Advertisement

ಅನೈತಿಕ ಸಂಬಂಧ?: ಮಂಗಳೂರಿನಲ್ಲಿ ಪತ್ನಿಯ ಹತ್ಯೆಗೈದ ಪತಿ

09:35 AM Aug 19, 2017 | |

ಮಂಗಳೂರು: ಇಲ್ಲಿನ ಕೊಟ್ಟಾರ ಚೌಕಿಯ ಜೆ.ಬಿ.ಲೋಬೋ ರಸ್ತೆಯಲ್ಲಿ ಅನೈತಿಕ ಸಂಬಂಧವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾದ ಪತ್ನಿಯನ್ನು  ಪತಿ ಶುಕ್ರವಾರ ರಾತ್ರಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

Advertisement

ಬ್ಲೋಸಮ್‌ ಲೋಬೋ (31)ಎಂಬ ಮಹಿಳೆ ಹತ್ಯೆಗೀಡಾಗಿದ್ದು, ಪತಿ ವಿಲಿಯಮ್‌ ಲೋಬೋ(35)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 ಅನೈತಿಕ ಸಂಬಂದ ಹೊಂದಿದ್ದ ಬ್ಲೋಸಮ್‌ಗೆ ಹಲವು ದಿನಗಳಿಂದ ಎಚ್ಚರಿಕೆ ನೀಡಿದ್ದರೂ ಮುಂದುವರಿಸಿದ್ದುದಕ್ಕಾಗಿ ಕುಪಿತನಾಗಿ ಕತ್ತಿಯಿಂದ ಬರ್ಬರವಾಗಿ ಕಡಿದು ಕೊಲೆಗೈದಿದ್ದಾನೆ ಎನ್ನಲಾಗಿದೆ. ಕೋಣೆಯ ತುಂಬೆಲ್ಲ ರಕ್ತ ಚೆಲ್ಲಾಡಿರುವುದು ಹತ್ಯೆಯ ಭೀಕರತೆಗೆ ಸಾಕ್ಷಿಯಾಗಿತ್ತು. 


ಹತ್ಯೆಗೀಡಾದ ಬ್ಲೋಸಮ್‌ ಮತ್ತು ಆರೋಪಿ ವಿಲಿಯಮ್‌

ಉರ್ವ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ರಾತ್ರಿ 10 ಗಂಟೆಯ ವೇಳೆಗೆ ಕೊಲೆ ನಡೆದಿದೆ ಎಂದು ವರದಿಯಾಗಿದೆ. 

ಅಂತ್ಯಕ್ರಿಯೆಗೆ ಆಗಮಿಸಿ ಬ್ಲೋಸಮ್‌ ಪೋಷಕರು,ಸಂಬಂಧಿಕರು ಮತ್ತು ನೆರೆ ಮನೆಯ ನಿವಾಸಿಗಳು ಅನೈತಿಕ ಸಂಬಂಧ ಹೊಂದಿಲ್ಲ, ಇದು ಸುಳ್ಳು ಎಂದಿರುವುದಾಗಿ ವರದಿಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next