Advertisement

ಸಮುದ್ರದ ಪ್ಲಾಸ್ಟಿಕ್‌ ಕಣ ಸಂಸ್ಕರಣೆಗೆ ಐಐಟಿ ಗುವಾಹಟಿ ತಂಡ ಸಫ‌ಲತೆ

07:52 PM Apr 20, 2021 | Team Udayavani |

ನವದೆಹಲಿ: ಸೂಕ್ಷ್ಮ ರಂಧ್ರಗಳುಳ್ಳ ಟ್ಯೂಬ್‌ ಬಳಸಿ, ಐಐಟಿ ಗುವಾಹಟಿ ತಂಡ ಸಮುದ್ರ ನೀರಿನಲ್ಲಿರುವ ಸಣ್ಣ ಪ್ಲಾಸ್ಟಿಕ್‌ ಕಣಗಳನ್ನು ಸಂಸ್ಕರಣೆ ಮಾಡುವಲ್ಲಿ ಸಫ‌ಲತೆ ಸಾಧಿಸಿದೆ.

Advertisement

“ಸಮುದ್ರದಲ್ಲಿ ಪ್ಲಾಸ್ಟಿಕ್‌ ತುಣುಕುಗಳು ಇಂಚಿನ 5ನೇ ಒಂದು ಭಾಗದಷ್ಟು ಸೂಕ್ಷ್ಮ ಕಣಗಳಾಗಿ ಬೆರೆತಿರುತ್ತವೆ. ಸಮುದ್ರ ಜೀವಿಗಳು ಇದನ್ನೇ ಸೇವಿಸಿ ಬದುಕುತ್ತವೆ. ಇಂಥ ಸಮುದ್ರ ಮೀನು, ಏಡಿಗಳನ್ನು, ಅಲ್ಲದೆ ಪ್ಲಾಸ್ಟಿಕ್‌ ಕಣ ಬೆರೆಸಿದ ಉಪ್ಪನ್ನು ಮಾನವ ಸೇವಿಸುವುದರಿಂದ ಆತನಲ್ಲಿ ಹಾರ್ಮೋನ್‌ ವ್ಯತ್ಯಯ, ಬಂಜೆತನ, ನರವ್ಯವಸ್ಥೆ ಸಮಸ್ಯೆ, ಕ್ಯಾನ್ಸರ್‌ ಕೂಡ ಬರುವ ಸಾಧ್ಯತೆ ಇದೆ’ ಎಂದು ಐಐಟಿಯ ಕೆಮಿಕಲ್‌ ಎಂಜಿನಿಯರಿಂಗ್‌ ವಿಭಾಗ ಮುಖ್ಯಸ್ಥ ಕೌಸ್ತುಭ ಮೊಹಂತಿ ಎಚ್ಚರಿಸಿದ್ದಾರೆ.

ಫಿಲ್ಟರ್‌ ಹೇಗಿದೆ?: ಸ್ಟ್ರಾ ರೀತಿಯ ನೂರಾರು ಅತಿಸಣ್ಣಗಾತ್ರದ ಟ್ಯೂಬ್‌ಗಳನ್ನು ಒಗ್ಗೂಡಿಸಿ, ಫಿಲ್ಟರ್‌ ಮ್ಯಾಟ್ರಿಕ್ಸ್‌ನ ಕೊಳವೆಯಂತೆ ಬಳಸಲಾಗಿದೆ. ಈ ಟ್ಯೂಬ್‌ನ ಶರೀರ ಅತಿಸೂಕ್ಷ್ಮ ರಂಧ್ರಗಳನ್ನು ಹೊಂದಿದೆ. ಇಂಥ ಕೊಳವೆ ಮೂಲಕ ನೀರು ಹಾದುಹೋಗುವಾಗ, ಸಣ್ಣ ಪ್ಲಾಸ್ಟಿಕ್‌ ಕಣಗಳು ಕೊಳವೆಗಳಲ್ಲೇ ಉಳಿದುಕೊಂಡು, ಸಂಸ್ಕರಿತ ನೀರು ಸರಾಗವಾಗಿ ಹರಿದುಹೋಗುತ್ತದೆ ಎಂದು ಮೊಹಂತಿ ವಿವರಿಸಿದ್ದಾರೆ.

ಇದನ್ನೂ ಓದಿ :ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲೇ ಅನುಮತಿ : ಜಗದೀಶ ಶೆಟ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next