Advertisement
ಇದರ ಭಾಗವಾಗಿ ಒಂಬತ್ತು ದಿನಗಳ ಉತ್ಸವದಲ್ಲಿ ಹನ್ನೊಂದು ಪ್ರಶಸ್ತಿ ಪುರಸ್ಕೃತ ಭಾರತೀಯ ಭಾಷೆಗಳ ಚಲನ ಚಿತ್ರಗಳು ಪ್ರದರ್ಶನವಾಗಲಿವೆ. ಇದು ಇನ್ನೊಂದು ಬಗೆಯಲ್ಲಿ ಭಾರತೀಯ ಭಾಷಾ ಚಿತ್ರರಂಗದ ಹೊಸಅಲೆಯನ್ನು ಗುರುತಿಸುವ ಪ್ರಯತ್ನವೂ ಹೌದು.
Related Articles
Advertisement
ಉಯ್ಯಾಲೆ ಚಿತ್ರದ ಕುರಿತು:
ಈ ಚಿತ್ರತೆರೆ ಕಂಡದ್ದು 1969 ರಲ್ಲಿ. ಡಾ.ರಾಜ್‌ಕುಮಾರ್ ಮತ್ತು ಕಲ್ಪನಾ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದರು. ಕನ್ನಡದ ಖ್ಯಾತ ಕಾದಂಬರಿಕಾರ ಚದುರಂಗ ಅವರ ಕಾದಂಬರಿಯನ್ನು ಆಧರಿಸಿ ರೂಪಿಸಿದ ಸಿನಿಮಾ.
ಚದುರಂಗರು ಬರೀ ಸಿನಿಮಾಕಥೆ ಕೊಟ್ಟಿರಲಿಲ್ಲ, ಜತೆಗೆ ಸಂಭಾಷಣೆಯನ್ನೂಬರೆದಿದ್ದರು. ಇದಕ್ಕೆ ಸಂಗೀತ ಒದಗಿಸಿದವರು ವಿಜಯಭಾಸ್ಕರ್. ಗೋಪಾಲ್ ಮತ್ತು ಲಕ್ಷ್ಮಣ್ ಈ ಚಿತ್ರದ ನಿರ್ಮಾಪಕರು.
ಎನ್. ಲಕ್ಷ್ಮೀನಾರಾಯಣ್ ಅವರು ತಮ್ಮ ನಾಂದಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ಚಿತ್ರಗಳನ್ನು ಶುರು ಮಾಡಿದವರು. ಹಲವಾರು ಸಾಮಾಜಿಕ ಸಂಗತಿಗಳನ್ನು ಅತ್ಯಂತ ಸಮರ್ಪಕವಾಗಿ ಜನಪ್ರಿಯತೆಯ ನೆಲೆಯಲ್ಲೇ ಸಿನಿಮಾ ರೂಪಿಸಿ ಯಶಸ್ವಿಯಾದವರು.