Advertisement
ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ದಲಿತ ನಾಯಕಧಿರೊಬ್ಬರು ಮುಖ್ಯಮಂತ್ರಿ ಆಗಬಾರಧಿದೇಕೆ ಎಂದು ಪ್ರಶ್ನಿಸಿದರು.
ಬ್ರಹ್ಮ ಬರಬೇಕಾಗಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಬ್ರಹ್ಮ ದೇವ ಬರಬೇಕಾಗಿಲ್ಲ. ಪಕ್ಷದ ಹಿರಿಯರು ಕೊಡುವ ಸಲಹೆಧಿಗಳನ್ನು ಮುಖ್ಯಮಂತ್ರಿ ಪಾಲಿಸಿದರೆ ಸಾಕು ಎಂದು ಪೂಜಾರಿ ತಿಳಿಸಿದರು.
ಇದು ಕಾರ್ಯಕರ್ತರು ಕಟ್ಟಿದ ಪಕ್ಷ. ನೀವು ಕಟ್ಟಿದ್ದಲ್ಲ. ಕಾರ್ಯಕರ್ತರ ಸಲಹೆ ಆಲಿಸುವ ಹಾಗೂ ರಾಜ್ಯದ 6 ಕೋಟಿ ಜನರು ಬಯಸುತ್ತಿರುವುದು ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವ ತಾಳ್ಮೆಯ ಮನೋಭಾವ ನಿಮ್ಮಲ್ಲಿರಬೇಕು ಎಂದು ಅವರು ಮುಖ್ಯಮಂತ್ರಿಗೆ ಸಲಹೆ ನೀಡಿದರು. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಧಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಜತೆ ಹೋಗಲು ಇನ್ನೂ ಕೆಲವರು ಸಿದ್ಧರಾಗಿದ್ದಾರಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ಇದು ಮುಖ್ಯಮಂತ್ರಿ ಅವರಿಗೆ ತಟ್ಟಿದ ಶನಿ ಕಾಟ ಎಂದು ನಾನು ಈ ಹಿಂದೆಯೇ ತಿಳಿಸಿದ್ದೇನೆ. ಶನಿ ಕಾಟ ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದರು.
Related Articles
ಕ್ಷಮೆ ಯಾಚಿಸಲಿ
ಶಾಸಕ ಮೊದಿನ್ ಬಾವಾ ಅವರು ರಸ್ತೆ ದುರಸ್ತಿ ವಿಚಾರದಲ್ಲಿ ಕೆಎಐಡಿಬಿ ಅಧಿಕಾರಿಯೊಬ್ಬರನ್ನು ಏಕವಚನದಲ್ಲಿ ಬೈದು ನಿಂದಿಸಿದ್ದಾರೆ ಎನ್ನಲಾದ ಪ್ರಕರಣ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿ ಹರಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜನಾರ್ದನ ಪೂಜಾರಿ, ಅದರ ಫಲವನ್ನು ಅವರು (ಶಾಸಕರು) ಅನುಭವಿಸುತ್ತಾರೆ. ತಪ್ಪು ಮಾಡುವುದು ಸಹಜ. ಆದ್ದರಿಂದ ಈ ಬಗ್ಗೆ ಅವರು ಜನತೆಯ ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
Advertisement
ಉದ್ಯಮಿಗಳಿಗೆ ಚಹಾಕೂಟ:ಜೇಟ್ಲಿ ವಿರುದ್ಧ ಟೀಕೆ
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಬೆಳಗ್ಗೆ ಉದ್ಯಮಿಗಳಿಗೆ ಚಹಾ ಕೂಟ ಏರ್ಪಡಿಸಿರುವುದನ್ನು ಪೂಜಾರಿ ಟೀಕಿಸಿದರು. ಉದ್ಯಮಿಗಳನ್ನು ಚಹಾಕೂಟಕ್ಕೆ ಕರೆದು ಅವರಿಂದ ಅಹವಾಲು ಅಲಿಸಿದ ವಿತ್ತ ಸಚಿವರ ಕ್ರಮ ಸರಿಯಲ್ಲ. ಬದಲಾಗಿ ಅವರು ಹಳ್ಳಿಗಳಿಗೆ ಹೋಗಿ ರೈತರ ಮತ್ತು ಬಡವರ ಸಮಸ್ಯೆ ಆಲಿಸಬೇಕಿತ್ತು. ಬರಗಾಲದ ಪರಿಣಾಮ ಸಾಲ ಮರು ಪಾವತಿಸಲಾಗದೆ ರೈತರು ಆತ್ಮಹತ್ಯೆ ಮೊರೆ ಹೋಗುತ್ತಾರೆಯೇ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ. ರೈತರ ಸಾಲ ಮನ್ನಾ ಮಾಡುವ ಬಗ್ಗೆ ಬಜೆಟ್‌ನಲ್ಲಿ ಪ್ರಕಟಿಸಿದ್ದರೆ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿತ್ತು. ಪ್ರಧಾನಿ ಮೋದಿ ಬಾಯಿಯಲ್ಲಿ ಆಡುತ್ತಿರುವ ಮಾತುಗಳು ಕೃತಿಗಿಳಿಯಬೇಕಾಗಿತ್ತು ಎಂದು ಪೂಜಾರಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಉಮೇಶ್ಚಂದ್ರ, ಅರುಣ್ ಕುವೆಲ್ಲೊ, ಕರುಣಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.