Advertisement
ಜಿಲ್ಲೆಯಲ್ಲಿ ಅಕ್ರಮ ಮದ್ಯ, ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ ತಯಾರಿಕೆ, ಸಂಗ್ರಹ, ಮಾರಾಟ, ಹಂಚಿಕೆ ಮತ್ತು ಸಾಗಾಣಿಕೆ ತಡೆಗಟ್ಟುವ ಸಲುವಾಗಿ ಅಧಿಕಾರಿಗಳು ಬೆಳಗ್ಗೆ, ರಾತ್ರಿ ದಾಳಿ ನಡೆಸಲಾಗುತ್ತಿದೆ. ದಾಳಿಗಾಗಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿ, ಸಿಬ್ಬಂದಿಗಳನ್ನೊಂಡ ತಂಡ ರಚಿಸಿ, ಜಾರಿ ಮತ್ತು ತನಿಖಾ ಕಾರ್ಯ ಚುರುಕುಗೊಳಿಸಲಾಗಿದೆ. ಕಳೆದ ಮಾರ್ಚ್ 22ರಿಂದ ಏಪ್ರಿಲ್ 08 ರವರಗೆ ಜಿಲ್ಲಾದ್ಯಂತ 293 ದಾಳಿ ಕೈಗೊಳ್ಳಲಾಗಿದೆ. 36 ಲೀ. ಮದ್ಯ ಮತ್ತು 61 ಲೀ. ಬಿಯರ್ ಜಪ್ತಿ ಮಾಡಿಕೊಂಡು ಪಡಿಸಿಕೊಂಡು 5 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಒಟ್ಟು ಮೂರು ಘೋರ ಮತ್ತು ಎರಡು 15(ಎ) ಮೊಕದ್ದಮೆಗಳನ್ನು ದಾಖಲು ಮಾಡಲಾಗಿದೆ. ರಾಮನಗರ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸೋಂಕು (ತಡೆಗಟ್ಟುವ ಸಲುವಾಗಿ ಅಬಕಾರಿ ಇಲಾಖೆುಂದ ಮೆ | |ಯುನಿಸ್ಟಿಲ್ ಆಲ್ಕೊಬ್ಲೆಂಡ್ಸ್ ಪ್ರç.ಲಿ., ಸೋಲೂರು, ಮಾಗಡಿ ತಾಲೂಕು, ರಾಮನಗರ ಜಿಲ್ಲೆ ಡಿಸ್ಟಿಲ್ಲರಿಯಲ್ಲಿ ಸಿ.ಎಸ್.ಆರ್. ಫಂಡ್‌ನ ಅಡಿಯಲ್ಲಿ ಈವರೆಗೆ 3150 ಬಲ್ಕ್ ಲೀಟರ್ ಹ್ಯಾಂಡ್ ಸ್ಯಾನಿಟೈಸರ್ ಸಿದ್ದಪಡಿಸಿ ಜಿಲ್ಲಾಡಳಿತದ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಹಾಗೂ ಇತರೆ ಸಂಘ-ಸಂಸ್ಥೆಗಳಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಉಪಯೋಗಿಸಲು ನೀಡಲಾಗಿದೆ. ಕೋವಿಡ್-19 ವೈರಸ್ ತಡೆಗಟ್ಟುವ ಸಲುವಾಗಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ರಾಮನಗರ ಜಿಲ್ಲೆಯಲ್ಲಿ ಯಾವುದೇ ರೀತಿಯ ಕಳ್ಳಭಟ್ಟಿ ಅಥವಾ ನಕಲಿ ಮದ್ಯದ ಮೋರೆ ಹೋಗದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. Advertisement
ಅಕ್ರಮ ಮದ್ಯ ಮಾರಾಟ: 293 ಪ‹ಕರಣ, 5 ಮಂದಿ ಬಂಧನ
06:32 PM Apr 10, 2020 | Suhan S |
Advertisement
Udayavani is now on Telegram. Click here to join our channel and stay updated with the latest news.