Advertisement
ಅಹಂಕಾರ ತ್ಯಜಿಸಿ: ಕೇವಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಗ್ರಹಕ್ಕೆ ಪೂಜಿಸಿದರೆ ಸಾಲದು, ಕನಿಷ್ಠ ಸ್ವಲ್ಪ ಹೊತ್ತಾದರೂ ಪರಮಾತ್ಮನ ಧ್ಯಾನ ಮಾಡಬೇಕು. ಇದು ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ನೆಮ್ಮದಿ ನೀಡಲಿದೆ. ಎಂದೂ ಕೂಡ ದೇವರ ಹೆಸರಿನಲ್ಲಿ ಕಿತ್ತಾಟಬೇಡ, ಹಣವಿದ್ದರಷ್ಟೆ ಎಲ್ಲವೂ ಆಗದು. ಗಳಿಸಿದ್ದರಲ್ಲಿ ಸ್ವಲ್ಪವಾದರೂ ದಾನ ಮಾಡಬೇಕು. ಮನುಷ್ಯನಿಗೆ ಅಹಂಕಾರ ಬರಬಾರದು, ಇದು ನಮ್ಮನೇ ಸುಡಲಿದೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್‌ಗೌಡ, ದೇವಸ್ಥಾನ ಸಮಿತಿ ಅಧ್ಯಕ್ಷ ರಾಮ, ಕಾರ್ಯದರ್ಶಿ ಜಿಮ್‌ಮಣಿ, ಜನಾಂಗದ ಯಜಮಾನರಾದ ಚಿನ್ನಸ್ವಾಮಿ, ರಾಮಯ್ಯ, ಚಂದ್ರ, ಅಮವಾಸೆ, ಪಳನಿಸ್ವಾಮಿ, ಕುಮಾರ, ಸುಬ್ರಮಣಿ, ನಗರಸಭೆ ಸದಸ್ಯೆ ರಾಣಿಪೆರುಮಾಳ್ ಮತ್ತಿತರರಿದ್ದರು.
ಶೀಘ್ರ ಬೃಹತ್ ಹನುಮಾನ್ ಚಾಲಿಸ್ ಪಠಣ ಕಾರ್ಯಕ್ರಮ: ತಮ್ಮ ಪೀಠದ ವತಿಯಿಂದ ದೇಶ-ವಿದೇಶದಲ್ಲಿ ನೂರಾರು ಹನುಮಂತನ ಗುಡಿಗಳನ್ನು ನಿರ್ಮಿಸಲಾಗಿದೆ. ಇದು ಮುಂದೆಯೂ ಮುಂದುವರಿಯಲಿದೆ. ಹುಣಸೂರಿನಲ್ಲಿ ಬೃಹತ್ ಹನುಮಾನ್ ಚಾಲಿಸ್ ಪಠಣ ಕಾರ್ಯ ನಡೆಸಲುದ್ದೇಶಿಸಿದ್ದು,
ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮನವಿ ಮಾಡಿದರು. ಪೌರಕಾರ್ಮಿಕರ ಮಕ್ಕಳು ವಿದ್ಯಾವಂತರಾಗಬೇಕು, ಇತರರಂತೆ ದೊಡ್ಡ ಕನಸು ಕಾಣಬೇಕು ಎಂದ ಅವರು, ಈ ದೇವಾಲಯಕ್ಕೆ ನೆರವಾಗಿರುವ ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಪಿ ಮಂಜುನಾಥ್ ಅವರನ್ನು ಶ್ಲಾ ಸಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ 8 ಜೋಡಿ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆದ ಆದಿಶಕ್ತಿ ಮಹಾಕಾಳಮ್ಮ ದೇಗುಲ ರಾಜಗೋಪುರ ಪ್ರತಿಷ್ಠಾಪನೆ ಧಾರ್ಮಿಕ ಸಮಾರಂಭದಲ್ಲಿ ಎಂಟು ಜೋಡಿ ಸಾಮೂಹಿಕ ಸರಳ ವಿವಾಹ ಸಹ ನಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ದೇಗುಲ ಕುಂಭಾಭಿಷೇಕ ಪ್ರತಿಷ್ಠಾಪನೆ ಅಂಗವಾಗಿ ಕಾಲೋನಿಯ ಮಹಿಳೆಯರು ಕಳಶಹೊತ್ತು ನಗರದ ವಿವಿಧ ಬಡಾವಣೆಗಳಲ್ಲಿ ಮೆರೆವಣಿಗೆ ನಡೆಸಿದರು.
ಇಡೀ ಕಾಲೋನಿಯನ್ನು ಸಿಂಗರಿಸಲಾಗಿತ್ತು. ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ತಳಿರು ತೋರಣ ಕಟ್ಟಲಾಗಿತ್ತು. ಭಕ್ತಾ ದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಡೀ ಕಾಲೋನಿಯ ಜನರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು. ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.