Advertisement

ನಟೇಶ್ ರ ‘ಪೆಡ್ರೋ’ಮತ್ತು ಪೃಥ್ವಿಯವರ ‘ಪಿಂಕಿ ಎಲ್ಲಿಗೆ’ಪ್ರಶಸ್ತಿ

09:57 AM Nov 26, 2019 | keerthan |

ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದೊಂದಿಗೆ ನಡೆಯುತ್ತಿರುವ ಎನ್ಎಫ್ ಡಿಸಿ ಯ 13ನೇ ವರ್ಷದ ಫಿಲ್ಮ್ ಬಜಾರ್ ರವಿವಾರ ಸಮಾಪನಗೊಂಡಿದ್ದು, ಕನ್ನಡದ ಯುವ ನಿರ್ದೇಶಕರು ದೊಡ್ಡ ಸದ್ದು ಮಾಡಿದ್ದಾರೆ.

Advertisement

ಎರಡು ಪ್ರಶಸ್ತಿಗಳು ಕನ್ನಡಿಗ ನಿರ್ದೇಶಕರ ಪಾಲಾಗಿದೆ. ಯುವ ನಿರ್ದೇಶಕ ನಟೇಶ್ ಹೆಗಡೆ ರೂಪಿಸುತ್ತಿರುವ ಪೆಡ್ರೋ ಸಿನಿಮಾಕ್ಕೆ ವರ್ಕ್ ಇನ್ ಪ್ರೊಗ್ರೆಸ್ ಘಡಬ್ಲ್ಯುಐಪಿ] ಲ್ಯಾಬ್ನ ಪ್ರಶಸ್ತಿ ಬಂದಿದ್ದರೆ, ಮತ್ತೊಬ್ಬ ಯುವ ನಿರ್ದೇಶಕ ಪೃಥ್ವಿ ಕೊಣನೂರು ಅವರ ‘ಪಿಂಕಿ ಎಲ್ಲಿ?’ ಚಿತ್ರಕ್ಕೆ ಫಿಲ್ಮ್ ಬಜಾರ್ ಶಿಫಾರಸು ಘಎಫ್ಬಿಆರ್] ಭಾಗದ ಪ್ರಶಸ್ತಿ ಸಂದಿದೆ. ನಟೇಶ್ ಅವರ ಪೆಡ್ರೋ ಚಿತ್ರವನ್ನು ರಿಷಭ್ ಶೆಟ್ಟಿ ನಿರ್ಮಿಸುತ್ತಿದ್ದಾರೆ.

ಡಬ್ಲ್ಯುಐಪಿ ಲ್ಯಾಬ್ ಭಾಗದಲ್ಲಿ ಅಜಿತ್ಪಾಲ್ ಸಿಂಗ್ ಅವರ ಸ್ವಿಜರ್ ಲ್ಯಾಂಡ್ ಚಿತ್ರಕ್ಕೂ ಪ್ರಶಸ್ತಿ ಸಂದಿದೆ. ಪುಷ್ಪೇಂದ್ರ ಸಿಂಗ್ ಅವರ ಲೈಲಾ ಔರ್ ಸಾಥ್ ಸಂಗೀತ್ ಚಿತ್ರವು ವಿಕೆಎಎಒ ಡಬ್ಲ್ಯುಐಪಿ ಲ್ಯಾಬ್ ಪ್ರಶಸ್ತಿ, ಅಚಲ್ ಮಿಶ್ರಾ ಅವರ ಗಮಕ್ ಘರ್, ರಜತ್ ಕಪೂರ್ ರ ಆರ್ ಕೆ ಚಿತ್ರಕ್ಕೆ ವಿವಿಧ ಪ್ರಶಸ್ತಿಗಳು ಸಂದಿವೆ.

ಪೆಡ್ರೋ ಮತ್ತು ಪೃಥ್ವಿ ಎಲ್ಲಿ ಚಿತ್ರಗಳಿಗೆ ಪ್ರಶಸ್ತಿಯ ಭಾಗವಾಗಿ ಪ್ರಸಾದ್ ಲ್ಯಾಬ್ಸ್ ನಿಂದ ಉಚಿತ ಡಿಐ ಸೌಲಭ್ಯ, ಕ್ಯೂಬ್ ಕಂಪೆನಿಯಿಂದ ಎರಡು ವರ್ಷನ್ ಗಳ ಡಿಸಿಐ ಡಿಸಿಪಿ ಉಚಿತ, ಕ್ಯೂಬ್ ಸಿನಿಮಾ 300 ಥಿಯೇಟರ್ ಗಳಲ್ಲಿ ಸಿನಿಮಾಗಳ ಟ್ರೇಲರ್ ಪ್ರೊಮೋಷನ್ ಗೆ 2 ಲಕ್ಷ ರೂ. ಗಳ ನೆರವು ಹಾಗೂ ಚಿತ್ರ ನಿರ್ದೇಶಕರಿಗೆ 500 ಡಾಲರ್ ಗಳ ಆರಂಭಿಕ ನಿಧಿಯೊಂದಿಗೆ ಕ್ಯೂಬ್ ವೈರ್ ಅಕೌಂಟ್ ಉಚಿತವಾಗಿರಲಿದೆ.

ಇದಲ್ಲದೇ ಡಬ್ಲ್ಯುಐಪಿ ಲ್ಯಾಬ್ನ ಇನ್ನೂ ಮೂರು ಚಿತ್ರಗಳಿಗೆ ಹಲವು ಸೌಲಭ್ಯಗಳು ಶೇ. 50 ರಷ್ಟು ರಿಯಾಯಿತಿಯಲ್ಲಿ ಲಭ್ಯವಾಗಲಿದೆ.
ಈ ಬಾರಿಯ ಬಜಾರ್ ನಲ್ಲಿ 36 ದೇಶಗಳ 1116 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದರು. ಇದು ಇದುವರೆಗಿನ ಹೆಚ್ಚಿನ ಸಂಖ್ಯೆ. ಈ ಬಗ್ಗೆ ಮಾತನಾಡಿದ ಎನ್ಎಫ್ ಡಿಸಿ ಯ ಎಂಡಿ ಟಿಸಿಎ ಕಲ್ಯಾಣಿ, ಫಿಲ್ಮ್ ಬಜಾರ್ ಬಹು ಭಾಷೆಯ, ಬಹು ರಾಷ್ಟ್ರೀಯ ಮಾರುಕಟ್ಟೆ. ಈ ಬಾರಿ ವಿವಿಧ ವಿಭಾಗಗಳಲ್ಲಿ ಪ್ರಗತಿಯಲ್ಲಿರುವ 30೦ ಭಾಷೆಗಳ 268 ಯೋಜನೆಗಳನ್ನು [ಚಿತ್ರ] ಪ್ರಸ್ತುತ ಪಡಿಸಲಾಗಿದೆ’ ಎಂದರು.

Advertisement

ನ. 20 ರಿಂದ 24 ರವರೆಗೆ ಫಿಲ್ಮ್ ಬಜಾರ್ ಆಯೋಜಿಸಲಾಗಿತ್ತು. ಪ್ರೊಡ್ಯೂಸರ್ಸ್ ಲ್ಯಾಬ್, ನಾಲೆಡ್ಜ್ ಸೀರಿಸ್, ಕೌಶಲ ಕಾರ್ಯಾಗಾರವೂ ಸೇರಿದಂತೆ ವಿವಿಧ ವಿಷಯಗಳಲ್ಲಿ ಸಂವಾದಗಳನ್ನೂ ನಡೆಸಲಾಗಿತ್ತು. ಇದರೊಂದಿಗೆ ವ್ಯೂವಿಂಗ್ ರೂಮ್ ನಲ್ಲಿ 200 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಒದಗಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next