Advertisement

Kasaragod ಕಾಡಾನೆ ದಾಳಿಗೆ ತುತ್ತಾಗಿದ್ದ ನಕ್ಸಲ್‌ ಸುರೇಶ್‌ ಶರಣಾಗತಿ

12:36 AM Apr 09, 2024 | Team Udayavani |

ಕಾಸರಗೋಡು: ಕೇರಳ-ಕರ್ನಾಟಕ ಗಡಿ ಭಾಗದ ಕಾಡಿನಲ್ಲಿ ತನ್ನ ಸಹಚರರೊಂದಿಗೆ ಸಂಚರಿಸುತ್ತಿದ್ದಾಗ ಕಾಡಾನೆ ದಾಳಿಗೆ ತುತ್ತಾಗಿ ಗಾಯಗೊಂಡಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದ ನಕ್ಸಲ್‌ ಸುರೇಶ್‌ ಆಲಿಯಾಸ್‌ ಪ್ರದೀಪ್‌ ಕೇರಳದ ಕಣ್ಣೂರಿನಲ್ಲಿ ಪೊಲೀಸರಿಗೆ ಶರಣಾಗಿರು ವುದಾಗಿ ಹೇಳಿಕೆ ನೀಡಿದ್ದಾನೆ.

Advertisement

ಕಂಜಿರಕೊಳ್ಳಿ ಚಿತ್ತಾರಿ ಕಾಲನಿ ಪರಿಸರದಲ್ಲಿ ಫೆಬ್ರವರಿ 16ರಂದು ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸುರೇಶ್‌ನನ್ನು ಕಣ್ಣೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೊಲೀಸರ ವಿಚಾರಣೆ ವೇಳೆ ಆತ ಮೋಸ್ಟ್‌ ವಾಂಟೆಡ್‌ ನಕ್ಸಲ್‌ ಎಂಬ ವಿಚಾರ ತಿಳಿದು ಬಂದಿತ್ತು. ಬಳಿಕ ಆತ ಪೊಲೀಸ್‌ ಕಸ್ಟಡಿಯಲ್ಲಿದ್ದುಕೊಂಡು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ.

ಪ್ರಸ್ತುತ ಚೇತರಿಸಿಕೊಂಡಿದ್ದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ದ್ದಾನೆ. ಕಳೆದ 23 ವರ್ಷಗಳಿಂದ ನಕ್ಸಲ್‌ ಚಳವಳಿಯಲ್ಲಿದ್ದೆ. ಈ ಹಿಂದೆಯೇ ಶರಣಾಗಬೇ ಕೆಂದುಕೊಂಡಿದ್ದೆ. ಆದರೆ ಕಾಲ ಕೂಡಿ ಬಂದಿರಲಿಲ್ಲ. ಮಾವೋ ವಾದಿಯಾಗಿ ಏನೂ ಮಾಡಲು ಆಗಿಲ್ಲ. ನಮ್ಮ ಸಂಗಾತಿಗಳಿಗೆ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಬದಲಾವಣೆ ತರಲು ಸಾಧ್ಯವಾಗಲಿಲ್ಲ ಎಂದಿದ್ದಾನೆ.

ಸುರೇಶನ ಮೇಲೆ ಕರ್ನಾಟಕದಲ್ಲಿ ಒಟ್ಟು 26ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಆತನನ್ನು ಹಿಡಿದು ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಸರಕಾರ ಘೋಷಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next