Advertisement

ಗೋವಾ ಚಿತ್ರೋತ್ಸವ ; ಆಸ್ಕರ್‌ ಗೆ ಸೆಣಸಿದ ಚಿತ್ರಗಳನ್ನು ನೋಡಲೆಂದೇ ಬನ್ನಿ

12:57 PM Nov 25, 2019 | Team Udayavani |

ಇಫಿ ಚಿತ್ರೋತ್ಸವ ಆರಂಭಕ್ಕೆ ಇನ್ನು ಇರುವುದು ಕೇವಲ ಏಳು ದಿನ. ನ. 20ಕ್ಕೆ ಚಿತ್ರೋತ್ಸವಕ್ಕೆ ಚಾಲನೆ. ಈ ಬಾರಿಯ ವಿಶೇಷವೆಂದರೆ ಈ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ [ಇಫಿ] ಕ್ಕೆ 50ನೇ ವರ್ಷ. ಸುವರ್ಣ ಸಂಭ್ರಮ. ಹಾಗಾಗಿ ಹತ್ತಾರು ವಿಶೇಷತೆಗಳೊಂದಿಗೆ ಗೋವಾದ ಪಣಜಿ ಉತ್ಸವಕ್ಕೆ ಸಿದ್ಧಗೊಳ್ಳುತ್ತಿದೆ.

Advertisement

ಕೋಲ್ಕತಾದಲ್ಲಿ ಈಗಾಗಲೇ ಚಿತ್ರೋತ್ಸವ ಆರಂಭವಾಗಿದೆ. ಅಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಚಿತ್ರಪ್ರೇಮಿಗಳು ಸೇರಿರುವುದು ವಿಶೇಷ. ಇದೇ ದೃಷ್ಟಿಯಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳನ್ನು ನಿರೀಕ್ಷಿಸುತ್ತಿದೆ ಗೋವಾ ಚಿತ್ರೋತ್ಸವ ಸಮಿತಿ.

ಸಮಿಯಿಯ ಸದ್ಯದ ಪ್ರಕಟಣೆಗಳ ಪ್ರಕಾರ, ಹಿಂದಿನ ವರ್ಷಗಳಿಗಿಂತ ಕೆಲವು ವಿಶೇಷಗಳಿರುವುದು ಸ್ಪಷ್ಟ. ಮಾಸ್ಟರ್‌ ಕ್ಲಾಸಸ್‌, ಓಪನ್‌ ಫೋರಂ ಎನ್ನುವಂಥ ಚಿತ್ರಪ್ರೇಮಿಗಳು ಭಾಗಿಯಾಗುವ ಕಾರ್ಯಕ್ರಮಗಳೊಂದಿಗೆ ಈ ಬಾರಿ ಚಿತ್ರಗಳ ಔತಣವೇ ಬೇರೆ ರೂಪದಲ್ಲಿಸಿದ್ಧಗೊಳ್ಳುತ್ತಿದೆ.

 ಆಸ್ಕರ್‌ ಚಿತ್ರಗಳನ್ನು ನೋಡಲು ಬನ್ನಿ

ಈ ಬಾರಿಚಿತ್ರೋತ್ಸವ ನೋಡಲಿಕ್ಕೆ ಬರಲು ಈಗಾಗಲೇ ಹೇಳಿದಂತೆ ಹಲವಾರು ಕಾರಣಗಳಿವೆ. ವಿಶ್ವಾದ್ಯಂತ ಹಲವಾರು ಚಿತ್ರ ಪ್ರಶಸ್ತಿಗಳಿವೆ. ಅವುಗಳಿಗೆ ಪ್ರತಿವರ್ಷವೂ ಸಾವಿರಾರು ಚಿತ್ರಗಳು ಸೆಣಸುತ್ತವೆ. ಆ ಪೈಕಿ ಆಸ್ಕರ್‌ ಸಹ ಒಂದು. ಅಲ್ಲಿಗೆ ಪ್ರಶಸ್ತಿ ಪಡೆಯುವುದಿರಲಿ, ಸ್ಪರ್ಧೆಯಲ್ಲಿ ಸೆಣಸುವುದೂ ಒಂದು ಪ್ರತಿಷ್ಠೆಯ ಸಂಗತಿ. ಈ ಬಾರಿ ಚಿತ್ರೋತ್ಸವದ ಸೊಬಗನ್ನು ಹೆಚ್ಚಿಸಿರುವ ಚಿತ್ರಗಳೆಂಬ ಗುಚ್ಛಗಳಲ್ಲಿ ಆಸ್ಕರ್‌ ಗುಚ್ಛವೂ ಒಂದು.

Advertisement

ಪ್ರಶಸ್ತಿ ಪುರಸ್ಕೃತ ಹಾಗೂ ಪ್ರಶಸ್ತಿಗೆ ಸೆಣಸಿದ ಚಿತ್ರಗಳನ್ನೇ ಅನುಸರಿಸುವ ಚಿತ್ರ ಪ್ರೇಮಿಗಳ ವರ್ಗವಿದೆ. ಅಂಥವರನ್ನು ಖುಷಿಪಡಿಸಲೆಂದು 24ಚಿತ್ರಗಳ ಗುಚ್ಛವೊಂದು ಸಿದ್ಧವಾಗಿದೆ. 2012ರಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡ ಲೆಸ್‌ ಮಿಸರ್‌ಬಲ್ಸ್‌, ಈ ಬಾರಿಯ ಸ್ಪರ್ಧೆಯಲ್ಲಿರುವ ಬಯೋನ್ಸಿಯೂ ಈ ಗುಚ್ಛದಲ್ಲಿವೆ.ಉಳಿದಂತೆ ಚಿತ್ರಗಳ ಪಟ್ಟಿಇಂತಿದೆ :

ಹವ, ಮರ್ಯಾಮ್‌, ಆಯೇಷಾ [ಆಪ್ಘಾನಿಸ್ತಾನ]

ಪಪೀಚಾ [ಅಲ್ಗೇರಿಯಾ]

ಬಹಯೋನ್ಸಿ [ಆಸ್ಟ್ರೇಲಿಯಾ]

ಆಂಟಿಗೋನ್‌ [ಕೆನಡಾ]

ಮೊನೊಸ್‌ [ಕೊಲಂಬಿಯಾ]

ದಿ ಪೇಂಟೆಂಡ್‌ ಬರ್ಡ್‌ [ಝೆಕ್‌ ರಿಪಬ್ಲಿಕ್‌]

ಕ್ವೀನ್‌ ಆಫ್‌ ಹಾರ್ಟ್ಸ್‌ [ಡೆನ್ಮಾರ್ಕ್‌]

ಸ್ಟುಪಿಡ್‌ ಯಂಗ್‌ ಹಾರ್ಟ್‌ [ಫಿನ್‌ಲ್ಯಾಂಡ್‌]

ಲೆಸ್‌ ಮಿಸರಬಲ್ಸ್‌ [ಫ್ರಾನ್ಸ್‌]

ಸಿಸ್ಟಂ ಕ್ರ್ಯಾಶರ್‌ [ಜರ್ಮನಿ]

ಎ ವೈಟ್‌ ಡೇ [ಐಸ್‌ಲ್ಯಾಂಡ್‌]

ದಿ ಸ್ಟೆಡ್‌ [ಮಂಗೋಲಿಯಾ]

ಆ್ಯಡಂ [ಮೊರೊಕ್ಕೊ]

ಇನ್‌ಸ್ಟಿಂಕ್ಟ್‌ [ನೆದರ್‌ಲ್ಯಾಂಡ್ಸ್‌]

ಔಟ್‌ ಸ್ಟೀಲಿಂಗ್‌ ಹಾರ್ಸಸ್‌ [ನಾರ್ವೆ]

ಇಟ್‌ ಮಸ್ಟ್‌ ಬೀ ಹೆವನ್‌ [ಪ್ಯಾಲೇಸ್ತೇನ್‌]

ಬೀನ್‌ಪೋಲ್‌ [ರಷ್ಯಾ]

ಆಂಟ್ಲಾಟಿಕ್ಸ್‌ [ಸೆನೆಗಲ್‌]

ಪ್ಯಾರಾಸೈಟ್‌ [ಸೌತ್ಕೊರಿಯಾ]

ಪೇನ್‌ ಆ್ಯಂಡ್‌ ಗ್ಲೋರಿ [ಸ್ಪೇನ್‌]

ಅ್ಯಂಡ್‌ ದೆನ್‌ ವಿಡ್ಯಾನ್ಸ್ಡ್‌ [ಸ್ವೀಡನ್‌]

ಕಮಿಟ್‌ಮೆಂಟ್‌ [ಟರ್ಕಿ]

ಹೋಮ್‌ವಾರ್ಡ್‌ [ಉಕ್ರೇನ್‌]

  • ರೂಪರಾಶಿ
Advertisement

Udayavani is now on Telegram. Click here to join our channel and stay updated with the latest news.

Next