ಯಲಹಂಕ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏ.18ರಂದು ಮತದಾನ ಮಾಡಿದವರಿಗೆ ಇಲ್ಲಿನ ಕೆಲವು ಆಸ್ಪತ್ರೆ, ನರ್ಸಿಂಗ್ ಹೋಮ್, ಚಿನ್ನದ ಅಂಗಡಿ, ಲ್ಯಾಬ್‌ಗಳು ರಿಯಾಯಿತಿ ನೀಡುವ ಮೂಲಕ ಸಾರ್ವಜನಿಕರು ಮತದಾನದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತಿವೆ.
ಯಲಹಂಕ ನಗರದ ಶುಶ್ರೂಷ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್ನಲ್ಲಿ ಔಷಧಗಳ ಬಿಲ್ ಮೇಲೆ ಶೇ.10ರಷ್ಟು ರಿಯಾಯಿತಿ ಹಾಗೂ ಮಾನಸ ಗ್ರೂಪ್‌ನ ಶುಶ್ರೂಷ ನರ್ಸಿಂಗ್ ಹೋಮ್‌ನಿಂದ ಡಿಸಾcರ್ಜ್ ಬಿಲ್‌ನಲ್ಲಿ ಶೇ.10 ರಿಯಾಯಿತಿ ನೀಡಲಾಗುತ್ತಿದೆ.
ರೇಡಿಯಲ್ ಡಯಗ್ನಾಸ್ಟಿಕ್ಸ್ ಸೆಂಟರ್‌ನಲ್ಲಿ ಉಚಿತ ಮಧುಮೇಹ ಪರೀಕ್ಷೆ, ಕಿಡ್ನಿ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆ ಸೇವೆ ಕಲ್ಪಿಸಲಾಗುತ್ತಿದೆ. ಇದೇ ವೇಳೆ ಸುಮತಿ ಜ್ಯುವೆಲ್ಲರ್ ವತಿಯಿಂದ, ಗ್ರಾಹಕರು ಖರೀದಿಸಿದ ಚಿನ್ನದ ತೂಕದಷ್ಟೇ ಉಚಿತ ಬೆಳ್ಳಿ ನೀಡುವ ಮೂಲಕ ಮತದಾನಕ್ಕೆ ಪ್ರೋತ್ಸಾಹಿಸಲಾಗುತ್ತಿದೆ.
ಶುಶ್ರೂಷ ಮೆಡಿಕಲ್ಸ್ ಸ್ಟೋರ್: ಯಲಹಂಕದ ಬಿ.ಬಿ.ರಸ್ತೆಯಲ್ಲಿರುವ ಶುಶ್ರೂಷ ಮೆಡಿಕಲ್ ಸ್ಟೋರ್ ವತಿಯಿಂದ ಏ.18 ಮತ್ತು 19ರಂದು ಔಷಧಗಳ ಮೇಲೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ಯಲಹಂಕ ಬಸ್ ನಿಲ್ದಾಣ ಸಮೀಪದ ಸುಮತಿ ಜ್ಯುವೆಲ್ಲರ್ನಲ್ಲಿ ಏ.19ರಿಂದ 21ರವರೆಗೆ ನಾಲ್ಕು ದಿನಗಳ ಕಾಲ ಖರೀದಿಸುವ ಚಿನ್ನದ ತೂಕದಷ್ಟೇ ಬೆಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅದೇ ರೀತಿ ಎನ್‌ಇಎಸ್ ವೃತ್ತ ಸಮೀಪದ ರೇಡಿಯಲ್ ಡಯಗ್ನಾಸ್ಟಿಕ್ಸ್ ಸೆಂಟರ್‌ನಲ್ಲಿ ಏ.18 ಮತ್ತು 19ರಂದು ಮಧುಮೇಹ ಸೇರಿ ವಿವಿಧ ಪರೀಕ್ಷೆಗಳನ್ನು ಉಚಿತವಾಗಿ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಎಲ್ಲ ಸೇವೆಗಳನ್ನು ಪಡೆಯಲು ಇಚ್ಛಿಸುವವರು ಏ.18ರಂದು ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದ ನಂತರ ಬೆರಳಿಗೆ ಹಚ್ಚಿದ ಶಾಯಿ ತೋರಿಸಿದರೆ ರಿಯಾಯಿತಿ, ಉಚಿತ ಸೇವೆ ಪಡೆಯಬಹುದು.