉತ್ತರಕನ್ನಡಕ್ಕೆ ಕದ್ದುಮುಚ್ಚಿ ಮರಳು ಸಾಗಾಟ ಮಾಡಲಾಗುತ್ತಿದೆ. 
 
ನಿಯಮ ಗಾಳಿಗೆ!
ಈ ಹಿಂದೆ ಕಂಡೂÉರು, ಹೆಮ್ಮಾಡಿ, ಬಸೂÅರು ಮುಂತಾದ ಭಾಗಗಳಲ್ಲಿ ಅನಧಿಕೃತ ಮರಳುಗಾರಿಕೆ ನಡೆಯುತ್ತಿತ್ತು. ಇದಕ್ಕೆಲ್ಲ ಈಗ ಬ್ರೇಕ್‌ ಬಿದ್ದಿದ್ದು, ಪರವಾನಿಗೆ ಹೊಂದಿದವರು ಮಾತ್ರ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತು. ಜತೆಗೆ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿತ್ತು. ನಿಯಮ ಪ್ರಕಾರ ಉಡುಪಿ ಜಿಲ್ಲೆಯ ವ್ಯಾಪ್ತಿಯೊಳಗೆ ಅಂದರೆ ಶಿರೂರಿನವರೆಗೆ ಮಾತ್ರ ಮರಳನ್ನು ಸಾಗಿಸಬಹುದು. ಅಲ್ಲಿಂದ ಉತ್ತರ ಕನ್ನಡಕ್ಕೆ ಸಾಗಿಸಬಾರದು ಎನ್ನುವ ಉದ್ದೇಶದಿಂದ ಶಿರೂರು ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿದೆ. ಕಾನೂನು ಕ್ರಮ ಇಷ್ಟೆಲ್ಲ ಕಟ್ಟುನಿಟ್ಟಾಗಿದ್ದರೂ, ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಲೇ ಇದೆ.  ಈ ಬಗ್ಗೆ ಅಧಿಕಾರಿಗಳೂ ತಲೆ ಕೆಡಿಸಿಕೊಂಡಿಲ್ಲ.

Advertisement

ಒಂದು ಲೋಡ್‌ಗೆ 20 ಸಾವಿರ ರೂ. 
ಜಿಲ್ಲೆಯಲ್ಲಿ ಒಂದು ಲೋಡ್‌ ಮರಳಿಗೆ 12ರಿಂದ 13 ಸಾವಿರ ದರ ನಿಗದಿ ಪಡಿಸಲಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಗೆ ಸಾಗಿಸಿದರೆ 18ರಿಂದ 20 ಸಾವಿರ ಹಣ ದೊರೆಯುತ್ತದೆ. ದೊಡ್ಡ ಲಾರಿಯಾದರೆ 35 ಸಾವಿರ ರೂ.ವರೆಗೆ ಹಣ ಸಿಗುತ್ತದೆ. ಹೀಗೆ ಅಕ್ರಮದಲ್ಲಿ ಏಜೆಂಟರು ದಿನದಲ್ಲಿ 20ರಿಂದ 25 ಸಾವಿರ ಆದಾಯ ಗಳಿಸುತ್ತಾರೆ ಎನ್ನಲಾಗಿದೆ. ಕ್ಯಾಮರಾ ಕಣ್ಗಾವಲು, ಜಿ.ಪಿ.ಎಸ್‌ ವ್ಯವಸ್ಥೆಗಳಿದ್ದರೂ ಉತ್ತರ ಕನ್ನಡಕ್ಕೆ ಮರಳು ಸಾಗಾಟವಾಗುತ್ತಿರುವುದು ಆಶ್ಚರ್ಯ ತಂದಿದೆ.

ಮಾಹಿತಿ ದೊರೆತರೆ ಸೂಕ್ತ ಕ್ರಮ
ಚೆಕ್‌ಪೋಸ್ಟ್‌ನಲ್ಲಿ ದಿನದ 24 ಗಂಟೆ ಸಿಬಂದಿ ನಿಯೋಜಿಸಲಾಗಿದೆ. ಅನಧಿಕೃತ ಮರಳು ಸಾಗಾಟ ಮಾಡಲು ಸಾಧ್ಯವಿಲ್ಲ. ಒಂದೊಮ್ಮ ಸಮರ್ಪಕ ಮಾಹಿತಿ ದೊರೆತರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ.
– ತಿಮ್ಮೇಶ ಬಿ.ಎನ್‌
ಠಾಣಾಧಿಕಾರಿ ಬೈಂದೂರು

– ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next