Advertisement
ತಾಲೂಕಿನ ಚನ್ನಹಳ್ಳಿ ಮತ್ತು ಟಿ-ಅಗ್ರಹಾರ ಗ್ರಾಮದಲ್ಲಿ ತಾಲೂಕು ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ದೀನದಯಾಳ್ ಪಂಡಿತ್ ಜನ್ಮ ಶತಾಬ್ಧಿ ವರ್ಷಾಚರಣೆ ವಿಸ್ತಾರಕರ ಸಭೆಯಲ್ಲಿ ಸಸಿಯನ್ನು ನಡೆಯುವುದರ ಮೂಲಕ ಚಾಲನೆ ನೀಡಿ ಹಾಗೂ ತಾಲೂಕು ಬಿಜೆಪಿ ರೈತಮೊರ್ಚಾ ಅದ್ಯಕ್ಷ ಟಿ.ಅಗ್ರಹಾರ ರಾಜಣ್ಣ ನಿವಾಸದಲ್ಲಿ ಭೋಜನ ಸ್ವೀಕರಿಸಿ ಮಾತನಾಡಿದ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಡಿಐಜಿಪಿ ರೂಪಾ ಅವರ ಹೇಳಿಕೆ 100ರಷ್ಟು ಸತ್ಯವಾಗಿದೆ,
Related Articles
Advertisement
ಎತ್ತಿನ ಹೊಳೆ ಯೋಜನೆಯನ್ನು ಜಾರಿಗೆ ತಂದು ಅಣೇಕಟ್ಟು ಕಟ್ಟದೆ ಪೈಪ್ ಲೈನ್ ಅಳವಡಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕೇವಲ ಅವಧಿಯ ಒಳಗೆ ಎತ್ತಿನ ಹೊಳೆ ಯೋಜನೆ ಜಾರಿಯಾಗುತ್ತದೆ ಎಂದು ಹೇಳುತ್ತಾರೆ. ಈಗ ಇನ್ನೂ 2 ವರ್ಷ ಕಾಲಾವಧಿಯಾಗುತ್ತದೆ ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಈ ಯೋಜನೆಯಿಂದ ಕೋಟ್ಯಾಂತರ ರೂಪಾಯಿ ಹಣ ಕಳ್ಳಕಾಕರ ಪಾಲಾಗುತ್ತಿದೆ. ಎತ್ತಿನ ಹೊಳೆ ಯೋಜನೆಯು ಕೇವಲ ಚುನಾವಣಾ ಗಿಮಿಕ್ಸ್ ಆಗಿದೆ ಎಂದರು.
ಹೆಬ್ಟಾಳ ಶಾಸಕ ವೈ.ಎ.ನಾರಾಯಣಸ್ವಾಮಿ ಮಾತನಾಡಿ ಕೇಂದ್ರ ಬಿಜೆಪಿ ಸರ್ಕಾರವು ಬಡವರಿಗೆ ಉಜ್ವಲಯೋಜನೆಯಡಿ ಉಚಿತ ಗ್ಯಾಸ್‌ಸಂಪರ್ಕ ಕಲ್ಪಿ$ಸುತ್ತಿದ್ದು ತಾಲೂಕಿನ ಸುಮಾರು 6 ಸಾವಿರ ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಗರ್ಭಿಣಿಯರಿಗೆ ಮಾಸಿಕ 6 ಸಾವಿರ ರೂ, ಹೆರಿಗೆ ನಂತರ 6 ತಿಂಗಳವರೆಗೆ ಹಾರೈಕೆಗಾಗಿ ಧನಸಹಾಯ ಮಾಡುವ ಯೋಜನೆಯನ್ನು ಜಾರಿಗೆ ತರಲಾಗಿದೆ.
ಬೇಟಿ ಪಡಾವೋ ಕಾರ್ಯಕ್ರಮದಡಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಎಸ್‌ಎಸ್‌ಎ ಮತ್ತು ಆರ್‌ಎಂಎಸ್‌ಎ ಯೋಜನೆಗಳಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಫಸಲ್‌ಬಿಮಾ ಯೋಜನೆಯಡಿಯಲ್ಲಿ ರೈತರ ಬೆಳೆಗಳು ಶೇ.33 ರಷ್ಟು ಹಾನಿಯೊಳಗಾದರೂ ವಿಮೆ ಸೌಲಭ್ಯ ನೀಡುವ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ರಾಜಣ್ಣ, ರಾಜ್ಯ ಬಿಜೆಪಿ ಮುಖಂಡ ಎಂ.ನಾರಾಯಣಗೌಡ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಎಂ.ರವಿಕುಮಾರ್, ವಿಸ್ತಾರಕ್ ಪ್ರಭಾರಿ ರಘುನಾಥ್, ಭೂ ನ್ಯಾಯಮಂಡಳಿ ಮಾಜಿ ಸದಸ್ಯ ಡಿ.ಆರ್.ನಾರಾಯಣಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ನಾಗರಾಜ್ ಗೌಡ, ಉಪಾಧ್ಯಕ್ಷ ಕೆ.ಸಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಬೊಮ್ಮವಾರ ಸುನೀಲ್,
ಚನ್ನಕೇಶವ, ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಟಿ.ಅಗ್ರಹಾರ ರಾಜಣ್ಣ, ಉಪಾಧ್ಯಕ್ಷ ಗೋಖರೆ ಜಿ.ಎನ್.ಗೋಪಾಲ್, ಜಿಲ್ಲಾ ಸಂಚಾಲಕ ಎಸ್.ರಮೇಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಆರ್.ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಚನ್ನರಾಯಪಟ್ಟಣ ಶಕ್ತಿ ಕೇಂದ್ರದ ಅಧ್ಯಕ್ಷ ರಾಮಾಂಜಿನೇಯ, ಗ್ರಾಪಂ ಮಾಜಿ ಅಧ್ಯಕ್ಷ ರಾಧಕೃಷ್ಣ, ಮತ್ತಿತರರು ಇದ್ದರು.
ಟಿ-ಅಗ್ರಹಾರ ಗ್ರಾಮದ ತಾಲೂಕು ರೈತ ಮೋರ್ಚಾ ಅಧ್ಯಕ್ಷ ರಾಜಣ್ಣ ನಿವಾಸದಲ್ಲಿ ಮಧ್ಯಾಹ್ನದ ಊಟದಲ್ಲಿ ಸೊಪ್ಪಿನ ಸಾರು ಮತ್ತು ಮುದ್ದೆ ಊಟವನ್ನು ಸವಿದರು.ಚನ್ನಹಳ್ಳಿ ಗ್ರಾಮಕ್ಕೆ ಹೋಗುವ ಮೊದಲು ದೇವನಹಳ್ಳಿ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಕಾರ್ಯಕರ್ತರಿಂದ ಹಾರ ಹಾಕಿ ಸ್ವಾಗತಿಸಿದರು.