Advertisement

ಮತದಾರರ ಸೇರ್ಪಡೆಯಲ್ಲಿ ಅಕ್ರಮ: ಪರಿಶೀಲಿಸಿ

12:10 PM May 12, 2019 | Team Udayavani |

ಶ್ರೀರಂಗಪಟ್ಟಣ: ಒಂದು ವಾರ್ಡ್‌ಗೆ ಸೇರಿದ ಮತ್ತೂಂದು ವಾರ್ಡ್‌ ಮತದಾರರನ್ನು ಮತ ಪಟ್ಟಿಯಲ್ಲಿ ಸೇರಿಸಿ, ಅಭ್ಯರ್ಥಿಗಳೊಂದಿಗೆ ಶಾಮೀಲಾಗಿರುವ ಅಂಗನವಾಡಿ ಕಾರ್ಯಕರ್ತರು,ಪುರಸಭಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ತಹಶೀಲ್ದಾರ್‌ ನಾಗಪ್ರಶಾಂತ್‌ ಅವರನ್ನು ಒತ್ತಾಯಿಸಿದ್ದಾರೆ.

Advertisement

ವಾರ್ಡ್‌ ಮೀಸಲಾತಿ ಪ್ರಕಟವಾದ ಕೂಡಲೇ ಚುನಾವಣಾ ಅಭ್ಯರ್ಥಿಗಳು ತಮ್ಮ ನೆಂಟರಿಷ್ಟರು ಹಾಗೂ ಆಪ್ತರನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೊಂದು ವಾರ್ಡ್‌ನಲ್ಲಿದ್ದರೂ ತಾವು ಸ್ಪರ್ಧಿಸುವ ವಾರ್ಡ್‌ ಮತಪಟ್ಟಿಗೆ ಸೇರಿಸಿಕೊಂಡಿದ್ದಾರೆ. ಇವಕ್ಕೆಲ್ಲಾ ಪುರಸಭೆ ಅಧಿಕಾರಿಗಳೇ ಹೊಣೆಗಾರಿಕೆಯಾಗಿದ್ದು, ಮತದಾರರ ಪಟ್ಟಿ ಪರಿಶೀಲಿಸಿ, ಅಕ್ರಮವಾಗಿ ಸೇರ್ಪಡಿಸಿರುವ ಮತದಾರರ ಹೆಸರು ತೆಗೆದುಹಾಕಬೇಕು ಎಂದು ವಕೀಲ ರವೀಶ್‌ ತಹಶೀಲ್ದಾರ್‌ ಅವರಿಗೆ ಮನವಿ ಮಾಡಿದರು.

ಶ್ರೀರಂಗಪಟ್ಟಣ ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 19, 20ನೇ ವಾರ್ಡ್‌ಗಳಿಗೆ ಇತರೆ ವಾರ್ಡ್‌ಗಳಲ್ಲಿರುವ ಆಪ್ತರು ಹಾಗೂ ನೆಂಟರಿಷ್ಠರ ಹೆಸರು ಸೇರ್ಪಡಿಸಲಾಗಿದೆ. ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಹಾಗೂ ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ದೂರಿದ್ದಾರೆ.

16ನೇ ವಾರ್ಡ್‌ ಮತದಾರರನ್ನು 20ನೇ ವಾರ್ಡ್‌, 17ನೇ ವಾರ್ಡ್‌ ಮತದಾರರನ್ನು 19ಕ್ಕೆ, 23ನೇ ವಾರ್ಡ್‌ ಮತದಾರರನ್ನು 20ನೇ ವಾರ್ಡ್‌ಗೆ ಮೀಸಲಾತಿ ಪ್ರಕಟವಾದ ಬಳಿಕ 06, 10, 19, 20, 23ರ ವಾರ್ಡ್‌ಗಳಲ್ಲಿ ಸೇರಿಸಲಾಗಿದೆ ಎಂದು ಪುರಸಭಾ ಸದಸ್ಯ ಉಮಾಶಂಕರ್‌, ಗಂಜಾಂ ಸಲೀಂ ಸೇರಿದಂತೆ ಇತರರು ತಹಶೀಲ್ದಾರ್‌ ನಾಗ್‌ಪ್ರಶಾಂತ್‌ ಅವರಿಗೆ ಹೊಸ ಸೇರ್ಪಡೆಗೊಂಡ ಮತದಾರರ‌ ಪಟ್ಟಿಗಳನ್ನು ದಾಖಲೆ ಸಮೇತ ತೋರಿಸಿ ತಪ್ಪಿಸಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next