Advertisement

ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಲೇಔಟ್‌: ಆರೋಪ

04:18 PM Apr 20, 2023 | Team Udayavani |

ಬಂಗಾರಪೇಟೆ: ವಾರಸುದಾರರು ಇಲ್ಲದೇ, ಖಾಲಿ ಇರುವ ಜಮೀನಿನ ಮೇಲೆ ಭೂಗಳ್ಳರ ಕಣ್ಣುಬಿದ್ದಿದ್ದು, ಇಂತಹ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಲೇಔಟ್‌ ಗಳನ್ನು ನಿರ್ಮಾಣ ಮಾಡುತ್ತಿದ್ದು, ಕಂದಾಯ ಇಲಾಖೆಯ ತಡೆ ಹಿಡಿಯದೇ ನಿರ್ಲಕ್ಷ್ಯವಹಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ತಾಲೂಕಿನ ಡಿ.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡೂರು ಕರಪನಹಳ್ಳಿ ಗ್ರಾಮದ ಅಕ್ಕಪಕ್ಕದ ನಗರ ಗಳಲ್ಲಿ ಸರ್ಕಾರದ ಜಮೀನು ಕಬಳಿಕೆ ಆಗುತ್ತಿರುವ ಬಗ್ಗೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದಕ್ಕೆ ಸಾಕ್ಷಿಯಾಗಿ ಡಿ.ಕೆ.ಹಳ್ಳಿ ಫ್ಲಾಂಟೇಶನ್‌ ಕಂದಾಯ ಗ್ರಾಮಕ್ಕೆ ಸೇರಿದ ಸರ್ವೆ ನಂ.23ರಲ್ಲಿ ಚಂಡೀಗಡ್‌ನ‌ ಗೋಲ್ಡನ್‌ ಪ್ರಾಜೆಕ್ಟ್ ಲಿ.ಗೆ ಸೇರಿದ 17 ಎಕರೆ ಇದೆ ಎಂದು ಕಂದಾಯ ಇಲಾಖೆ ಆನ್‌ಲೈನ್‌ನ ಪಹಣಿಯಲ್ಲಿ ತೋರಿಸುತ್ತಿದೆ. ಸರ್ವೆ ನಂ.23ರಲ್ಲಿ 17 ಎಕರೆ ಜಮೀನಿನಲ್ಲಿ ಹೊಸ ದಾಗಿ ಸರ್ವೆ ನಂಬರ್‌ಗಳು ಆಗಿದ್ದು, ಸರ್ವೆ ನಂ. 66ರಲ್ಲಿ ಒಂದು ಎಕರೆ, 67ರಲ್ಲಿ ಒಂದು ಎಕರೆ, 69ರಲ್ಲಿ ಒಂದು ಎಕರೆ, 75ರಲ್ಲಿ 4 ಎಕರೆ, 77ರಲ್ಲಿ ಮೂರು ಎಕರೆ, 78ರಲ್ಲಿ ಎರಡು ಎಕರೆ, 83ರಲ್ಲಿ ಎರಡು ಎಕರೆ, 85ರಲ್ಲಿ 20 ಗುಂಟೆ, 85ರಲ್ಲಿ 20 ಗುಂಟೆ ಎಂದು ಪಹಣಿಯಲ್ಲಿ ಚಂಡೀಗಡ್‌ನ‌ ಗೋಲ್ಡನ್‌ ಪ್ರಾಜೆಕ್ಟ್ ಲಿ. ಎಂದು ಬರುತ್ತಿದೆ.

ಮೂಲ ದಾಖಲೆ ಹೊಂದಿದವರು ಬಂದರೆ ಕಿರುಕುಳ: ಇದರಲ್ಲಿ ಒತ್ತುವರಿ ಮಾಡಿಕೊಂಡು ಅಕ್ರಮ ಲೇಔಟ್‌ ಮಾಡಿಕೊಂಡು ನಿವೇಶನಗಳನ್ನು ನಿರ್ಮಾಣ ಮಾಡ ಲಾಗುತ್ತಿದೆ. ಗೋಲ್ಡನ್‌ ಪ್ರಾಜೆಕ್ಟ್ ಲಿಮಿಟೆಡ್‌ ಎಂಬುದು ಖಾಸಗಿ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ ಸಾರ್ವಜನಿಕರಿಂದ ಹೂಡಿಕೆ ಮಾಡಿ ಹೆಚ್ಚು ಹೂಡಿಕೆ ದಾರರು ಎಲ್ಲಿದ್ದಾರೋ, ಅಂತಹ ಸ್ಥಳದಲ್ಲಿಯೇ ಜಮೀನನ್ನು ಸಂಸ್ಥೆಯಲ್ಲಿಯೇ ಖರೀದಿಸಿದ್ದು, ಹೂಡಿಕೆದಾರರಿಗೆ ಕಾಲಕ್ರಮೇಣ ತಾಲೂಕಿನ ಡಿ.ಕೆ. ಹಳ್ಳಿ ಫ್ಲಾಂಟೇಶನನಲ್ಲಿರುವ ಜಮೀನನ್ನು ಪರಭಾರೆ ಯನ್ನು ಜಿಪಿಎ ಮೂಲಕ ನೋಂದಣಿ ಮಾಡಿಸಿ ಕೊಟ್ಟಿದೆ. ಈ ಜಮೀನನ್ನು ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿರುವ ಹೂಡಿಕೆದಾರರಿಗೆ ಜಿಪಿಎ ಮಾಡಿಕೊಟ್ಟಿರುವುದು ಮೂಲ ದಾಖಲೆಗಳೊಂದಿಗೆ ಸಂಬಂಧಪಟ್ಟವರು ಬಂದರೆ ಜಮೀನು ಯಾರೂ ಬಿಡದೇ ಕಿರುಕುಳ ನೀಡುತ್ತಿದ್ದಾರೆಂದು ದೂರಿದ್ದಾರೆ.

ಒತ್ತುವರಿ ಮಾಡಿಕೊಂಡವರ ವಿರುದ್ಧ ದೂರು ದಾಖಲು: ಚಂಡೀಗಡ್‌ನ‌ ಗೋಲ್ಡನ್‌ ಪ್ರಾಜೆಕ್ಟ್ ಲಿಮಿಟೆಡ್‌ನ‌ಲ್ಲಿ ಹೂಡಿಕೆದಾರರಾಗಿದ್ದ ಬೆಂಗಳೂರಿನ ನರಸಿಂಹಪ್ಪ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇ ಪಲ್ಲಿನ ಚೌಡಪ್ಪ ಎಂಬುವವರಿಗೆ ತಲಾ ಎರಡೆರಡು ಎಕರೆ ಜಮೀನು ನೋಂದಣಿ ಮಾಡಿಕೊಂಡಿರುವ ಬಗ್ಗೆ ದಾಖಲೆ ತೋರಿಸಿದರೂ, ಜಾಗ ಯಾರೂ ತೋರಿಸುತ್ತಿಲ್ಲ. ಈ ಸರ್ವೆ ನಂಬರ್‌ಗಳ ಜಮೀನಲ್ಲಿ ಬೇರೆಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿ ರುವ ಬಗ್ಗೆ ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ನಮ್ಮ ಬಳಿ ಎಲ್ಲಾ ಮೂಲ ದಾಖಲೆಗಳಿದ್ದರೂ, ಪೊಲೀಸ್‌ ಇಲಾಖೆಯಲ್ಲಿನ ಸೇವೆಯಿಂದ ವಜಾ ಗೊಂಡಿರುವ ವ್ಯಕ್ತಿಯೊಬ್ಬರು ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಚೌಡಪ್ಪ ಹಾಗೂ ನರಸಿಂಹಪ್ಪ ದೂರಿದ್ದಾರೆ.

ಬ ಚಂಡೀಗಡ್‌ನ‌ ಗೋಲ್ಡನ್‌ ಪ್ರಾಜೆಕ್ಟ್ ಲಿಮಿಟೆಡ್‌ಗೆ ಸೇರಿದ ಈ ಜಮೀನಿನಲ್ಲಿ ಲೇ ಔಟ್‌ ನಿರ್ಮಾಣ ಮಾಡುವ ಮುಂದೆ ಕೆಜಿಎಫ್ ನಗ ರಾಭಿವೃದ್ಧಿ ಇಲಾಖೆ ನೋಂದಣಿ ಹಾಗೂ ದೊಡ್ಡೂರು ಕರಪನಹಳ್ಳಿ ಗ್ರಾಪಂನಲ್ಲಿ ಇಸ್ವತ್ತು ಖಾತೆಗಳನ್ನು ಮಾಡಿದ ನಂತರವೇ, ಲೇಔಟ್‌ ನಿರ್ಮಾಣ ಮಾಡಬೇಕಾಗಿದ್ದು, ಇದ್ಯಾವುದನ್ನು ಮಾಡದೇ, ಯಾವುದೇ ಸಂಬಂಧಪಟ್ಟ ಇಲಾಖೆ ಗಳಿಂದ ಅನುಮತಿ ಪಡೆಯದೇ ಅಕ್ರಮ ವಾಗಿ ಲೇಔಟ್‌ ನಿರ್ಮಾಣ ಮಾಡುತ್ತಿದ್ದು ಅನುಮಾನ ಗಳಿಗೆ ಎಡೆಮಾಡಿಕೊಟ್ಟಿದೆ.

Advertisement

ಡಿ.ಕೆ.ಹಳ್ಳಿ ಫ್ಲಾಂಟೇಶನ್‌ಗೆ ಸೇರಿದ 15 ಎಕರೆ ಜಮೀನು ವಿವಿಧ ಸರ್ವೆ ನಂಬರ್‌ಗಳಲ್ಲಿ ಪಹಣಿ ದಾಖಲೆ ಇದೆ. ಇದು ಸಂಪೂರ್ಣ ಹಿಡುವಳಿ ಜಮೀನು ಆಗಿರುವುದರಿಂದ ಸಂಬಂಧಪಟ್ಟವರು ಸೂಕ್ತ ದಾಖಲೆಗಳೊಂದಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಯು.ರಶ್ಮಿ, ತಹಶೀಲ್ದಾರ್‌, ಬಂಗಾರಪೇಟೆ

ಚಂಡೀಗಡ್‌ನ‌ ಗೋಲ್ಡನ್‌ ಪ್ರಾಜೆಕ್ಟ್ ಲಿಮಿಟೆಡ್‌ಗೆ ಸೇರಿದ ಜಮೀನು ಎಲ್ಲಿದೆ ಎಂದು ನಮಗೆ ಗೊತ್ತಿಲ್ಲ. ಈ ಜಮೀ ನಿಗೆ ಸಂಬಂಧಪಟ್ಟವರು ಇದುವರೆಗೂ ಯಾರೂ ನಮ್ಮ ಬಳಿ ಬಂದು ಲೇಔಟ್‌ ನಿರ್ಮಾಣ ಮಾಡುತ್ತಿರುವ ಬಗ್ಗೆ ಆಗಲಿ, ಇ ಸ್ವತ್ತು ಖಾತೆ ಮಾಡಿಕೊಡಿ ಎಂದು ಕೇಳಿಲ್ಲ. ಗ್ರಾಪಂನ ಅನುಮತಿ ಪಡೆಯದೇ ಲೇಔಟ್‌ ಗಳು ನಿರ್ಮಾಣ ಮಾಡಿರುವ ಬಗ್ಗೆ ನಮ್ಮ ಗಮನಕ್ಕೆ ತಂದರೆ ಸೂಕ್ತ ಕ್ರಮಕ್ಕಾಗಿ ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮಕೈಗೊಳ್ಳಲಾಗುವುದು. ಭಾಸ್ಕರ್‌, ಪಿಡಿಒ, ಡಿ.ಕೆ.ಹಳ್ಳಿ ಗ್ರಾಪಂ

ಬಂಗಾರಪೇಟೆ ತಾಲೂಕಿನ ಡಿ.ಕೆ.ಹಳ್ಳಿ ಫ್ಲಾಂಟೇಶನ್‌ ಹಳೆಯ ಸರ್ವೆ ನಂ. 23ರಲ್ಲಿ ಚಂಡೀಗಡ್‌ನ‌ ಗೋಲ್ಡನ್‌ ಪ್ರಾಜೆಕ್ಟ್ ಲಿ.ಗೆ ಸೇರಿದ 17 ಎಕರೆ ಜಮೀನಿನಲ್ಲಿ ಎರಡು ಎಕರೆ ಜಮೀನು ನನ್ನ ಹೆಸರಿಗೆ ಜಿಪಿಎ ನೋಂದಣಿಯಾಗಿದೆ. ಈ ಬಗ್ಗೆ ಸರ್ವೆ ಅಧಿಕಾರಿಗಳ ಮೂಲಕ ಜಮೀನು ಪತ್ತೆಹಚ್ಚಿದ್ದು, ಈ ಜಮೀನಿನಲ್ಲಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಸುಳ್ಳು ದಾಖಲೆ ನಿರ್ಮಾಣ ಮಾಡಿಕೊಂಡು ಅಕ್ರಮ ಲೇ ಔಟ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ನ್ಯಾಯ ಸಿಗದೇ ಇರುವುದರಿಂದ ಜಿಲ್ಲಾಧಿ ಕಾರಿಗಳು, ತಹಶೀಲ್ದಾರ್‌ರು ಮಧ್ಯೆಪ್ರವೇ ಶಿಸಿ ಮೂಲ ದಾಖಲೆ ಪರಿಶೀಲಿಸಿ ನಮಗೆ ನ್ಯಾಯ ಒದಗಿಸಬೇಕು. ನರಸಿಂಹಪ್ಪ, ಚಂಡೀಗಡ್‌ನ‌ ಗೋಲ್ಡನ್‌ ಪ್ರಾಜೆಕ್ಟ್ ಲಿ.ನಿಂದ ಜಿಪಿಎ ಪಡೆದವರು

ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next