Advertisement

ತರಕಾರಿ ಸಾಗಿಸುವ ವಾಹನದಲ್ಲಿ ಅಕ್ರಮವಾಗಿ ಗೋ ಸಾಗಾಟ: ಮಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ

11:12 AM Oct 25, 2020 | keerthan |

ಮಂಗಳೂರು: ತರಕಾರಿ ಸಾಗಿಸುವ ವಾಹನದಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದವರನ್ನು ರವಿವಾರ ಬೆಳಿಗ್ಗೆ ಮಂಗಳೂರು ಪೊಲೀಸರು ತಡೆದಿದ್ದು, ವಾಹನವನ್ನು ವಶಕ್ಕೆ ಪಡೆದಿದ್ದಾರೆ.

Advertisement

ಭಜರಂಗ ದಳದ ಕಾರ್ಯಕರ್ತರು ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಕಾರ್ಯಚಾರಣೆ ನಡೆಸಿದ್ದು, ಮಂಗಳೂರಿನ ಪಂಪವೆಲ್ ಬಳಿ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಅಕ್ರಮ ಗೋ ಸಾಗಾಟ ನಡೆಸುತ್ತಿರುವುದು ಪತ್ತೆಯಾಗಿದೆ.

ಪಿಕಪ್ ವಾಹನದಲ್ಲಿ ಗೋ ಸಾಗಾಟ ಮಾಡುತ್ತಿದ್ದು, ತರಕಾರಿ ಸಾಗಾಟ ವಾಹನದಂತೆ ಕಾಣಲು ಮೇಲ್ಗಡೆ ಪ್ಲಾಸ್ಟಿಕ್ ಕ್ರೇಟ್ ಗಳನ್ನು ಇರಿಸಿದ್ದರು.

ವಾಹನದಲ್ಲಿ 4 ಕರು ಮತ್ತು 8 ದನಗಳ ಸಹಿತ ಒಟ್ಟು 12 ಜಾನುವಾರುಗಳು ಇದ್ದವು. ಇವುಗಳನ್ನು ಬಂಟ್ವಾಳ ಕಡೆಯಿಂದ ಸಾಗಿಸಲಾಗುತ್ತಿತ್ತು. ಕಂಕನಾಡಿ ನಗರ ಠಾಣೆ ಪೊಲೀಸರು ಪಂಪ್ವೆಲ್ ಸಮೀಪದ ಉಜ್ಜೋಡಿಯಲ್ಲಿ ವಾಹನವನ್ನು ತಡೆದು ವಶಕ್ಕೆ  ಪಡೆದು ಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

ಇದನ್ನೂ ಓದಿ:ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ

ಈ ಹಿಂದೆಯೂ ಹಾಲಿನ ವಾಹನ, ಮೀನು ಸಾಗಾಟ ವಾಹನದಲ್ಲಿ ಗೋ ಸಾಗಾಟ, ಗೋ ಮಾಂಸ ಸಾಗಾಟ ನಡೆಸುತ್ತಿದ್ದ ವಾಹನಗಳನ್ನು ಮಂಗಳೂರು ಪೊಲೀಸರು ತಡೆದು ವಶಕ್ಕೆ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next