Advertisement
ಸುದ್ದಿಗಾರರ ಜತೆ ಮಾತನಾಡಿ, ಹತ್ತು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದರು ಎಂಬುದು ಸತ್ಯವಾಗಿದ್ದರೆ, ಕೇಂದ್ರ ಗುಪ್ತದಳದ ಗಮನಕ್ಕೆ ಬರಲಿಲ್ಲ. ಬಂಧಿತರು ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದರು. ಹೆಸರು ಬದಲಾಯಿಸಿಕೊಂಡಿದ್ದಾರೆ. ತನಿಖೆಯಲ್ಲಿ ಏನೆಲ್ಲ ಮಾಹಿತಿಗಳು ಹೊರಬರುತ್ತವೆ ಎಂಬುದನ್ನು ನೋಡಬೇಕು ಎಂದು ತಿಳಿಸಿದರು.
ಆನೇಕಲ್ ತಾಲೂಕಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ಥಾನ ಮೂಲದ ನಾಲ್ವರನ್ನು ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಸ್ಫೋಟಕ ಸಂಗತಿ ಎಂದರೆ ಹಿಂದೂಗಳ ಹೆಸರಿನಲ್ಲಿ ಈ ಕುಟುಂಬ ವಾಸ ಮಾಡುತ್ತಿದ್ದು, ಮನೆಯೊಳಗೆ ಮುಸ್ಲಿಂ ಧರ್ಮಾಚರಣೆ ಮಾಡಿಕೊಂಡಿತ್ತು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ.
Related Articles
Advertisement
ಆನೇಕಲ್ ತಾಲೂಕಿನ ಜಿಗಣಿ ಸಮೀಪದ ಖಾಸಗಿ ಲೇಔಟ್‌ನಲ್ಲಿನ ವಿಲ್ಲಾವೊಂದರಲ್ಲಿ ಕಳೆದ 6 ವರ್ಷದಿಂದ ಪಾಕಿಸ್ಥಾನ ಮೂಲದ ಕುಟುಂಬವೊಂದು ಹಿಂದೂಗಳ ಹೆಸರಿನಲ್ಲಿ ಗುರುತಿನ ದಾಖಲೆ ಇಟ್ಟುಕೊಂಡು ವಾಸವಾಗಿತ್ತು. ಯಾರಿಗೂ ಅನು ಮಾನ ಬಾರ ದಂತೆ ಈ ಕುಟುಂಬ ನೆಲೆ ಸಿ ತ್ತು.
ದಾಖಲೆಯಲ್ಲಿ ಹಿಂದೂ; ಮನೆಯಲ್ಲಿ ಮುಸ್ಲಿಂ ಬರಹ!ರವಿವಾರ ಸಂಜೆ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ ಜಿಗಣಿ ಪೊಲೀಸರ ತಂಡ ಈ ಮನೆ ಮೇಲೆ ದಾಳಿ ನಡೆಸಿತ್ತು. ದಾಖಲೆಗಳಲ್ಲಿ ಹಿಂದೂ ಹೆಸರು ಇದ್ದರೂ, ಮನೆಯ ಒಳಭಾಗದಲ್ಲಿ ಮುಸ್ಲಿಂ ಸಂಬಂಧಿತ ಫೋಟೋ, ಪುಸ್ತಕ, ಬರಹ ಪತ್ತೆಯಾಗಿವೆ. ವಿಚಾರಣೆ ವೇಳೆ ಈ ಮನೆಯಲ್ಲಿದ್ದವರೆಲ್ಲ ಪಾಕಿಸ್ಥಾನ ಮೂಲದವರು ಎನ್ನುವುದು ಗೊತ್ತಾಗಿದೆ. ಈ ಸಂಬಂಧ ಜಿಗಣಿ ಠಾಣೆಯಲ್ಲಿ ಸುಮೊಟೋ ಪ್ರಕರಣ ದಾಖಲಾಗಿದ್ದು, ಬಂಧಿತರ ವಿಚಾರಣೆ ನಡೆಯುತ್ತಿದೆ. ರಶೀದ್ ಇಲ್ಲಿ ಆಗಿದ್ದ ಶಂಕರ್ ಶರ್ಮಾ!
ಈ ಪ್ರಕರಣದ ಪ್ರಮುಖ ಆರೋಪಿ ರಶೀದ್ ಅಲಿ ಸಿದ್ದಿಕಿ ಆಗಿದ್ದು, ಈತ ಶಂಕರ್ ಶರ್ಮಾ ಎನ್ನುವ ಹೆಸರಿನಲ್ಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದ. ಈತನ ಪತ್ನಿ ಆಯೇಷಾ, ಆಶಾ ಶರ್ಮಾ ಹೆಸರಿನಲ್ಲಿ, ಅತ್ತೆ ರುಬಿನಾ ರಾಣಿ ಶರ್ಮಾ ಹೆಸರಿನಲ್ಲಿ, ಮಾವ ಮೊಹಮ್ಮದ್ ಯೂನಸ್, ರಾಮ್ ಬಾಬು ಶರ್ಮಾ ಹೆಸರಿನಲ್ಲಿ ಗುರುತಿನ ಚೀಟಿ ಮಾಡಿಸಿಕೊಂಡಿದ್ದರು. ಮೆಹದಿ ಫೌಂಡೇಶನ್ ಕಡೆಯಿಂದ ಈ ಕುಟುಂಬಕ್ಕೆ ಹಣಕಾಸಿನ ನೆರವೂ ಸಿಗುತ್ತಿರುವುದು ಬೆಳಕಿಗೆ ಬಂದಿದೆ. ಸಿಕ್ಕಿ ಬಿದ್ದಿದ್ದು ಹೇಗೆಂದರೆ?
ಇವರ ಸಂಬಂಧಿಕರಿಬ್ಬರು ಇತ್ತೀಚೆಗಷ್ಟೇ ಚೆನ್ನೈನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ ಹುಡುಕಾಟ ನಡೆಸಿ ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಇವರಿಗೆ ಗುರುತಿನ ಚೀಟಿಗಳನ್ನು ಮಾಡಿಸಿಕೊಟ್ಟವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ದೇಶದೊಳಗೆ ಅಕ್ರಮವಾಗಿ ನುಸುಳಿ ವಾಸ ಸೇರಿ ಪಾಸ್‌ಪೋರ್ಟ್ ಆ್ಯಕ್ಟ್‌ನಡಿ ಜಿಗಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಾಲ್ವರ ಬಂಧನದ ಬೆನ್ನಲ್ಲೇ ವಿದೇಶಿಗರ ನೋಂದಣಿ ಕಚೇರಿ, ಗುಪ್ತಚರ, ಕೇಂದ್ರೀಯ ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.