Advertisement

ಐಜಿಪಿ ಬಂಗ್ಲೆ ಶ್ರೀಗಂಧ ಅರಣ್ಯ ಸಚಿವರೇ ಮನೆಗೆ ಸಾಗಿಸಿರುವ ಶಂಕೆ

08:00 AM Aug 24, 2017 | |

ಮಂಗಳೂರು: ಮಂಗಳೂರಿನ ಐಜಿಪಿ ವಸತಿಗೃಹದ ಆವರಣದಿಂದ ಶ್ರೀಗಂಧದ ಮರಗಳು ರಾಜಾರೋಷವಾಗಿ ಕಳವಾಗಿರುವ ಘಟನೆ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ. ಸಚಿವರ ಈ ರೀತಿಯ ಹೇಳಿಕೆನೋಡಿದರೆ, ಬಹುಶಃ ಈ ಮರಗಳನ್ನು ಅವರು ತಮ್ಮ ಮನೆಗೇ ಸಾಗಿಸಿರುವ ಶಂಕೆ ಇದೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಆರೋಪಿಸಿದ್ದಾರೆ.

Advertisement

ರಾಜ್ಯ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅರಣ್ಯ ಸಚಿವರಿಗೆ ಅರಣ್ಯ ಎಲ್ಲಿದೆ ಎಂದೇ ಗೊತ್ತಿಲ್ಲ. ಹಾಗಾಗಿ, ಐಜಿಪಿ ಬಂಗ್ಲೆಯಿಂದ ಶ್ರೀಗಂಧ ಮರ ಕಳವು ಆಗಿರುವ ವಿಷಯವೂ ಗೊತ್ತಾಗಿಲ್ಲ. ಬಹುಶಃ ಅವರು ಈ ಮರಗಳನ್ನು ತಮ್ಮ ಮನೆಗೇ ಕೊಂಡೊಯ್ದಿರಬಹುದು. ಇಲ್ಲವಾಗಿದ್ದರೆ ಆರೋಪಿಗಳನ್ನು ಇಷ್ಟೊತ್ತಿಗೆ ಪತ್ತೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಅವರು ದೂರಿದರು.

ತಮ್ಮ ಅರಣ್ಯ ಖಾತೆಯಲ್ಲಿ ನಡೆಯುತ್ತಿರುವ ಆಗು-ಹೋಗುಗಳ ಬಗ್ಗೆ ಗೊತ್ತಿಲ್ಲದ ಸಚಿವರಿಂದ ಏನು ಘನ ಕಾರ್ಯವನ್ನು ನಿರೀಕ್ಷಿಸಬಹುದು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಐಜಿಪಿ ಬಂಗ್ಲೆಯ ಬೆಳೆಬಾಳುವ ಮರಗಳಿಗೆ ರಕ್ಷಣೆ ನೀಡಲು ಸಾಧ್ಯವಾಗದವರು ಅರಣ್ಯ ಸಚಿವರಾಗಿ ಕಾಡಿನ ಮರಗಳಿಗೆ ಯಾವ ರೀತಿಯ ರಕ್ಷಣೆ ನೀಡಲು ಸಾಧ್ಯ ಎಂದು ಸಂಸದ ನಳಿನ್‌ ಕುಮಾರ್‌ ಪ್ರಶ್ನಿಸಿದರು. ನಗರದ ಮೇರಿಹಿಲ್‌ನಲ್ಲಿರುವ ಐಜಿಪಿ ಬಂಗ್ಲೆಯಿಂದ ಐದು ಶ್ರೀಗಂಧದ ಮರಗಳನ್ನು ಕೊಳ್ಳೆ ಹೊಡೆದಿರುವ ಪ್ರಕರಣವನ್ನು “ಉದಯವಾಣಿ’ ಬಯಲು ಮಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next