Advertisement

ಅಕ್ರಮ ಡ್ರಗ್ಸ್‌ ಸಂಗ್ರಹ ಆರೋಪ : ಆಸ್ಟ್ರೇಲಿಯನ್‌ ಪ್ರಜೆ ಬಂಧನ

07:46 PM Nov 14, 2020 | sudhir |

ಮುಂಬೈ: ಅಕ್ರಮ ಡ್ರಗ್ಸ್‌ ಸಂಗ್ರಹಿಸಿದ ಆರೋಪ ಹಿನ್ನೆಲೆಯಲ್ಲಿ ಮಾದಕ ವಸ್ತು ನಿಯಂತ್ರಣ ಮಂಡಳಿ ಆಸ್ಟ್ರೇಲಿಯಾದ ಆರ್ಕಿಟೆಕ್ಟ್‌ನನ್ನು ಬಂಧಿಸಿದೆ.

Advertisement

ಪೌಲ್‌ ಬಾರ್ಟೆಲ್‌ ಬಂಧಿತ ಆರೋಪಿ. ಬಾರ್ಟೆಲ್‌ನ ಸಾಂತಾಕ್ರೂಸ್‌ ಫ್ಲ್ಯಾಟ್‌ನಲ್ಲಿ ಈತ ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ. ಆದರೆ, ಡ್ರಗ್ಸ್‌ ಕಳ್ಳಸಾಗಾಟದ ಬಗ್ಗೆ ಯಾವುದೇ ಮಾಹಿತಿಗಳು ಎನ್‌ಸಿಬಿಗೆ ಲಭ್ಯವಾಗಿಲ್ಲ.

ವಾಟ್ಸ್ ಆಪ್‌ ಪರಿಶೀಲಿಸಿದಾಗ, ಹಲವರೊಂದಿಗೆ ಡ್ರಗ್ಸ್‌ ಕುರಿತು ಈತ ಸಂಭಾಷಣೆ ನಡೆಸಿರುವುದು ತಿಳಿದುಬಂದಿದೆ.
“ಡ್ರಗ್ಸ್‌ ದಂಧೆ ಆರೋಪದಲ್ಲಿ ಕಳೆದವಾರ ಬಂಧಿತನಾದ ದಕ್ಷಿಣ ಆಫ್ರಿಕ ಮೂಲದ ಅಜಿಸಿಲಾವೋಸ್‌ ಡೆಮೆಟ್ರಿಯಾಡ್ಸ್‌ ಜತೆ ಪೌಲ್‌ ಬಾರ್ಟೆಲ್‌ ನಿರಂತರ ಸಂಪರ್ಕ ಹೊಂದಿದ್ದಾನೆ’ ಎಂದು ಎನ್‌ಸಿಬಿ ವಲಯ ನಿರ್ದೇಶಕ ಸಮೀರ್‌ ವಾಂಖೆಡೆ ತಿಳಿಸಿದ್ದಾರೆ.

ಇದನ್ನೂ ಓದಿ:ಹೊಸಗುಡ್ಡದಹಳ್ಳಿ ರಾಸಾಯನಿಕ ಗೋದಾಮಿನಲ್ಲಿ ಬೆಂಕಿ ಪ್ರಕರಣ: ಗಂಭೀರ ಗಾಯಗೊಂಡ ಕಾರ್ಮಿಕ ಸಾವು

ಕಳೆದ 14 ದಿನಗಳಲ್ಲಿ ಎನ್‌ಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತನಾಗಿರುವ 25ನೇ ಆರೋಪಿ ಪೌಲ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next