ಬೆಂಗಳೂರು: ಸರಕಾರಿ ಜಮೀನುಗಳಲ್ಲಿನ ಅಕ್ರಮ ಸಾಗು ವಳಿಯನ್ನು ಸಕ್ರಮಗೊಳಿಸಲು ನಮೂನೆ-57ರಡಿ ಅರ್ಜಿ ಸಲ್ಲಿ ಸಲು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕಿ.ಮೀ. ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವ ರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಕರ್ನಾಟಕ ಭೂಕಂದಾಯ (ತಿದ್ದುಪಡಿ) ವಿಧೇಯಕ- 2022ರ ಮೇಲಿನ ಚರ್ಚೆಯಲ್ಲಿ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ತಿಳಿಸಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯ, ಬಗರ್‌ಹುಕುಂ ಸಾಗುವಳಿಯಡಿ ಅರ್ಜಿ ಸಲ್ಲಿಕೆಗೆ ಕಿ.ಮೀ. ಅಂತರವನ್ನು ನಿಗದಿಪಡಿಸಲಾಗಿದೆ. ಈ ವ್ಯಾಪ್ತಿ ಯಲ್ಲಿ ಬರದೇ ಇರುವವರು ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರು ತ್ತಾರೆ. ಒಂದೊಮ್ಮೆ ನಮೂನೆ 57ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಆ ಜಮೀನನ್ನು ಸ್ವಾಧೀನಪಡಿಸಿ ಕೊಂಡು ಬಿಟ್ಟರೆ ಸಾಗು ವಳಿ ಮಾಡುತ್ತಿದ್ದವರಿಗೆ ಅನ್ಯಾಯವಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಪರಿಹಾರವಾದರೂ (ಎಕ್ಸ್‌ಗೆÅàಷಿಯಾ) ನೀಡಬೇಕು. ಇಲ್ಲವೇ ಕಿ.ಮೀ. ಅಂತರವನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.
ಅಕ್ರಮ-ಸಕ್ರಮ ಸಂಬಂಧಿತ ಅರ್ಜಿ
ಗಳು ಕಾಲಕಾಲಕ್ಕೆ ವಿಲೇ ಆಗಬೇಕಿದೆ. ಸದ್ಯ ರಾಜ್ಯಾದ್ಯಂತ ನಮೂನೆ-50ರಡಿ 6,302, ನಮೂನೆ -53ರಡಿ 1,12,541, ನಮೂನೆ 57ರಡಿ 7,15,705 ಅರ್ಜಿಗಳು ವಿಲೇಯಾಗಬೇಕಿದೆ. ಇವುಗಳ ವಿಲೇವಾರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಇದೇ ವೇಳೆ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಿ ಬಾಕಿ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಅಶೋಕ್ ಶಾಸಕರಲ್ಲಿ ಮನವಿ ಮಾಡಿಕೊಂಡರು.