Advertisement

ಐಐಎಸ್‌ಸಿ ದಾಳಿ: ಶಂಕಿತ  ಆರೋಪಿ ಶೀಘ್ರ ನಗರಕ್ಕೆ

03:50 AM Mar 19, 2017 | Team Udayavani |

ಬೆಂಗಳೂರು: ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌  (ಐಐಎಸ್‌ಸಿ) ಆವರಣದಲ್ಲಿ 2005ರಲ್ಲಿ ನಡೆದಿದ್ದ ಉಗ್ರ ದಾಳಿಯ ಶಂಕಿತ ಆರೋಪಿ ಯನ್ನು ಶೀಘ್ರ ನಗರಕ್ಕೆ ಕರೆತರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕರ್ನಾಟಕ ಉಗ್ರ ನಿಗ್ರಹ ದಳ ಹಾಗೂ ತ್ರಿಪುರಾ ಪೊಲೀಸರು ಶುಕ್ರವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜೋಗೇಂದ್ರ ನಗರದ ಶಂಕಿತ ಆರೋಪಿ ಹಬೀಬ್‌ ಮಿಯಾ (37) ಎಂಬಾತನನ್ನು ಅಗರ್ತಲಾ ಬಳಿ ಬಂಧಿಸಲಾಗಿತ್ತು.

Advertisement

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌, ಐಐಎಸ್‌ಸಿ ದಾಳಿಯ ಶಂಕಿತ ಆರೋಪಿ
ಯನ್ನು ತ್ರಿಪುರಾದ ಜೋಗೇಂದ್ರ ನಗರದಲ್ಲಿ ವಶಕ್ಕೆ ಪಡೆಯುವ ಪ್ರಯತ್ನಗಳು ನಡೆಯುತ್ತಿವೆ. ಕೋರ್ಟ್‌ ಅನುಮತಿ ನೀಡಿದ ಕೂಡಲೇ ಆರೋಪಿಯನ್ನು ನಗರಕ್ಕೆ ಕರೆತರಲಾಗುವುದು ಎಂದರು.

ಹವಾಮಾನ ಪರಿಸ್ಥಿತಿ ಆಧರಿಸಿ ಶನಿವಾರ ಅಥವಾ ರವಿವಾರ ಆರೋಪಿಯನ್ನು ವಿಮಾನದ ಮೂಲಕ ನಗರಕ್ಕೆ ಕರೆತರಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 2005ರ ಡಿ. 28ರಂದು ಬೆಂಗಳೂರಿನ ಐಐಎಸ್‌ಸಿ ಆವರಣಕ್ಕೆ ನುಗ್ಗಿದ ಉಗ್ರರು, ಗುಂಡಿನ ದಾಳಿ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next