Advertisement

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

09:12 AM Dec 19, 2024 | Team Udayavani |

ವಾಷಿಂಗ್ಟನ್‌: ಭಾರತವು ಅಮೆರಿಕದ ಉತ್ಪನ್ನಗಳ ಮೇಲೆ ಅತ್ಯಂತ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದು ಅದಕ್ಕೆ ಅನುಗುಣವಾಗಿ ನಾವೂ ತೆರಿಗೆ ವಿಧಿಸುತ್ತೇವೆ ಎಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

Advertisement

ಭಾರತ, ಬ್ರೆಜಿಲ್‌ ಇತರ ರಾಷ್ಟ್ರಗಳು ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿವೆ. ಇದಕ್ಕೆ ಪ್ರತ್ಯುತ್ತರವಾಗಿ ಅವರು ನಮ್ಮ ಉತ್ಪನ್ನಗಳ ಮೇಲೆ ಎಷ್ಟು ತೆರಿಗೆ ವಿಧಿಸುತ್ತಾರೋ ಅಷ್ಟೇ ತೆರಿಗೆಯನ್ನು ನಾವೂ ಅವರ ಸರಕುಗಳ ಮೇಲೆ ವಿಧಿಸುತ್ತೇವೆ. ಈಗ  ಅವರು ತೆರಿಗೆ ವಿಧಿಸುತ್ತಿದ್ದಾರೆ. ನಾವು ವಿಧಿಸುತ್ತಿಲ್ಲ ಅಷ್ಟೇ ಎಂದು ಹೇಳಿದರು. ಉದ್ದೇಶಿತ ಚೀನಾ ಜತೆಗೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಟ್ರಂಪ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. ತೆರಿಗೆ ವಿಚಾರದಲ್ಲಿ ಟ್ರಂಪ್‌ ಸತತವಾಗಿ ಭಾರತವನ್ನು ಟೀಕಿಸುತ್ತಿದ್ದು, ಅಮೆರಿಕದ ಕಾಗದ ಉತ್ಪನ್ನಗಳು, ಹರ್ಲೆ ಡೇವಿಡ್‌ಸನ್‌ ಬೈಕ್‌ಗಳ ಮೇಲಿನ ತೆರಿಗೆ ವಿಚಾರದಲ್ಲಿ ತೀವ್ರವಾಗಿ ಟೀಕಿಸಿದ್ದರು. ಅಮೆರಿಕದಿಂದ ಭಾರತ 2023-24ರಲ್ಲಿ 77.51 ಶತ ಕೋ ಟಿ ಡಾಲರ್‌ ಉತ್ಪನ್ನಗಳನ್ನು ರಫ್ತು ಮಾಡಿದೆ. 42.2 ಶತ ಕೋಟಿ ಡಾಲರ್‌ ಉತ್ಪನ್ನ ಆಮದು ಮಾಡಿಕೊಳ್ಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next