Advertisement
ಜೆಡಿಎಸ್ ಮುಖಂಡ ಸಂಜೀವನ್ ಯಾಕಾಪುರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಕೃಷಿ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳಾದ ಕೃಷಿ ಹೊಂಡ ನಿರ್ಮಾಣ, ಕೃಷಿ ಭಾಗ್ಯ, ಎಸ್ ಸಿಪಿ, ಟಿಎಸ್‌ಪಿ ಯೋಜನೆ ಅಡಿ ರೈತರಿಗೆ ತಾಡಪತ್ರಿ ವಿತರಣೆ, ಸಿಂಕ್ಲರ್ ಪೈಪು ವಿತರಣೆ, ಕೃಷಿ ಯಂತ್ರೋಪರಣ, ಹಿಂಗಾರು ಮತ್ತು ಮುಂಗಾರು ಬಿತ್ತನೆ ಬೀಜಗಳ ವಿತರಣೆಯಲ್ಲಿ ಅನುದಾನದ ದುರ್ಬಳಕೆಯಾಗಿದ್ದು, ಈ ಕುರಿತು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
Related Articles
Advertisement
ಜೆಡಿಎಸ್ ಮುಖಂಡ ನಿಯಾಜ ಅಲಿ ಮಾತನಾಡಿ, ತಾಲೂಕಿನ ದೋಟಿಕೊಳ, ರುಸ್ತಂಪುರ, ಖುದಾವಂದಪುರ ಗ್ರಾಮಗಳಲ್ಲಿ 2018ರಲ್ಲಿ ಸುಜಲಾ 2 ಯೋಜನೆ ಅಡಿಯಲ್ಲಿ ಎಲ್ಲ ಹಂತದ ಕಾಮಗಾರಿಗಳ ಕುರಿತು ಜಿಪಿಆರ್ ಎಸ್ ಪೋಟೋಗಳ ಸಮೇತ ತನಿಖೆ ನಡೆಬೇಕು. ಸುಜಲಾ 2 ಯೋಜನೆಗೆ ಬಿಡುಗಡೆಯಾದ 18ಕೋಟಿ ರೂ. ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿವಿಧ ಬೇಡಿಕೆಗಳ ಮನವಿಪತ್ರವನ್ನು ತಹಶೀಲ್ದಾರ್ ಅಂಜುಮ ತಬಸುಮ, ಸೇಡಂ ಕೃಷಿ ಉಪ ಕಾರ್ಯದರ್ಶಿಗಳಿಗೆ ಸಲ್ಲಿಸಿದರು. ಮುಖಂಡರಾದ ಸುರೇಂದ್ರಕುಮಾರ ಕುಂಚಾವರಂ, ಗೌರಿಶಂಕರ ಸೂರವಾರ, ಶರಣಪ್ಪ ಮಾಳಗಿ, ವಿಷ್ಣುಕಾಂತ ಮೂಲಗೆ, ಹಣಮಂತ ಪೂಜಾರಿ, ರಾಹುಲ್ ಯಾಕಾಪುರ, ರವೀಂದ್ರ ಮಾಳಗಿ, ಕಲಾವತಿ ಕನಕಟ್ಟಿ, ನಾಗೀಂದ್ರಪ್ಪ ಗುರಂಪಳ್ಳಿ, ಅರವಿಂದ ಜೋತಗೊಂಡ, ಬಸವರಾಜ ಸಿರಸಿ, ಸನ್ನಿ ಜಾಬಶೆಟ್ಟಿ, ದವಲಪ್ಪ ಸುಣಗಾರ, ಕುಂಚಾವರಂ, ಚಿಮ್ಮನಚೋಡ, ಮಿರಿಯಾಣ, ಐನೋಳಿ, ದೇಗಲಮಡಿ, ಚಂದನಕೇರಾ, ಸುಲೇಪೇಟ, ಚಂದಾಪುರ ಇನ್ನಿತರ ಗ್ರಾಮಗಳಿಂದ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.