Advertisement

ಬಂಟ್ವಾಳದ ಕಳ್ಳಭಟ್ಟಿ ಅಡ್ಡೆಗೆ ದಾಳಿ: 1200 ಲೀಟರ್ ಬೆಲ್ಲದ ಕೊಳೆ, 500 ಲೀಟರ್ ನಕಲಿ ವೈನ್ ವಶ

06:40 PM Apr 18, 2020 | keerthan |

ಮಂಗಳೂರು: ಇಲ್ಲಿನ ಬಂಟ್ವಾಳದ ಅಮ್ಮುಂಜೆ ಗ್ರಾಮದಲ್ಲಿ ಅಕ್ರಮವಾಗಿ ತಯಾರಿಸಲಾಗುತ್ತಿದ್ದ ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿ ತಯಾರಿಸುವ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ದಸ್ತವರಿ ಮಾಡಲಾಗಿದೆ.

Advertisement

ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ  ಬೆಂಜನಪದವು ಎಂಬಲ್ಲಿ ಮನೆಯ ಹಿಂಭಾಗದಲ್ಲಿ ಈ ಅಕ್ರಮ ಕಳ್ಳಬಟ್ಟಿ ತಯಾರಿಸಲಾಗುತ್ತಿದೆ.

1200 ಲೀಟರ್ ಬೆಲ್ಲದ ಕೊಳೆ ಮತ್ತು ಕಳ್ಳಭಟ್ಟಿ ತಯಾರಿಸುವ ಸಾಮಗ್ರಿ, 950 ಕೇಜಿ ಬೆಲ್ಲ ಮತ್ತು 500 ಲೀಟರ್ ನಕಲಿ ವೈನ್, 300 ಲೀಟರ್ ಬಟಾಟೆ ಮಿಶ್ರಣದ ಬೆಲ್ಲದ ಕೊಳೆಯನ್ನು  ಜಪ್ತಿ ಮಾಡಲಾಗಿದೆ.

ಆರೋಪಿಗಳಾದ ಕಿರಣ್ ಕುಮಾರ್ ಮತ್ತು ಕ್ರಿಸ್ಟನ್ ಡಿಸೋಜ ರವರನ್ನು ದಸ್ತಗಿರಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next