Advertisement

ದೇಶಕ್ಕೆ ಐಐಟಿ ಬಾಂಬೆ ಬೆಸ್ಟ್‌

08:14 AM Jun 11, 2020 | mahesh |

ಹೊಸದಿಲ್ಲಿ: ಕ್ಯೂಎಸ್‌ ವಿಶ್ವವಿದ್ಯಾಲಯಗಳ ವಿಶ್ವ ರ್‍ಯಾಂಕಿಂಗ್‌ ಪಟ್ಟಿ-2021 ಪ್ರಕಟವಾಗಿದ್ದು, ಐಐಟಿ- ಮುಂಬಯಿ, ಸತತ ನಾಲ್ಕನೇ ಬಾರಿಗೆ ಭಾರತದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಹೊರ ಹೊಮ್ಮಿದೆ. ಆದರೆ, ಈ ಬಾರಿ ಅದು ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 172ನೇ ಸ್ಥಾನಕ್ಕೆ ಕುಸಿದಿದೆ. 2020ರಲ್ಲಿ ಅದು 152ನೇ ಸ್ಥಾನದಲ್ಲಿತ್ತು. ನಂತರದ ಸ್ಥಾನದಲ್ಲಿ ಐಐಎಸ್ಸಿ-ಬೆಂಗಳೂರು (185) ಇದೆ. ಕಳೆದ ಬಾರಿ ಅದು 184ನೇ ಸ್ಥಾನದಲ್ಲಿತ್ತು. ಐಐಟಿ- ದಿಲ್ಲಿ 193ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ ಅದು 182ನೇ ಸ್ಥಾನದಲ್ಲಿತ್ತು.

Advertisement

ಮೊದಲ 1000 ರ್‍ಯಾಂಕಿಂಗ್‌ನಲ್ಲಿ ಕೇವಲ 21 ಭಾರತೀಯ ಶೈಕ್ಷಣಿಕ ಸಂಸ್ಥೆಗಳು ಈ ಬಾರಿ ಸ್ಥಾನ ಪಡೆದುಕೊಂಡಿವೆ. ಕಳೆದ ವರ್ಷ 25 ಸಂಸ್ಥೆಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಅಲ್ಲದೆ, ಶ್ರೇಣಿವಾರು, ಈ ಬಾರಿ ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಕಾರ್ಯಕ್ಷಮತೆ ಕಡಿಮೆಯಾಗಿದೆ. ಉಳಿದಂತೆ, ಐಐಟಿ-ಮದ್ರಾಸ್‌ (275), ಐಐಟಿ - ಖರಗ್‌ಪುರ (314), ಐಐಟಿ-ಕಾನ್ಪುರ (350), ಐಐಟಿ-ರೂರ್ಕಿ (383), ಐಐಟಿ-ಗುವಾಹಟಿ (470) ಮೊದಲ 500 ರ್‍ಯಾಂಕಿಂಗ್‌ನಲ್ಲಿ ಸ್ಥಾನ ಪಡೆ ದಿವೆ. ಈ ಬಾರಿಯೂ ಕ್ಯೂಎಸ್‌ ವಿಶ್ವವಿದ್ಯಾಲ ಯಗಳ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳು ಅಗ್ರಸ್ಥಾನ ಪಡೆದು ಕೊಂಡಿವೆ. ಎಂಐಟಿ (ಮೆಸ್ಯಾಚ್ಯುಸೆಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ) ಸತತ 9ನೇ ವರ್ಷವೂ ಮೊದಲ ಸ್ಥಾನ ಗಳಿಸಿ, ಇತಿಹಾಸ ನಿರ್ಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next