Advertisement
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿದ ಕರವೇ ಪದಾಧಿಕಾರಿಗಳು, ತೊಗರಿ ಖರೀದಿ ಕೇಂದ್ರ ಆರಂಭ ಮಾಡಿರುವುದು ರೈತರಿಗೆ ಸಂತೋಷವಾದರೂ, ಸಹಕಾರ ಸಂಘದವರು ಬಡ ರೈತರಿಂದ ಪ್ರತಿ ಕ್ವಿಂಟಲ್‌ಗೆ 100 ರೂ. ಪಡೆಯುತ್ತಿರುವುದು ವಿಶಾದದ ಸಂಗತಿಯಾಗಿದೆ. ಈ ಕುರಿತು ಕರವೇ ಪ್ರತಿಭಟನೆ ನಡೆಸಿದರೆ, ಸಹಕಾರ ಸಂಘಗಳ ಕಾರ್ಯದರ್ಶಿಗಳು ಇಲ್ಲಸಲ್ಲದ ಸಬೂಬು ಹೇಳಿ ರೈತರನ್ನು ಸುಲಿಯುತ್ತಲಿದ್ದಾರೆ. ವೇರ್‌ಹೌಸ್ ವ್ಯವಸ್ಥಾಪಕರಿಗೆ, ಹಮಾಲಿ ಕೂಲಿಯಾಳುಗಳಿಗೆ, ಖಾಲಿ ಗೋಣಿಚೀಲ ತರಲು, ವಾಹನ ಚಾಲಕರಿಗೆ ನೀಡಲು ಹಣ ಬೇಕು. ಅದಕ್ಕಾಗಿ ರೈತರ ಹತ್ತಿರ ಹಣ ಪಡೆಯುತ್ತಿದ್ದೇವೆ ಎಂದು ನೇರವಾಗಿಯೇ ತಿಳಿಸುತ್ತಾ ಸುಲಿಗೆ ಮಾಡುತ್ತಿರುವುದು ಯಾವ ನ್ಯಾಯ ಎಂದು ಕಿಡಿ ಕಾರಿದ್ದಾರೆ. ರೈತರ ಹತ್ತಿರ ಹಣ ಪಡೆಯಬಾರದು ಎಂದು ಸರ್ಕಾರದ ಆದೇಶವಿದ್ದರೂ, ಸಹಕಾರ ಸಂಘದ ಪದಾಧಿಕಾರಿಗಳು ರೈತರನ್ನು ರಾಜಾರೋಷವಾಗಿ ಸುಲಿಯತ್ತಲಿದ್ದಾರೆ. ಕಾರಣ ತಕ್ಷಣವೆ ಇತ್ತಕಡೆ ಗಮನ ಹರಿಸಿ ರೈತರ ಸುಲಿಗೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
Advertisement
ತೊಗರಿ ಖರೀದಿಯಲ್ಲಿ ಅಕ್ರಮ: ತನಿಖೆಗೆ ಆಗ್ರಹ
12:20 PM Feb 25, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.