Advertisement

IFFI Goa: ಮಹಿಳೆಯರ ಕುರಿತ ಕಥಾವಸ್ತುಗಳನ್ನು ಮಹಿಳೆಯರೇ ಏಕೆ ಹೇಳಬೇಕು?ಪೂಜಾ ಭಟ್

12:17 PM Nov 25, 2023 | Team Udayavani |

ಪಣಜಿ, ನ. 25: ಮಹಿಳೆಯರ ಕುರಿತಾದ ಕಥಾವಸ್ತುಗಳನ್ನು ಮಹಿಳೆಯರೇ ಏಕೆ ಹೇಳಬೇಕು?ಹೀಗೆಂದು ಪ್ರಶ್ನಿಸಿದವರು ಖ್ಯಾತ ನಟಿ ಪೂಜಾ ಭಟ್. ಇಫಿ ಚಲನಚಿತ್ರೋತ್ಸವದಲ್ಲಿ ಸನಾ ಚಿತ್ರದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ಅಂಥದೊಂದು ನಿರೀಕ್ಷೆಯೇ ತಪ್ಪು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

’ಸನಾ ನನ್ನ ಮಾತನ್ನು ದೃಢೀಕರಿಸಿದೆ. ಮಹಿಳೆಯರ ಕಥೆಗಳನ್ನು ಹೇಳಲು ಮಹಿಳೆಯರೇ ಬೇಕಿಲ್ಲ. ಸಹಾನುಭೂತಿ ಎನ್ನುವುದು ಮಹಿಳೆಯರಿಗಿರುವ ವಿಶೇಷ ಹಕ್ಕೇನೂ ಅಲ್ಲ’ ಎಂದರು ಪೂಜಾ ಭಟ್.

’ಗರ್ಭಪಾತದಂಥ ಮಹತ್ವದ ವಿಷಯಗಳ ಕುರಿತು ಸಮಾಜದಲ್ಲಿ ಒಂದು ಫಲಪ್ರದವೆನಿಸುವಂಥ ಸಂವಾದ ಸಾಧ್ಯವಾಗಬೇಕಿದೆ. ಈ ಬಗ್ಗೆ ಹೆಚ್ಚೆಚ್ಚು ಯೋಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈ ಸಿನಿಮಾವನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಸುಧಾಂಶು ಸರಿಯಾ ನಿರ್ದೆಶಿಸಿದ್ದಾರೆ. ’ನನ್ನ ಈ ಚಿತ್ರದ ಹಿಂದಿನ ಆಲೋಚನೆ ಮನುಷ್ಯನ ಹೊಟ್ಟೆಕಿಚ್ಚು ವರ್ಗದ ಲೆಕ್ಕಾಚಾರ ಹಾಗೂ ಆಸೆಗಳ ಅಂತರಂಗಕ್ಕೆ ಹೊಕ್ಕುವುದು. ಆ ಆಸ್ಫೋಟದ ವಲಯವನ್ನು ಭೇದಿಸುವುದೇ ನನ್ನ ಉದ್ದೇಶ. ಅದೇ ನನಗೆ ಹೆಚ್ಚು ಸತ್ವಯುತ ಎನಿಸಿದ್ದು. ಹಾಗಾಗಿ ಈ ಚಿತ್ರದಲ್ಲಿ ಮೂರ್ನಾಲ್ಕು ಸಂಗತಿಗಳು ಒಂದೇ ಪದರದಲ್ಲಿ ಸಾಗುತ್ತವೆ. ಮುಖ್ಯವಾಗಿ ಸ್ವಾರ್ಥ, ಕಾರ್ಯಸ್ಥಾನದಲ್ಲಿನ ಅಸೂಕ್ತವೆನಿಸುವಂತಹ ಸಂಬಂಧಗಳು, ತಮ್ಮನ್ನೇ ತಾವು ಸರಿಯಾಗಿ ಅರ್ಥೖಸಿಕೊಳ್ಳಲಾಗದ ನಮ್ಮ ಸ್ಥಿತಿ..ಎಲ್ಲದರ ಕುರಿತ ಶೋಧನೆ ಈ ಚಿತ್ರದ ಪ್ರಯತ್ನ ಎಂದರು ಸುಧಾಂಶು.

ಸನಾ ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ [ಈ ಸಿನಿಮಾದ ಹೀರೋ] ರಾಧಿಕಾ ಮದನ್, ’ನನ್ನ ಪಾತ್ರ ವಿಶೇಷವಾದುದು. ಹಲವು ಪಾತ್ರಗಳೊಂದಿಗೆ ಸಮೀಕರಿಸುವಂಥದ್ದು. ವಿವಿಧ ಪದರಗಳುಳ್ಳದ್ದು ಎಂದರು.

Advertisement

ಸನಾ ಚಲನಚಿತ್ರವು ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಸುವರ್ಣ ನವಿಲು ಪ್ರಶಸ್ತಿಗಾಗಿ 15 ಚಲನಚಿತ್ರಗಳೊಂದಿಗೆ ಸೆಣಸುತ್ತಿದೆ. ಮೂರು ಭಾರತೀಯ ಚಲನಚಿತ್ರಗಳಲ್ಲಿ ಇದೂ ಒಂದಾಗಿದೆ. ಸನಾ ಮಹಾತ್ವಾಕಾಂಕ್ಷಿ ಮಹಿಳೆಯೊಬ್ಬಳು ನಡೆಸುವ ಹೋರಾಟದ ಕಥೆ.

 

Advertisement

Udayavani is now on Telegram. Click here to join our channel and stay updated with the latest news.

Next