Advertisement
ಕೆಮ್ಮಣ್ಣು ಹಂಪನಕಟ್ಟೆ ಜಂಕ್ಷನ್ ಬಳಿ ಹೂಡೆ ಕಡೆಯಿಂದ ಬಂದ ಅಕ್ರಮ ಮರಳು ಸಾಗಾಟದ ಲಾರಿಯೊಂದು ಅತಿ ವೇಗವಾಗಿ ಸಾರ್ವಜನಿಕರ ಜೀವಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಭೀತಿಯನ್ನು ಹುಟ್ಟಿಸಿದೆ. ಇದನ್ನು ಪ್ರಶ್ನಿಸಿದ ಸಾರ್ವಜನಿಕರು ಮತ್ತು ಅಕ್ರಮ ಮರಳು ಸಾಗಾಟಗಾರರ ಮಧ್ಯೆ ಘರ್ಷಣೆ ಉಂಟಾಗಿತ್ತು.
ರಾತ್ರಿ 12.30ರ ವೇಳೆ ಹೂಡೆ ಉರ್ದು ಶಾಲೆಯ ಬಳಿ ಗಸ್ತು ನಿರತರಾಗಿದ್ದ ಪೊಲೀಸ್ ಮತ್ತು ವಾಹನದ ಮೇಲೆ ಮತ್ತೆ ಕಲ್ಲು ತೂರಾಟ ನಡೆಸಲಾಗಿದೆ. ಕೋಡಿಬೇಂಗ್ರೆ ಮಸೀದಿಯ ಹತ್ತಿರ ಖಾಸಗಿ ವಾಹನಗಳು ಹಾಗೂ ರಸ್ತೆಯಲ್ಲಿ ಹೋಗುವ ಸಾರ್ವಜನಿಕರ ಮೇಲೂ ಕಲ್ಲು ತೂರಿದ್ದಾರೆ.
Related Articles
Advertisement
ಘಟನೆಯ ಬಗ್ಗೆ ಮಲ್ಪೆ ಠಾಣಾಧಿಕಾರಿ ಶಕ್ತಿವೇಲು ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಹಾಗೂ ಪೊಲೀಸ್ ವಾಹನಕ್ಕೆ ಹಾನಿಗೊಳಿಸಿದ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಆರೋಪಿಗಳಾದ ಇರ್ಷಾದ್, ಅಹಾದ್, ಅಲ್ಫಾಜ್, ಶಾಹಿಲ್ , ಇರ್ಫಾನ್, ಇದಾಯತ್ ಹಾಗೂ ಇತರ ನಾಲ್ವರ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿದೆ. ಟ್ರಿಪ್ ಶೀಟ್ ಇಲ್ಲದೆ ಮರಳು ಸಾಗಾಟ ಮಾಡಿದರೆ, ಇನ್ನೊಂದೆಡೆ ಮರಳು ತೆಗೆಯಲು ಯಾವುದೇ ಸರಕಾರದ ನಿಯಮ ಪಾಲಿಸದೆ ಅಕ್ರಮಗಳು ನಡೆಯುತ್ತಿವೆ. ಸಾರ್ವಜನಿಕರ ದೂರು ಇದ್ದರೂ, ಗಣಿ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.