Advertisement

ದಲಿತರ ಮೀಸಲು ಭೂಮಿಯಲ್ಲಿ ಅಕ್ರಮ ಕಟ್ಟಡ:  ದಸಂಸ ಎಚ್ಚರಿಕೆ

06:15 AM Jun 26, 2018 | |

ಮಲ್ಪೆ: ಬ್ರಿಟಿಷರ ಆಡಳಿತ ಕಾಲದಿಂದಲೂ ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಭೂಮಿಯನ್ನು ಜಿಲ್ಲಾಡಳಿತ ಏಕಾಏಕಿ ಅತಿಕ್ರಮಣ ಮಾಡಿ ಅನಧಿಕೃತವಾಗಿ ದಿ| ದೇವರಾಜ್‌ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ನಿರ್ಮಿಸುತ್ತಿರುವುದನ್ನು ತತ್‌ಕ್ಷಣ ನಿಲ್ಲಿಸದಿದ್ದಲ್ಲಿ ಜಿಲ್ಲಾಡಳಿತದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಉಡುಪಿಯ ಪ್ರಧಾನ ಸಂಚಾಲಕ ಜಯನ್‌ ಮಲ್ಪೆ ಎಚ್ಚರಿಕೆ ನೀಡಿದ್ದಾರೆ.

Advertisement

ಮೂಡನಿಡಂಬೂರು ಗ್ರಾಮದ ಬನ್ನಂಜೆಯಲ್ಲಿರುವ ಸರ್ವೆ ನಂ. 57-ಎಡಬ್ಲೂ$Â2ಪಿಐರಲ್ಲಿ ಸುಮಾರು 72 ಸೆಂಟ್ಸ್‌ ಜಾಗವನ್ನು ಪರಿಶಿಷ್ಟ ಜಾತಿಯ ಶಾಲೆ ಹಾಗೂ ವಸತಿ ನಿಲಯಕ್ಕಾಗಿ ಕಳೆದ 85 ವರ್ಷಗಳಿಂದಲೂ ಸರಕಾರ ಕಾದಿರಿಸಿಕೊಂಡು ಬಂದಿದ್ದು, ಇದೀಗ ಜಿಲ್ಲಾಡಳಿತ ಏಕಾಏಕಿ ಹಿಂದುಳಿದ ವರ್ಗದ ಹಾಸ್ಟೆಲ್‌ ನಿರ್ಮಿಸಲು ಕಟ್ಟಡದ ಕಾಮಗಾರಿಯನ್ನು ಪ್ರಾರಂಭಿಸುವುದು ಇಡೀ ಜಿಲ್ಲೆಯ ದಲಿತ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ.

ಈ ಹಿಂದೆ ಇದೇ ಸ್ಥಳದಲ್ಲಿ ಜಿಲ್ಲಾ ಪಂಚಾಯತ್‌ ನೂತನ ಕಟ್ಟಡಕ್ಕೆ ಶಂಕು ಸ್ಥಾಪನೆ ನಡೆಸಿದ್ದರು. ಆದರೆ ಈ ಜಾಗ ದಲಿತರ ಶೈಕ್ಷಣಿಕ ಅಭಿವೃದ್ಧಿಗಾಗಿ ಪರಂಬೋಕು ನೀಡಿರುವುದನ್ನು ತಿಳಿದ ಆಗಿನ ಜಿಲ್ಲಾಧಿಕಾರಿ ಗಂಗಾರಾಮ್‌ ಬಡೇರಿಯ ಜಿಲ್ಲಾ ಪಂಚಾಯತ್‌ ಕಟ್ಟಡಕ್ಕೆ ತಡೆಯೊಡ್ಡಿದ್ದರು. ಬಳಿಕ 2005ರಲ್ಲಿ ದಿ. ದೇವರಾಜ್‌ ಅರಸು ಭವನ ನಿರ್ಮಿಸಲು ಕಟ್ಟಡಕ್ಕೆ ಪಂಚಾಂಗಕ್ಕಾಗಿ ಪಿಲ್ಲರ್‌ಗಳನ್ನು ನಿರ್ಮಿಸಿದ್ದರು. ಈ ವಿಷಯವನ್ನು ತಿಳಿದ ದಲಿತ ಸಂಘರ್ಷ ಸಮಿತಿ ಆಗಿನ ಜಿಲ್ಲಾಧಿಕಾರಿ ಶ್ಯಾಮ್‌ ಭಟ್‌ ಅವರ ಗಮನಕ್ಕೆ ತಂದಿದ್ದಾಗಲೂ ಅರಸು ಭವನದ ಕಾಮಗಾರಿಯನ್ನು ತೆರವುಗೊಳಿಸಿದ್ದರು. ಇದೀಗ ಈ ಸ್ಥಳದಲ್ಲಿ ಹಂಗಾಮಿಯಾಗಿ ಹಿಂದುಳಿದ ವರ್ಗದ ಬಾಲಕರ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ ಇದೇ ಎಂಬ ಏಕೈಕ ಕಾರಣಕ್ಕೆ ಇದರ ಸುತ್ತಮುತ್ತಲಿನ ಜಾಗದಲ್ಲಿ ಆತಿಕ್ರಮಿಸಿಕೊಂಡು ವಿದ್ಯಾರ್ಥಿ ನಿಲಯಕ್ಕೆ ಕಟ್ಟಡ ನಿರ್ಮಿಸುತ್ತಿರುವುದಕ್ಕೆ ದಸಂಸ ತೀವ್ರವಾಗಿ ಆಕ್ಷೇಪಿಸಿದೆ.

ಜಿಲ್ಲಾಡಳಿತ ಇಡೀ ದಲಿತ ಸಮಾಜಕ್ಕೆ ಮಾಡಿದ ದೌರ್ಜನ್ಯವನ್ನು ಅರ್ಥೈಸಿಕೊಂಡು ತಕ್ಷಣ ಈ ಜಾಗದಿಂದ ಅಕ್ರಮವಾಗಿ ನಿರ್ಮಿಸ ಹೊರಟಿರುವ ಹಾಸ್ಟೆಲ್‌ ಕಟ್ಟಡವನ್ನು ತೆರವುಗೊಳಿಸದಿದ್ದಲ್ಲಿ ಜಿಲ್ಲಾಡಳಿತದ ದಬ್ಟಾಳಿಕೆಯನ್ನು ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ದಸಂಸ ಪ್ರಧಾನ ಸಂಘಟನಾ ಸಂಚಾಲಕರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ದಲಿತ ಮುಖಂಡರಾದ ಸುಂದರ ಕಪ್ಪೆಟ್ಟು, ಸುಂದರ ಗುಜ್ಜರ್‌ಬೆಟ್ಟು, ಅಂಬೇಡ್ಕರ್‌ ಯುವ ಸೇನೆಯ ಅಧ್ಯಕ್ಷ ಹರೀಶ್‌ ಸಾಲ್ಯಾನ್‌, ಯುವರಾಜ್‌ ಪುತ್ತೂರು, ಗಣೇಶ್‌ ನೆರ್ಗಿ,ಸಂತೋಷ್‌ ಕಪ್ಪೆಟ್ಟು,ಶಾಲೆಯಾಗಿದ್ದ  ಸ್ಥಳ ಮಂಜುನಾಥ್‌ ಎಚ್ಚರಿಕೆ ನೀಡಿದ್ದಾರೆ.

ಶಾಲೆಯಾಗಿದ್ದ  ಸ್ಥಳ
1932ರಿಂದ ಬನ್ನಂಜೆ ಪರಿಶಿಷ್ಟ ಜಾತಿಯ ಕಾಲನಿ ಸಮೀಪ ಸೋಗೆ ಮಡಲಿನ ತಟ್ಟಿ ಹಾಕಿ ರಾಮಚಂದ್ರ ಮಾಸ್ತರ್‌ 1,2,3 ತರಗತಿಯ ಇಬ್ಬರು ಅಧ್ಯಾಪಕರಿಂದ ಸುಮಾರು 25 ಮಂದಿ ವಿದ್ಯಾರ್ಥಿಗಳಿದ್ದ ಶಾಲೆಯನ್ನು ನಡೆಸುತ್ತಿದ್ದರು. 1944ರಲ್ಲಿ ಇದೇ ಶಾಲೆಯಲ್ಲಿ ಖಾಸಗಿ ವಿದ್ಯಾರ್ಥಿ ನಿಲಯ ಪ್ರಾರಂಭಿಸಿದ ರಾಮಚಂದ್ರ ಮಾಸ್ತರ್‌, ಇದೇ ವರ್ಷ ದ.ಕ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಬಿಟ್ಟು ಕೊಟ್ಟಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next