ನಾಗಮಂಗಲ: ಬಿಎಂಸಿ ಕೇಂದ್ರದಲ್ಲಿ ಶಿಥಲೀಕರಿಸಿದ 120ಲೀಟರ್ ಹಾಲನ್ನು ಅಕ್ರಮವಾಗಿ ಕದ್ದು ಬೇರೆಡೆಗೆ ಸಾಗಿಸುತ್ತಿದ್ದ ವೇಳೆ ಸಂಘದ ಕಾರ್ಯದರ್ಶಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಬಿಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಿಂಡೇನಹಳ್ಳಿ ಡೇರಿಯಲ್ಲಿ ಕಳೆದ 8 ವರ್ಷದಿಂದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಬ್ಬಯ್ಯ ಎಂಬವರೇ ಶಿಥಲೀಕರಿಸಿದ್ದ ಹಾಲನ್ನು ಕಳವು ಮಾಡಿ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪೂರೈಕೆ: ಬಿಂಡೇನಹಳ್ಳಿ ಡೇರಿಗೆ ಪ್ರತಿನಿತ್ಯ ಬೆಳಗ್ಗೆಮತ್ತು ಸಂಜೆ ವೇಳೆ ಉತ್ಪಾದಕರಿಂದ ಖರೀದಿಸುತ್ತಿದ್ದ 3 ಸಾವಿರ ಲೀ.ಹಾಲನ್ನು ಸಂಘದಲ್ಲೇ ಇರುವ ಬಿಎಂಸಿ ಕೇಂದ್ರದಲ್ಲಿ ಶಿಥಲೀಕರಣ ಮಾಡಿ ಟ್ಯಾಂಕರ್‌ಮೂಲಕ ಜಿಲ್ಲಾ ಹಾಲು ಒಕ್ಕೂಟಕ್ಕೆ ಪೂರೈಕೆ ಮಾಡಲಾಗುತ್ತಿತ್ತು.
ತರಾಟೆಗೆ ತೆಗೆದುಕೊಂಡರು: ಹಾಲಿನ ಟ್ಯಾಂಕರ್ ಬರುವ ಅರ್ಧ ಗಂಟೆಗೂ ಮುನ್ನ ಗೂಡ್ಸ್ ವಾಹನ ವೊಂದರಲ್ಲಿ 40 ಲೀ. ಸಾಮರ್ಥ್ಯದ ಮೂರುಕ್ಯಾನ್‌ಗಳಲ್ಲಿ ಶಿಥಲೀಕರಿಸಿದ್ದ 120ಲೀಟರ್ ಹಾಲನ್ನು ಬೇರೆಡೆಗೆ ಸಾಗಿಸುತ್ತಿದ್ದನ್ನು ಸೂಕ್ಷ್ಮವಾಗಿಗಮನಿಸಿದ ಗ್ರಾಮಸ್ಥರು, ಹಾಲು ತುಂಬಿದ ಕ್ಯಾನ್ ಜತೆಗೆ ಗೂಡ್ಸ್ ವಾಹನ ತಡೆದು ಕಾರ್ಯದರ್ಶಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡರು. ಈ ವೇಳೆ, ತಾಲೂಕಿನ ಬಿಂಡಿಗನವಿಲೆ ಹೋಬಳಿ ಗುಳಕಾಯಿಹೊಸಹಳ್ಳಿ ಗ್ರಾಮದ ವ್ಯಕ್ತಿ ಯೊಬ್ಬರು ಮದುವೆ ಸಮಾರಂಭಕ್ಕೆ ಹಾಲನ್ನುಖರೀದಿಸಿದ್ದು ತೆಗೆದುಕೊಂಡು ಹೋಗುತ್ತಿದ್ದಾರೆಂದು ಕಾರ್ಯದರ್ಶಿ ಸುಬ್ಬಯ್ಯ ಸಬೂಬು ಹೇಳಿದರು.
ಅನುಮಾನಕ್ಕೆಡೆ: ಶಿಥಲೀಕರಿಸಿದ ಹಾಲನ್ನು ಒಕ್ಕೂಟದ ಟ್ಯಾಂಕರ್‌ಗೆ ಪೂರೈಸಬೇಕಿರುವ ಹಾಲನ್ನು ಮಾರಾಟ ಮಾಡುವಂತಿಲ್ಲ. ಬಿಂಡೇನಹಳ್ಳಿಯಿಂದಸುಮಾರು 25ಕಿ.ಮೀ. ದೂರವಿರುವ ಗುಳಕಾಯಿಹೊಸಹಳ್ಳಿ ಆಸುಪಾಸಿನಲ್ಲಿಯೇ ಹಲವಾರು ಡೇರಿಬಿಎಂಸಿ ಕೇಂದ್ರಗಳಿವೆ. ಆದರೆ ಇಷ್ಟು ದೂರದಿಂದ120ಲೀ. ಹಾಲು ತೆಗೆದುಕೊಂಡು ಹೋಗುವಅವಶ್ಯಕತೆಯಿಲ್ಲ. ಟ್ಯಾಂಕರ್ ಚಾಲಕನೇ ಖಾಸಗಿ ಗೂಡ್ಸ್‌ನಲ್ಲಿ ಬಂದು ಕಳವು ಮಾಡಿರುವ ಈಹಾಲನ್ನು ತೆಗೆದುಕೊಂಡು ಹೋಗುತ್ತಿರುವುದುಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಶಿಸ್ತು ಕ್ರಮಕ್ಕೆ ಪಟ್ಟು: ಸಂಘದ ಕಾರ್ಯದರ್ಶಿ ಸುಬ್ಬಯ್ಯ ಈ ಹಿಂದೆ ಸಂಘದ 7ಲಕ್ಷಕ್ಕೂ ಹೆಚ್ಚುಹಣ ಲಪಟಾಯಿಸಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದರು.ಮಾನವೀಯತೆ ದೃಷ್ಟಿಯಿಂದ ತಿಳಿವಳಿಕೆ ನೀಡಲಾಗಿತ್ತು. ಆದರೆ, ಆಗಿಂದಾಗ್ಗೆ ಹಾಲನ್ನು ಕದ್ದುಮಾರಾಟ ಮಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿಸಿ ಕಾರ್ಯದರ್ಶಿವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅಲ್ಲಿಯವರೆಗೆ ಹಾಲಿನ ಟ್ಯಾಂಕರ್ ಕಳುಹಿಸುವುದಿಲ್ಲ ಎಂದು ಪಟ್ಟುಹಿಡಿದರು.
ಹಾಲು ಮಾರಾಟ ಇಲ್ಲ: ಮನ್‌ಮುಲ್ ಅಧಿಕಾರಿಗಳು ಪರಿಶೀಲನೆ ನಡೆಸಿ ನಡೆದಿರುವ ಲೋಪ ದೋಷಗಳ ಕುರಿತು ಹಿರಿಯ ಅಧಿಕಾರಿಗಳಿಗೆವರದಿ ನೀಡಲಾಗುವುದು ಎಂದು ಗ್ರಾಮಸ್ಥರಮನವೊಲಿಸಿದರು. ಪಟ್ಟುಬಿಡದ ಗ್ರಾಮಸ್ಥರು ಸಂಘದ ಕಾರ್ಯದರ್ಶಿ ಸುಬ್ಬಯ್ಯ ಮತ್ತು ಸಿಬ್ಬಂದಿಯನ್ನು ಕರ್ತವ್ಯದಿಂದ ಹೊರಗಿಟ್ಟು ಪಾರದರ್ಶಕತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೂ ತಾತ್ಕಾಲಿಕ ಸಿಬ್ಬಂದಿ ನೇಮಕ ಮಾಡಿಕೊಳ್ಬೇಕು. ಇಲ್ಲದಿದ್ದರೆ ಹಾಲು ಮಾರಾಟ ಮಾಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಪ್ರತಿಭಟನೆ ಕೈಬಿಟ್ಟರು.
ಗ್ರಾಮದ ಮುಖಂಡರಾದ ಜಯರಾಮು, ಪಟೇಲ್ ರವೀಶ್‌ಗೌಡ, ಕೃಷ್ಣೇಗೌಡ, ಬಿ.ಎಸ್. ಅಶೋಕ, ರಮೇಶ, ನಾರಾಯಣ, ಸೀತೇಗೌಡ, ಕೆಂಪೇಗೌಡ ಮತ್ತಿತರರು ಉಪಸ್ಥಿತರಿದ್ದರು.