Advertisement

Campus Interview; ಬಾಂಬೆ ಐಐಟಿ ಕ್ಯಾಂಪಸ್‌ ಸಂದರ್ಶನ: ಕನಿಷ್ಠ ವೇತನ 4 ಲಕ್ಷ ರೂ.ಗೆ ಇಳಿಕೆ

08:46 PM Sep 03, 2024 | Team Udayavani |

ನವದೆಹಲಿ: ಬಾಂಬೆ ಐಐಟಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ)ಯ ಕ್ಯಾಂಪಸ್‌ನಲ್ಲಿ ಕಂಪನಿಗಳು ನಡೆಸಿದ ಉದ್ಯೋಗ ಸಂದರ್ಶನದಲ್ಲಿ ವಾರ್ಷಿಕ ಕನಿಷ್ಠ ವೇತನ 6 ಲಕ್ಷ ರೂ.ಗಳಿಂದ 4 ಲಕ್ಷ ರೂ.ಗೆ ಕುಸಿದಿದೆ.

Advertisement

ಕೆಲ ಕಂಪನಿಗಳು 4 ಲಕ್ಷ ರೂ. ವಾರ್ಷಿಕ ಪ್ಯಾಕೇಜನ್ನು ತೋರಿಸಿದ್ದವು. ಕನಿಷ್ಠ ಮೊತ್ತ 4 ಲಕ್ಷ ರೂ.ಗೆ ಇಳಿಕೆಯಾಗಿರುವುದನ್ನು ಹಲವರು ಪ್ರಶ್ನಿಸಿದ್ದಾರೆ. ಆದರೆ ಒಟ್ಟಾರೆ ಸರಾಸರಿ ವೇತನ 23.5 ಲಕ್ಷ ರೂ.ಗೆ ಏರಿಕೆಯಾಗಿದೆ. ಹಿಂದಿನ ವರ್ಷ ಈ ಪ್ರಮಾಣ 21.8 ಲಕ್ಷ ರೂ. ಇತ್ತು.

ಇನ್ನು ಕ್ಯಾಂಪಸ್‌ ಸಂದರ್ಶನದಲ್ಲಿ ಆಯ್ಕೆಯಾದವರ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಈ ವರ್ಷ 1979 ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರು. 1475 ವಿದ್ಯಾರ್ಥಿಗಳನ್ನು ಕಂಪನಿಗಳು ಆಯ್ಕೆ ಮಾಡಿಕೊಂಡಿವೆ. ಶೇ. ಲೆಕ್ಕಾಚಾರದಲ್ಲಿ ಶೇ.75 ಮಂದಿ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಈ ಪ್ರಮಾಣ ಶೇ.82ರಷ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next