Advertisement

India Rankings 2017: ಬೆಂಗಳೂರಿನ IISc ಅತ್ಯುತ್ತಮ ವಿಶ್ವವಿದ್ಯಾಲಯ

04:36 PM Apr 03, 2017 | udayavani editorial |

ಹೊಸದಿಲ್ಲಿ :  ಭಾರತ ಸರಕಾರದ “ಇಂಡಿಯಾ ರಾಂಕಿಂಗ್ಸ್‌ 2017’ರಲ್ಲಿ  ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸಯನ್ಸ್‌  ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

Advertisement

ಸರಕಾರ ದೇಶಾದ್ಯಂತ ನಡೆಸಿರುವ ಶೈಕ್ಷಣಿಕ ಸಂಸ್ಥೆಗಳ ರಾಂಕಿಂಗ್‌ನಲ್ಲಿ ದಿಲ್ಲಿಯ ಮಿರಾಂಡಾ ಹೌಸ್‌ ಕಾಲೇಜು ಸಾಮಾನ್ಯ ಪದವಿ ಶಿಕ್ಷಣದ ದೇಶದ ಅತ್ಯುತ್ತಮ ಕಾಲೇಜು ಎಂದು ಪರಿಗಣಿತವಾಗಿದೆ. ಎರಡನೇ ಮತ್ತು ಮೂರನೇ ಸ್ಥಾನವನ್ನು ಅನುಕ್ರಮವಾಗಿ ಚೆನ್ನೈನ ಲೊಯೋಲಾ ಕಾಲೇಜು ಮತ್ತು  ಶ್ರೀ ರಾಮ್‌ ಕಾಲೇಜು ಗಳಿಸಿವೆ. ಕಾಲೇಜುಗಳಿಗೆ ರಾಂಕ್‌ ನೀಡಲಾಗಿರುವುದು ಇದೇ ಮೊದಲ ಸಲವಾಗಿದೆ. 

ಕಳೆದ ವರ್ಷ ವಿವಾದ ಕೇಂದ್ರ ಬಿಂದುವಾಗಿದ್ದ ದಿಲ್ಲಿಯ ಜವಾಹರ ಲಾಲ್‌ ಯುನಿವರ್ಸಿಟಿ ಎರಡನೇ ಅತ್ಯುತ್ತಮ ವಿಶ್ವವಿದ್ಯಾಲವೆನಿಸಿದೆ. ಬನಾರಸ್‌ ಹಿಂದು ಯುನಿವರ್ಸಿಟಿಗೆ ಮೂರನೇ ಸ್ಥಾನ ಪ್ರಾಪ್ತವಾಗಿದೆ.

ಓವರಾಲ್‌ ರಾಂಕಿಂಗ್‌ ಕೆಟಗರಿಯಲ್ಲಿ ಏಳು ಐಐಟಿ ಗಳು ಟಾಪ್‌ ಹತ್ತರಲ್ಲಿ ಸ್ಥಾನ ಪಡೆದಿವೆ. 

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಮದ್ರಾಸ್‌ ಗೆ ನಂ.1 ತಾಂತ್ರಿಕ ವಿದ್ಯಾಲಯ ಎನಿಸಿಕೊಂಡಿದೆ. ಜಾಮಿಯಾ ಹಮ್‌ದದ್‌ì ಅತ್ಯುತ್ತಮ ಫಾರ್ಮಸಿ ವಿದ್ಯಾಲಯ ಎನಿಸಿದೆ. ಐಐಎಂ ಅಹ್ಮದಾಬಾದ್‌ ಅತ್ಯುತ್ತಮ ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ವಿಶ್ವವಿದ್ಯಾಲಯಗಳ ಪೈಕಿ ಜಾಧವ್‌ಪುರ ಯುನಿವರ್ಸಿಟಿಗೆ ಐದನೇ ಸ್ಥಾನ ಪ್ರಾಪ್ತವಾಗಿದೆ. 

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಈ ಸರಕಾರ ಕೈಗೊಂಡ ಶೈಕ್ಷಣಿಕ ವಿದ್ಯಾಲಯಗಳ 2017ರ ಸಮೀಕ್ಷೆಯ ಕ್ರಮಾಂಕಗಳನ್ನು ಇಂದಿಲ್ಲಿ ಪ್ರಕಟಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next