ಕನಕಪುರ: ನರೇಗಾ ಯೋಜನೆ ನಿಯಮ ಉಲ್ಲಂಘಿಸಿ, ನಾರಾಯಣಪುರ ಗ್ರಾಮ ಪಂಚಾಯ್ತಿಅಧಿಕಾರಿಗಳು ಚರಂಡಿ ಕಾಮಗಾರಿ ಮಾಡಿಸರ್ಕಾರದ ಹಣ ಪೋಲು ಮಾಡಿದ್ದಾರೆ ಎಂದು ನಾರಾಯಣಪುರ ಗ್ರಾಮದ ನಾಗರಾಜು, ಮಂಜುನಾಥ್ ಆರೋಪಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಕಸಬಾ ಹೋಬಳಿ ನಾರಾಯಣಪುರ ಗ್ರಾಮದಲ್ಲಿಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ)ಕಾಮಗಾರಿಯನ್ನು ಸದಸ್ಯರೊಬ್ಬರು ದುರುಪಯೋಗಪಡಿಸಿಕೊಂಡು ಕಳಪೆ ಕಾಮಗಾರಿ ಮಾಡುವ ಮೂಲಕ ಹಣ ದುರ್ಬಳಕೆ ಮಾಡಲಾಗಿದೆ ಎಂದು ದೂರಿದರು.
ನಿಯಮ ಉಲ್ಲಂಘನೆ: ನಾರಾಯಣಪುರ ಗ್ರಾಮ ಪಂಚಾಯ್ತಿ ಸದಸ್ಯ ರೇಣುಕಪ್ಪ ಎಂಬುವವರುಚರಂಡಿ ಮಾಡುವ ನೆಪದಲ್ಲಿ ಕೋಡಿಹಳ್ಳಿ ಮುಖ್ಯರಸ್ತೆಯ ಪಕ್ಕದಲ್ಲೇ ಚರಂಡಿ ಕಳಪೆ ಕಾಮಗಾರಿ ಮಾಡಿದ್ದಾರೆ. ಜೊತೆಗೆ ಲೋಕೋಪಯೋಗಿ ಇಲಾಖೆಯರಸ್ತೆ ಪಕ್ಕದಲ್ಲಿ ನರೇಗಾ ಯೋಜನೆಯಿಂದ ಚರಂಡಿಕಾಮಗಾರಿ ಮಾಡಲು ಅವಕಾಶವಿಲ್ಲದಿದ್ದರೂ, ಇಲ್ಲಿನರೇಗಾ ಯೋಜನೆಯನ್ನು ಬಳಸಿಕೊಂಡು ನಿಯಮಉಲ್ಲಂಘನೆ ಮಾಡಿದ್ದಾರೆ. ಈ ಆಕ್ರಮದಲ್ಲಿ ಗ್ರಾ.ಪಂ.ಎಂಜಿನಿಯರ್, ಅಭಿವೃದ್ಧಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕಾಮಗಾರಿ ಕೈಗೊಂಡಿರುವ ಗ್ರಾಪಂಸದಸ್ಯ ರೇಣುಕಪ್ಪ ಅವರು ಗ್ರಾಪಂ ಅಧಿಕಾರಿಗಳಿಗೆಸಬಂಧಿಕರು. ಹೀಗಾಗಿ ಅಧಿಕಾರಿಗಳು ಈ ಕಾಮಗಾರಿಗೆ ಬೆಂಬಲ ನೀಡಿದ್ದಾರೆ ಎಂದು ಅಪಾದಿಸಿದರು.
ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ: ಕಾಮಗಾರಿ ಕೈಗೊಂಡ ಆರಂಭದಲ್ಲೇ ಗ್ರಾಮ ಪಂಚಾಯ್ತಿ, ತಾಲೂಕುಪಂಚಾಯ್ತಿ ಅಧಿಕಾರಿಗಳಿಗೆ ಕಾಮಗಾರಿ ಸ್ಥಗಿತಗೊಳಿಸಿ,ಅನುದಾನ ತಡೆಹಿಡಿಯುವಂತೆ ಮನವಿ ಮಾಡಲಾಗಿತ್ತು. ಆದರೆ, ಅಧಿಕಾರಿಗಳು ಯಾವುದೇ ಕ್ರಮವನ್ನುಕೈಗೊಂಡಿಲ್ಲ. ಈಗಾಗಲೇ ಕಾಮಗಾರಿ ಪೂರ್ಣಗೊಂಡು 5 ಲಕ್ಷದವರೆಗೂ ಹಣ ಬಿಡುಗಡೆ ಮಾಡಿಕೊಂಡಿದ್ದಾರೆ. ಈ ಕೂಡಲೇ ಕಾಮಗಾರಿ ಪರಿಶೀಲಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಗ್ರ ತನಿಖೆ ನಡೆಸಿ: ಕಳೆದ ಮೂರು ತಿಂಗಳ ಹಿಂದೆ ನಾರಾಯಣಪುರ ಗ್ರಾಪಂ ಕರವಸೂಲಿಗಾರವೈರಮುಡಿ ತೆರಿಗೆ ವಸೂಲಿಯಲ್ಲಿ ಜನರಿಗೆ ಮತ್ತುಸರ್ಕಾರಕ್ಕೆ ವಂಚನೆ ಮಾಡಿದ್ದ ಈ ಸಂಬಂಧ ಸಮಗ್ರತನಿಖೆ ನಡೆಸಿ, ಇದರ ಹಿಂದಿರುವ ಅಧಿಕಾರಿಗಳವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನೆಪಮಾತ್ರಕ್ಕೆ ಕರವಸೂಲಿಗಾರನನ್ನು ಅಮಾನತು ಮಾಡಿತನಿಖೆಯನ್ನು ಕೈಬಿಟ್ಟಿದ್ದಾರೆ. ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಸರ್ಕಾರ ಮತ್ತು ಜನರಿಗೆ ಎಷ್ಟುಹಣ ವಂಚನೆ ಮಾಡಲಾಗಿದೆ ಎಂದು ಸಮಗ್ರವಾಗಿತನಿಖೆ ನಡೆಸಬೇಕಿತ್ತು. ಆದರೆ, ತೆರಿಗೆ ವಂಚನೆಪ್ರಕರಣದ ತನಿಖೆಯನ್ನು ಕೈ ಬಿಟ್ಟಿರುವುದು ಅಲ್ಲದೆ,ತೆರಿಗೆ ವಸೂಲಿಯಲ್ಲಿ ವಂಚನೆ ಮಾಡಿ ಅಮಾನತ್ತಾಗಿರುವ ವೈರಮುಡಿಯನ್ನು ಮತ್ತೆ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳಲು ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ. ತೆರಿಗೆ ವಂಚನೆ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ, ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲೋಕೋಪಯೋಗಿ ರಸ್ತೆಗೂ ಚರಂಡಿ ಕಾಮಗಾರಿಗೂಸಂಬಂಧವಿಲ್ಲ. ರಸ್ತೆ ಬದಿಯಲ್ಲಿ ನರೇಗಾಯೋಜನೆಯಲ್ಲಿ ಚರಂಡಿ ಮಾಡಬಾರದುಎಂಬ ನಿಯಮವೂ ಇಲ್ಲ. ಆದ್ಯತೆ ಮೇರೆಗೆ ನರೇಗಾ ನಿಯಮಗಳ ಅಡಿಯಲ್ಲೇ ಚರಂಡಿ
ನಿರ್ಮಾಣ ಮಾಡಲಾಗಿದೆ. ಎಂಜಿನಿಯರ್ ಕಾಮಗಾರಿಯನ್ನು ಪರಿಶೀಲನೆ ಮಾಡಿದ್ದಾರೆ. ಗುಣಮಟ್ಟದ ಕಾಮಗಾರಿಖಾತರಿಪಡಿಸಿಕೊಂಡೆ ಹಣ ಬಿಡುಗಡೆಮಾಡಲಾಗಿದೆ. ಚರಂಡಿ ಕಾಮಗಾರಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ.
– ಆಶಾ, ಪಿಡಿಒ, ನಾರಾಯಣಪುರ ಗ್ರಾಪಂ