Advertisement

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಘಟಕಕ್ಕೆ ಪೋಲೀಸರ ದಾಳಿ : 1,92,000 ಮೌಲ್ಯದ ಸೊತ್ತು ವಶ

12:12 PM Feb 07, 2022 | Team Udayavani |

ಮಂಗಳೂರು:  ಇಲ್ಲಿನ ಪೆರ್ಮನ್ನೂರು ಗ್ರಾಮದ ಚೆಂಬುಗುಡ ಪ್ರದೇಶದ ಮನೆಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಘಟಕಕ್ಕೆ ಪೊಲೀಸರು ದಾಳಿ ನಡೆಸಿರುವ ಘಟನೆ ನಡೆದಿದೆ.

Advertisement

ಫ್ರಾನ್ಸಿಸ್ ಎಂಬುವವರು ತಮ್ಮ ಮನೆಗೆ ತಾಗಿಕೊಂಡು ತಗಡು ಶೀಟಿನಿಂದ ನಿರ್ಮಿಸಿದ ಕೋಣೆಯಲ್ಲಿ ಆಡುಗೆ ಅನಿಲದ ಸಿಲಿಂಡರ್ ನಿಂದ ರೆಗ್ಯುಲೇಟರ್ ಮುಖಾಂತರ ಗ್ಯಾಸ್ ತುಂಬಿಸಿ ಮಾರಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದಾಗ ಆರೋಪಿ ಗ್ಯಾಸ್ ಅಕ್ರಮವಾಗಿ ರೀಫಿಲ್ಲಿಂಗ್ ಮಾಡುತ್ತಿದ್ದು ಪೊಲೀಸರನ್ನು ಕಂಡೊಡನೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ದಾಳಿ ವೇಳೆ ಸ್ಥಳದಲ್ಲಿ ಹಲವು ಕಂಪೆನಿಗೆ ಸೇರಿದ ಡೊಮೆಸ್ಮಿಕ್ ಹಾಗೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸೇರಿ ಒಟ್ಟು 128 ಸಿಲಿಂಡರ್ ಸೇರಿ 1,92,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Advertisement

ಇದನ್ನೂ ಓದಿ : ತೀರ್ಥಹಳ್ಳಿ: ಕೇಸರಿ ಶಾಲು ಧರಿಸಿ ಕಾಲೇಜಿಗೆ ಪ್ರವೇಶಿಸಲು ಅನುಮತಿ ನೀಡದಿದ್ದಕ್ಕೆ ಪ್ರತಿಭಟನೆ

ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗರವರ ಮಾರ್ಗದರ್ಶನದಲ್ಲಿ ಮಂಗಳೂರು ತಾಲೂಕು ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂದೀಪ್, ಜಿ.ಎಸ್.ಪೊಲೀಸ್ ಉಪ – ನಿರೀಕ್ಷಕ ಶಿವಕುಮಾರ್. ಕೆ , ಹಾಗೂ ಸಿಬ್ಬಂದಿಗಳಾದ ಮಹೇಶ, ರೆಜಿ, ಉದಯ, ಸಾಗರ್ ಮತ್ತು ಉಳ್ಳಾಲ ವಲಯದ ಆಹಾರ ನಿರೀಕ್ಷಕ ಹಾರಿಸ್, ಪ್ರಭಾರ ಆಹಾರ ನಿರೀಕ್ಷಕ ರೇಖ ಹಾಗೂ ಅವರ ತಂಡ ಕಾರ್ಯಾಚರಣೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next