Advertisement

ಐಐಟಿಸಿ ಸಂಸ್ಥೆಯ ಪ್ರವಾಸೋದ್ಯಮ ವಿದ್ಯಾರ್ಥಿಗಳ  ಘಟಿಕೋತ್ಸವ

04:28 PM Feb 12, 2019 | Team Udayavani |

ಮುಂಬಯಿ: ವೃತ್ತಿಪರ ಶಿಕ್ಷಣ ಕ್ಷೇತ್ರದ ತುಳು- ಕನ್ನಡಿಗರ ರಾಷ್ಟ್ರದ ಪ್ರಸಿದ್ಧ ಸಂಸ್ಥೆ ಇಂಟರ್‌ ನ್ಯಾಷನಲ್‌  ಇನ್‌ಸ್ಟಿಟ್ಯೂಟ್‌  ಟ್ರೆ„ನಿಂಗ್‌ ಸೆಂಟರ್‌ (ಐಐಟಿಸಿ) ಸಂಸ್ಥೆಯ ಟ್ರಾವೆಲ್‌, ಟೂರಿಸಂ, ಕಾರ್ಗೊ ವಿಭಾಗದ (ಐಎಟಿಎ-ಅಯಟಾ) ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭವು  ಫೆ.  9ರಂದು ಸಿಎಸ್‌ಟಿ ಸಮೀಪದ ಸೈಂಟ್‌ ಕ್ಸೇವಿಯರ್   ಕಾಲೇಜು ಸಭಾಗೃಹ ದಲ್ಲಿ  ನೇರವೇರಿತು.

Advertisement

ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸೌತ್‌ ಏಯಾ  ಐಎಟಿಎ (ಅಯಟಾ) ಪ್ರಾದೇಶಿಕ ತರಬೇತಿ ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ಲೊಕೇಶ್‌ ಮಟ್ಟ ಉಪಸ್ಥಿತರಿದ್ದರು. ಇದೇ ಶುಭಾವಸರದಲ್ಲಿ ಅಯಟಾ ವಿಭಾಗದ ಐಐಟಿಸಿ ಸಂಸ್ಥೆಯ ರಾಷ್ಟ್ರಾದ್ಯಂತ ಶಾಖೆಗಳಿಂದ ಉತ್ತೀರ್ಣರಾದ ಒಟ್ಟು 280 ವಿದ್ಯಾರ್ಥಿ ಗಳಿಗೆ ಪ್ರಮಾಣಪತ್ರವನ್ನು ಪ್ರದಾನಿಸಿ ಗೌರವಿಸಿದರು. ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ 45 ವಿದ್ಯಾರ್ಥಿಗಳನ್ನು ವಿಶೇಷವಾಗಿ ಗೌರವಿಸಿ ಅಭಿನಂದಿಸಲಾಯಿತು.

ಕರ್ನಾಟಕ ಕರಾವಳಿಯ ಬೆಳ್ತಂಗಡಿ ಮೂಲದ ಸಂಸ್ಥಾಪಕ ಎಸ್‌. ಕೆ. ಉರ್ವಾಲ್‌ ಅವರ ದೂರದೃಷ್ಟಿತ್ವದ ಸಂಸ್ಥೆ ಐಐಟಿಸಿ ಗ್ಲೋಬಲ್‌ ಕರಿಯರ್ ಪ್ರತಿಸಿದ್ಧಿಯ ಐಐಟಿಸಿ ನಿರ್ದೇಶಕ ವಿಕ್ರಾಂತ್‌ ಉರ್ವಾಲ್‌ ಪ್ರಸ್ತಾವನೆಗೈದ‌ು ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಪ್ರಾಧ್ಯಾಪಕರಾದ ಗುರ್ಜಿತ್‌ ಸಿಂಗ್‌, ಉರ್ಮಿ ಪಾಟೇಲ್‌, ಪ್ರಿಯಾಂಕ ಡಿ’ಸೋಜಾ, ವಂದನಾ ಜೈನ್‌, ದಿವ್ಯಾ ಲಕುರ್‌, ಅಮೃತಾ  ಕವಡೆ, ವಿಜಯ ಮೆನನ್‌, ಗಂಗಾಧರ್‌ ಪೂಜಾರಿ, ಸಂಜಯ್‌ ಮಿಸ್ತ್ರಿ ಉಪಸ್ಥಿತರಿದ್ದರು.  ಫಾಲ್ಗುಣಿ ಮಿರಾಣಿ  ವಂದಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next