ಪಣಜಿ: ಕೋವಿಡ್ ಹಿನ್ನೆಲೆಯಲ್ಲೂ ಸಂಘ ಟಿಸಲಾಗಿದ್ದ 51ನೇ ಭಾರತೀಯ ಅಂತಾರಾಷ್ಟ್ರೀಯ ಚಿ ತ್ರೋತ್ಸವಕ್ಕೆ (ಇಫಿ)ರವಿವಾರ ತೆರೆಎಳೆಯಲಾಯಿತು.
ಜನವರಿ 16ರಿಂದ 24ರ ವರೆಗೆ ನಡೆದ ಚಿತ್ರೋತ್ಸವ ದಲ್ಲಿ 60 ದೇಶಗಳ 225ಕ್ಕೂ ಹೆಚ್ಚು ಚಲನಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶಿತವಾದವು. ಪ್ರತೀ ವರ್ಷ ಅತ್ಯುತ್ತಮ ಚಿತ್ರಕ್ಕೆ ನೀಡುವ ಗೋಲ್ಡನ್ ಪೀ ಕಾಕ್ ಪ್ರಶಸ್ತಿ -ಪಾರಿತೋಷಕ ಈ ಬಾರಿ ಡೆನ್ಮಾರ್ಕ್‌ನ ಆ್ಯಂಡ್ರಸ್ ರೆಫ್ನ್ ನಿರ್ದೇಶನದ ಡ್ಯಾನಿಷ್ ಭಾಷೆಯ “ಇನ್ ಟು ದಿ ಡಾರ್ಕ್‌ನೆಸ್’ (ಇಂಗ್ಲಿಷ್ ಟೈಟಲ್)ನ ಪಾಲಾಯಿತು. 40 ಲಕ್ಷ ರೂ. ನಿರ್ದೇಶಕ ಹಾಗೂ ನಿರ್ಮಾಪಕ ಇಬ್ಬರಿಗೂ ಈ ಪ್ರಶಸ್ತಿ ನೀಡಲಾಗುತ್ತದೆ.
ಅತ್ಯುತ್ತಮ ನಿರ್ದೇಶನ- ನಿರ್ದೇಶಕನಿ ಗೆ ನೀಡಲಾಗುವ ಸಿಲ್ವರ್ ಪೀಕಾಕ್ ಪ್ರಶಸ್ತಿ- ಪಾರಿ ತೋಷಕವು ತೈವಾನಿನ ನಿರ್ದೇಶಕ ಚೆನ್ ನಿನ ಕೊ ಅವರಿಗೆ ನೀಡಿ ಗೌರವಿಸಲಾಯಿತು. ಅವರ ದಿ ಸೈಲೆಂಟ್ ಫಾರೆಸ್ಟ್ ಚಿತ್ರದ ನಿರ್ದೇಶನಕ್ಕೆ ಈ ಗೌರವ ಸಂದಿದೆ. ಅತ್ಯುತ್ತಮ ನಟನೆಗೆ ನೀಡಲಾಗುವ ಸಿಲ್ವರ್ ಪೀಕಾಕ್ ಪ್ರಶಸ್ತಿ ದಿ ಸೈಲೆಂಟ್ ಫಾರೆಸ್ಟ್‌ನಲ್ಲಿ ಅಭಿನಯಿ ಸಿರುವ ತೈವಾನಿನ ನಟ ತ್ಸು ಚುಯಾನ್ ಲಿ ಗೆ ಸಂದಾಯವಾದರೆ, ಅತ್ಯುತ್ತಮ ನಟಿ ಪ್ರಶಸ್ತಿ ಪೋಲಿಷ್ ಭಾಷೆಯ ಐ ನೆವರ್ ಕ್ರೈ ಚಿತ್ರದ ನಟನೆಗಾಗಿ ಝೋಪಿ ಯಾ ಸ್ಟಫೇಜ್‌ರ ಪಾಲಾಯಿತು. ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಬಲ್ಗೇರಿಯನ್ ನಿರ್ದೇಶಕ ಕಮಿನ್ ಕಲೇ ಅವರ ಫೆಬ್ರವರಿ ಚಲನಚಿತ್ರ ಪಾತ್ರವಾಯಿತು. ಮತ್ತೂಂದು ವಿಶೇಷ ಪ್ರಶಸ್ತಿಗೆ ಅಸ್ಸಾಮಿ ನಿರ್ದೇ ಶಕರಾದ ಕೃಪಾಲ್ ಕಲಿತಾ ರ “ಬ್ರಿಡ್ಜ್’ ಸಿನೆಮಾ ಆಯ್ಕೆ ಯಾಯಿತು. ಚೊಚ್ಚಲ ಸಿನೆಮಾಕ್ಕೆ ನೀಡಲಾಗುವ ಉದಯೋನ್ಮುಖ ನಿರ್ದೇಶಕ ಪ್ರಶಸ್ತಿಯನ್ನು ಬ್ರೆಜಿಲಿ ಯನ್‌ನ ಕಸಿಯೋ ಪೆರೇರಾ ತಮ್ಮ ಪೋರ್ಚುಗೀಸ್ ಭಾಷೆಯ ವೆಲೆಂಟಿನಾ ಚಿತ್ರಕ್ಕೆ ಪಡೆದರು. ಇದ ರೊಂದಿಗೆ ಐಸಿಎಫ್ಟಿ ಯುನೆಸ್ಕೊ ಗಾಂಧಿ ಪ್ರಶಸ್ತಿಗೆ ಪ್ಯಾಲೇಸ್ತಿಯನ್‌ನ ಅರೇಬಿಕ್ ಭಾಷೆಯ ಚಿತ್ರ 200 ಮೀಟರ್ ಅನ್ನು ಆಯ್ಕೆ ಮಾಡಲಾಗಿದೆ.
ಹಿಂದಿ ಮತ್ತು ಬಂಗಾಲಿಯ ಹಿರಿಯ ಚಿತ್ರನಟ, ನಿರ್ದೇಶಕ ಬಿಶ್ವಜಿತ್ ಚಟರ್ಜಿಗೆ ವ್ಯಕ್ತಿ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜತೆಗೆ ಮುಖ್ಯ ಅತಿಥಿ ಯಾಗಿದ್ದ ಹಿಂದಿಯ ಹಿರಿಯ ನಟಿ ಜೀನತ್ ಅಮಾನ್‌ರನ್ನೂ ಗೌರವಿಸಲಾಯಿತು.
ಹೊಸ ಪ್ರಯೋಗ ಒಳ್ಳೆಯ ಪ್ರತಿಕ್ರಿಯೆ :
ಇಫಿಯ ಹೊಸ ಪ್ರಯೋಗಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾ ಚಿತ್ರರಂಗದ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣ. ಚಿತ್ರರಂಗಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಈ ಬಾರಿಯ ಚಿತ್ರೋತ್ಸವ ಹೈಬ್ರಿಡ್ ರೂಪದಲ್ಲಿ ನಡೆದಿದ್ದು ವರ್ಚುವಲ್ ಹಾಗೂ ಸಾಂಪ್ರದಾಯಿಕ ವಿಧಾನದಲ್ಲೂ ನಡೆದಿತ್ತು. ಹಲವು ಸಿನೆರಸಿಕರು ಸಿನೆಮಾಗಳು, ಸಂವಾದ, ಚರ್ಚೆಯನ್ನು ವೀಕ್ಷಿಸಿದರು.