ಮುಧೋಳ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಭಾವಿಸಿ ಪತಿಯನ್ನೇ ಹತ್ಯೆಗೈದ ಪತ್ನಿ ಹಾಗೂ ಅವಳ
ಪ್ರಿಯಕರನನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ.
ಹಲಗಲಿ ಗ್ರಾಮದ ಯಮನಪ್ಪ ಕರೆಣ್ಣವರ (35) ಹತ್ಯೆಗೀಡಾದ ವ್ಯಕ್ತಿ. ಯಮನಪ್ಪನ ಪತ್ನಿ ರುಕ್ಮವ್ವ ಕರೆಣ್ಣವರ ತನ್ನ ಭಾವನಾದ ಮುದಕಪ್ಪ ಕರೆಣ್ಣವರ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಅವರ ಸಂಬಂಧಕ್ಕೆ ಯಮನಪ್ಪ ಅಡ್ಡಿಯಾಗುತ್ತಾನೆ ಎಂದು ಭಾವಿಸಿ ಕೊಲೆ ಮಾಡಿ ಶವವನ್ನು ಗ್ರಾಮದ ಹೊರವಲಯದಲ್ಲಿರುವ ಕಬ್ಬಿನ ಹೊಲದಲ್ಲಿ ಬಿಸಾಕಿದ್ದರು ಎಂದು ಮೃತನ
ತಾಯಿ ಮುಧೋಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ, ಎಎಸ್‌ಐ ಬಿ.ಎಂ. ಪಾಟೀಲ, ಪೊಲೀಸ್ ಸಿಬ್ಬಂದಿ ಲಕ್ಷ್ಮಣ ಬಾಳಗೋಳ, ರಮೇಶ ಬರಗಿ, ಜಗದೀಶ ಕಾಂತಿ, ಎಸ್.ಕೆ. ಬೆಳ್ಳುಬ್ಬಿ ಇತರರಿದ್ದರು. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಎಸ್ಪಿ ಲೋಕೇಶ ಜಗಲಾಸರ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ:ಧನ್ನೂರ ಪಬ್ಲಿಕ್ ಶಾಲೆಗೆ ಹೈಟೆಕ್ ರೂಪ : ಕೆಪಿಎಸ್ ಶಾಲೆ ಅಭಿವೃದ್ಧಿಗೆ 2 ಕೋಟಿ