Advertisement

Illegal Sand Mining; ಮರಳು ಅಕ್ರಮ ಸಾಗಾಟ ದಂಧೆ; ಕಡಿವಾಣ ಹಾಕಲು ಅಧಿಕಾರಿಗಳು ವಿಫಲ

10:19 PM Sep 17, 2023 | Team Udayavani |

ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನ ವಿವಿಧೆಡೆಗಳಲ್ಲಿ ಶಿರಿಯಾ ಹೊಳೆಯಿಂದ ಅಕ್ರಮ ಮರಳು ಸಾಗಾಟ ದಂಧೆ ನಿತ್ಯ ನಡೆಯುತ್ತಿದೆ. ಆದರೆ ಇದು ಅಕ್ರಮವಾದರೂ, ಸಕ್ರಮವಾಗಿ ಸಾಗುತ್ತಿದೆ. ಕೆಲವೊಂದು ಪೊಲೀಸರ ತೆರೆಮರೆಯ ಅಭಯವೂ ಇದಕ್ಕೆ ಇದೆ. ಅನೇಕ ವರ್ಷಗಳಿಂದ ನಡೆಯುತ್ತಿರುವ ಈ ದಂಧೆಗೆ ಕೆಲವು ಬಾರಿ ಕಾಟಾಚಾರಕ್ಕೆ ಪೊಲೀಸರು ದಾಳಿ ನಡೆಸಿದರೂ, ಮತ್ತೆ ಮರಳು ಸಾಗಾಟ ಆಗುತ್ತಲೇ ಇದೆ.

Advertisement

ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾಗಾಟಕ್ಕಾಗಿ ಬಳಸಿದ ರಸ್ತೆಯನ್ನು ಜೆಸಿಬಿಯಲ್ಲಿ ಮುಚ್ಚಿ ದೋಣಿಗಳನ್ನು ಪುಡಿಗೈದರೂ, ಈ ದಂಧೆ ಕೆಲವು ದಿನಗಳ ಬಳಿಕ ಮತ್ತೆ ಎಗ್ಗಿಲ್ಲದೆ ನಡೆಯುತ್ತಿದೆ.

ಕೆಲವೊಂದು ರಾಜಕೀಯ ನಾಯಕರ ಕೃಪಾಕಟಾಕ್ಷ ಮತ್ತು ಪೊಲೀಸರಿಗೆ ಮಾಮೂಲು ಕಾಂಚಾಣ ನೀಡುವುದರಿಂದ ಇದನ್ನು ತಡೆಯಲಾಗುತ್ತಿಲ್ಲ. ಈ ದಂಧೆಯಲ್ಲಿ ಜಾತಿ, ಮತ, ರಾಜಕೀಯ ಸಾಮರಸ್ಯ ಇರುವುದರಿಂದ ಇದರ ನಿಗ್ರಹ ಕಷ್ಟವಾಗಿದೆ. ಮನೆ ಇನ್ನಿತರ ಕಟ್ಟಡ ನಿರ್ಮಿಸಲು ಕಾನೂನಿನ ತೊಡಕು ಇದ್ದರೂ, ಅಕ್ರಮ ಮರಳು ಸಾಗಾಟಕ್ಕೆ ಯಾವುದೇ ಕಾಯಿದೆ ಭಾದಕವಲ್ಲವೆಂಬುದಾಗಿ ಸಾರ್ವಜನಿಕರ ಆರೋಪವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next