Advertisement

ಪೌರಕಾರ್ಮಿಕರ ಹುದ್ದೆಗೆ ಅಕ್ರಮ ನೇಮಕಾತಿ

06:16 AM Jul 01, 2020 | Lakshmi GovindaRaj |

ಮೈಸೂರು: ತಿ.ನರಸೀಪುರ ಪುರಸಭೆಯಲ್ಲಿ ಖಾಯಂ ಪೌರಕಾರ್ಮಿಕರ ಹುದ್ದೆಗೆ ಅಕ್ರಮವಾಗಿ ನೇಮಕವಾಗಿರುವ ಸವರ್ಣೀಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಸಂಸ ಪುನರ್‌ ಅವಲೋಕನ ರಾಜ್ಯ ಸಮಿತಿ,  ಪೌರಕಾರ್ಮಿಕರ ಅಸಂಘಟಿತ ಕಾರ್ಮಿಕ ವಿಭಾಗದಿಂದ ಪ್ರತಿಭಟನೆ ನಡೆಸಲಾಯಿತು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶ ಗೊಂಡ ಪ್ರತಿಭಟನಾಕಾರರು, 16 ಖಾಯಂ ಹುದ್ದೆಗಳಲ್ಲಿ 10 ಖಾಯಂ ಪೌರಕಾರ್ಮಿಕ ಹುದ್ದೆಗಳ  ಪೈಕಿ ನಾಲ್ವರು ಆದಿದ್ರಾವಿಡ ಜನಾಂಗಕ್ಕೆ ಸೇರಿದವರಾ ಗಿದ್ದು, ಹಾಲಿ ಸ್ವತ್ಛತಾ ಕೆಲಸವನ್ನು ಪುರಸಭೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ನಟರಾಜು, ಸವಿತಾ, ಆರ್‌. ಬಸವರಾಜು, ಎಂ.ಲಿಂಗರಾಜು,  ಬಿ.ಬಿ.ಗೋಪಾಲಕೃಷ್ಣ, ಸೋಮಣ್ಣ ಸವರ್ಣಿàಯರಾ ಗಿದ್ದು ಖಾಯಂ ಪೌರ ಕಾರ್ಮಿಕ ಹುದ್ದೆ ಪಡೆದುಕೊಂಡಿದ್ದಾರೆ.

ಆದರೆ ಇವರು ಸ್ವತ್ಛತಾ ಕೆಲಸ ಮಾಡದೆ, ಪ್ರತಿ ತಿಂಗಳು ವೇತನ ಪಡೆದು ಸರ್ಕಾರವನ್ನು ವಂಚಿಸುತ್ತಿದ್ದಾರೆಂದು ಆರೋಪಿಸಿದರು. ತಿ.ನರಸೀಪುರ  ಪುರಸಭೆಯ ಮುಖ್ಯಾಧಿಕಾರಿ ಅಶೋಕ್‌ ನಿಯಮಾವಳಿ ಉಲ್ಲಂ ಸಿ ನೇಮಕಗೊಂ ಡಿರುವ ಖಾಯಂ ಪೌರಕಾರ್ಮಿಕರ ಕೆಲಸ ಮಾಡಿಸದೇ ತಮಗೆ ಬೇಕಾದ ಸ್ಥಳಗಳಿಗೆ ನಿಯೋಜನೆ ಮಾಡುತ್ತಿದ್ದಾರೆ ಎಂದು ದೂರಿದರು.  ಈ  ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ 6 ಮಂದಿಯನ್ನು ವಜಾಗೊಳಿಸಬೇಕು.

ಈ ಹುದ್ದೆಗಳಿಗೆ ಸರ್ಕಾರದ ಆದೇಶದಂತೆ ಹೊಸದಾಗಿ 6 ಮಂದಿಯನ್ನು ಪೌರಕಾರ್ಮಿಕ ಹುದ್ದೆಗಳಿಗೆ ಪುನರ್‌ ನೇಮಿಸಬೇಕು. ಮುಖ್ಯಾಧಿಕಾರಿ  ಅಶೋಕ್‌ರನ್ನು ಅಮಾನತುಗೊಳಿಸ ಬೇಕು. 9 ಮಂದಿಗೆ ಬಾಕಿ ಉಳಿಸಿಕೊಂಡಿರುವ ತುಟ್ಟಿ ಭತ್ಯೆ, ವೇತನ ಮಂಜೂರು ಮಾಡಬೇಕೆಂದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕ ಆಲಗೂಡು ಡಾ.ಚಂದ್ರಶೇಖರ್‌, ಅಶೋಕಪುರಂ ಫೈಲ್ವಾನ್‌  ಕೃಷ್ಣ, ಆರ್ಟಿಸ್ಟ್‌ ನಾಗರಾಜು, ಬಾಬು, ಚಕ್ರಪಾಣಿ, ಮೈಸೂರು ಮಹದೇವು, ಗುರುಮೂರ್ತಿ, ಮಾದ, ಸೋಮ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next