Advertisement
ಪುರಸಭೆ ಸಭಾ ಭವನದಲ್ಲಿ ಮಂಗಳವಾರ ನಡೆದ ತುರ್ತು ಸಭೆಯಲ್ಲಿ ಸದಸ್ಯರಾದ ಅಲ್ಲಾಭಕ್ಷ ಢವಳಗಿ, ಮಹಿಬೂಬ ಗೊಳಸಂಗಿ, ಹುಲಗಪ್ಪ ನಾಯಕಮಕ್ಕಳ, ಸುನೀಲ ಹಡಲಗೇರಿ, ಸದಾನಂದ ಮಾಗಿ ಮತ್ತಿತರರು ಮಾತನಾಡಿ, ಲೇಔಟ್‌ಗಳ 2, 3, 4ನೇ ಮಾಲೀಕರಿಗೆ ಉತಾರ ಕೊಡಬೇಕು. ಇವರಿಗೆ ವಿನಾಕಾರಣ ತೊಂದರೆ ಕೊಡಬಾರದು. ಹಿಂದೇನಾಗಿದೆಯೋ ಬೇಕಾಗಿಲ್ಲ. ಮುಂದೆಯಾದರೂ ಎಲ್ಲರೂ ಕಾಯ್ದೆ ಪ್ರಕಾರ ಇರುವಂತೆ ನೋಡಿಕೊಳ್ಳಿ.
Related Articles
Advertisement
ಪುರಸಭೆ ಆಡಳಿತವೂ ಹೆಚ್ಚಿನ ಕಾಳಜಿ ತೋರಿಸಿ ಪ್ರತಿಯೊಂದು ವಾರ್ಡ್‌ನಲ್ಲೂ ಕೊರೊನಾ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿ ಸಿದ ಆಡಳಿತ ಮಂಡಳಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವ್ಯಾವ ಏರಿಯಾಗಳಲ್ಲಿ ಸಮಸ್ಯೆ ಹೆಚ್ಚಾಗಿದೆಯೋ ಅಂಥ ಏರಿಯಾಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಎಲ್ಲ ಸದಸ್ಯರು, ಪೌರ ಕಾರ್ಮಿಕರು ಶ್ರಮಿಸಬೇಕು ಎಂದು ತೀರ್ಮಾನಿಸಲಾಯಿತು. ಸನ್ಮಾನ: ಸಭೆ ಆರಂಭದಲ್ಲಿ ಸರ್ಕಾರದಿಂದ ಪುರಸಭೆಗೆ ನೂತನವಾಗಿ ನಾಮನಿರ್ದೇಶಿತಗೊಂಡ ಸದಸ್ಯರಾದ ರಾಜಶೇಖರ ಹೊನ್ನುಟಗಿ, ರಾಜಶೇಖರ ಹೊಳಿ, ಹುಲಗಪ್ಪ ನಾಯಕಮಕ್ಕಳ, ಸುನೀಲ ಹಡಲಗೇರಿ ಅವರನ್ನು ಸನ್ಮಾನಿಸಲಾಯಿತು.
ಸಂತಾಪ: ಕೋವಿಡ್ ಮಹಾಮಾರಿಗೆ ಬಲಿಯಾದ ಪುರಸಭೆ ಮಾಜಿ ಅಧ್ಯಕ್ಷ ರಸೂಲ್‌ದೇಸಾಯಿ, ಬಸವರಾಜ ಸುಕಾಲಿ, ನೂತನವಾಗಿ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿದ್ದರೂ ಅ ಧಿಕಾರ ಸ್ವೀಕರಿಸುವ ಮುನ್ನವೇ ನಿಧನರಾದ ಮನೋಹರ ತುಪ್ಪದ ಸೇರಿ ಪಟ್ಟಣ ವ್ಯಾಪ್ತಿಯಲ್ಲಿ ನಿಧನರಾದ ಇನ್ನಿತರರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಿ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷೆ ಶಾಜಾದಬಿ ಹುಣಚಗಿ, ಪ್ರಭಾರ ಮುಖ್ಯಾಧಿ ಕಾರಿಎಂ.ಬಿ.ಮಾಡಗಿ ಸೇರಿ ಸಿಬ್ಬಂದಿ ಸಂತಾಪ ಸೂಚಿಸಿದರು.