Advertisement

ಕೃಷಿ ಭೂಮಿ ಪೋಡಿ ಸರಳೀಕರಣಕ್ಕೆ ಆಗ್ರಹ

03:27 PM Apr 18, 2022 | Team Udayavani |

ಚನ್ನರಾಯಪಟ್ಟಣ: ರಾಜ್ಯ ಸರ್ಕಾರ ಕೃಷಿ ಭೂಮಿ ದುರಸ್ತಿ(ಪೋಡಿಖಾತೆ)ಯನ್ನು ಸರಳೀಕರಣ ಮಾಡುವ ಮೂಲಕ ರೈತರು ಕಂದಾಯ ಇಲಾಖೆಗೆ ಅಲೆಯುವುದ ತಪ್ಪಿಸಬೇಕು ಎಂದು ಶಾಸಕ ಸಿ.ಎನ್‌ .ಬಾಲಕೃಷ್ಣ ಒತ್ತಾಯಿಸಿರು.

Advertisement

ತಾಲೂಕಿನ ಬರಾಳು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶತಮಾನಗಳಿಂದಲೂ ಸಾವಿರಾರು ಮಂದಿ ಕೃಷಿಕರು ತಮ್ಮ ಭೂಮಿಯನ್ನು ದುರಸ್ತಿ ಮಾಡಿಸಿಕೊಂಡಿಲ್ಲ ಇದಕ್ಕೆ ಕೈ ಹಾಕುವುದು ಹುತ್ತಕ್ಕೆ ಕೈ ಹಾಕಿದಂತೆ ಎಂಬ ಮನೋಭಾವ ರೈತರಲ್ಲಿ ಮೂಡಿದೆ, ಇದನ್ನು ಹೋಗಲಾಡಿಸಲು ಕಂದಾಯ ಇಲಾಖೆ ಮುಂದಾಗಬೇಕು ಎಂದು ಹೇಳಿದರು.

ಭೂಮಿ ದುರಸ್ತಿ ದುಬಾರಿ: ತಲೆ ತಲಾಂತರದಿಂದ ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿರುವ ರೈತರು, ತಮ್ಮ ಭೂಮಿ ಪರಭಾರೆ ಮಾಡಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಭೂಮಿ ಕೊಳ್ಳುವವರು ದುರಸ್ತಿ ಕೇಳುತ್ತಾರೆ. ಇದನ್ನು ಮಾಡಿಸಲು ಸಾಕಷ್ಟು ಹಣ ವೆಚ್ಚವಾಗಲಿದೆ ಎಂದು ಹೇಳಿ ರೈತರಿಂದ ಕಡಿಮೆ ಬೆಲೆಗೆ ಭೂಮಿ ಖರೀದಿ ಸುವವರೂ ಇದ್ದಾರೆ. ದುರಸ್ತಿ ಸರಳೀಕರಣ ಮಾಡಿ ದರೆ ರೈತರಿಗೆ ಸಹಕಾರ ಆಗಲಿದೆ ಎಂದು ತಿಳಿಸಿದರು.

ಅಭಿವೃದ್ಧಿ ಕಾಮಗಾರಿ ಶೀಘ್ರ: ರೈತರಿಗೆ ನಿರಂತರವಾಗಿ ವಿದ್ಯುತ್‌ ಪೂರೈಸಲು ಕಾಂತರಾಜಪುರ ವ್ಯಾಪ್ತಿಯ ಶನಿದೇವರ ದೇಗುಲದ ಬಳಿ ವಿದ್ಯುತ್‌ ಉಪಕೇಂದ್ರ ತೆರೆಯಲಾಗುವುದು. ಬಹು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮುಖ್ಯ ರಸ್ತೆಯಿಂದ ಬರಾಳು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಮತ್ತು ಡಾಂಬರೀಕರಣ ಮಾಡಲಾಗುವುದು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇನ್ನೆರಡು ತಿಂಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

128 ಮಂದಿಗೆ ಆದೇಶ ಪತ್ರ ವಿತರಣೆ: ಶ್ರವಣಬೆಳಗೊಳ ಹೋಬಳಿ, ಕಸಬಾ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿನ ವೃದ್ಧಾಪ್ಯ ವೇತನ, ವಿಧವಾ ವೇತನಾ, ಅಂಗವಿಕಲರ ವೇತನಾ, ಸಂಧ್ಯಾ ಸುರಕ್ಷಾ, ಮನಸ್ವಿನಿ ಯೋಜನೆಯ 128 ಫ‌ಲಾನುಭವಿಗಳಿಗೆ ಆದೇಶ ಪತ್ರವನ್ನು ಸಮಾರಂಭದಲ್ಲಿ ವಿತರಣೆ ಮಾಡಲಾಯಿತು. ವಿವಿಧ ಇಲಾಖೆಗೆ ಸಂಬಂಧಿಸಿದ 26 ಅರ್ಜಿಯನ್ನು ಸಾರ್ವಜನಿಕರು ನೀಡಿದ್ದು ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಇಲಾಖೆಗೆ ವರ್ಗಾಯಿಸಲಾಗಿಯಿತು.

Advertisement

ತಹಶೀಲ್ದಾರ್‌ ಜೆ.ಬಿ.ಮಾರುತಿ, ಕಂದಾಯ ನಿರೀಕ್ಷಕ ಎಂ.ಆರ್‌.ಮಂಜುನಾಥ್‌, ಕ್ಷೇತ್ರ ಶಿಕ್ಷಣಾಧಿ ಕಾರಿ ಸೋಮನಾಥ್‌, ಸೆಸ್ಕ್ ಎಇಇ ಹರೀಶ್‌, ಶ್ರವಣ ಬೆಳಗೊಳ ಹೋಬಳಿ ಉಪತಹಶೀಲ್ದಾರ್‌ ನಂಜೇಗೌಡ, ಶ್ರವಣಬೆಳಗೊಳ ಸಮು ದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಯುವರಾಜ್‌, ಕಂದಾಯ ನಿರೀಕ್ಷಕ ಕೆ.ಪಿ.ರಮೇಶ್‌, ಶಿಕ್ಷಣ ಸಂಯೋಜಕ ರುದ್ರೇಶ್‌, ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ, ಸದಸ್ಯ ಚಂದ್ರಶೇಖರ್‌, ಮಹದೇವ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next