Advertisement
ಅವರೆಕಾಯಿ ದ್ವಿದಳ ಧಾನ್ಯದ ಬೆಳೆ. ಹೀಗಾಗಿ, ಹೆಚ್ಚು ಮೇಲ್ಗೊಬ್ಬರ ಕೊಡುವ ಆವಶ್ಯಕತೆ ಇಲ್ಲ, ಮಣ್ಣು ಫಲವತ್ತಾಗಿದ್ದರಷ್ಟೇ ಸಾಕು. ಆದರೆ ತುಂಬಾ ಜನ ರೈತರು ಇದಕ್ಕೂ ಮೂಟೆಗಟ್ಟಲೆ ರಾಸಾಯನಿಕ ಗೊಬ್ಬರ ಸುರಿಯುತ್ತಾರೆ. ಇದರಿಂದ ಬೆಳೆ ವಿಷಕಾರಿಯಾಗುವುದರ ಜತೆಗೆ ಸುಮ್ಮನೆ ಗೊಬ್ಬರಕ್ಕೆ ಹಾಕಿದ ದುಡ್ಡು ಹಾಳು; ರೋಗ ಹೆಚ್ಚು. ಸಾವಯವದಲ್ಲಿ ಬೆಳೆದರೆ ಗಿಡಗಳು ಸದೃಢವಾಗಿ ಬೆಳೆದು, ಸಣ್ಣ ಪುಟ್ಟ ರೋಗಗಳನ್ನು ಮೆಟ್ಟಿ ನಿಂತು ಸಿಂಪರಣೆಗಾಗಿ ಮಾಡುವ ಖರ್ಚು ಉಳಿಸುತ್ತದೆ.
ಅವರೆಯನ್ನು ವರ್ಷದಲ್ಲಿ 2ಸಲ ಬೆಳೆಯಬಹುದು. ಎಪ್ರಿಲ್, ಮೇ, ಜೂನ್ ಹಾಗೂ ಡಿಸೆಂಬರ್- ಜನವರಿ ಅವರೆ ಬಿತ್ತನೆಗೆ ಸೂಕ್ತ. ಒಂದು ಎಕ್ರೆ ಅವರೆ ಬೆಳೆಯಲು 12ರಿಂದ 15 ಕೆ.ಜಿ.ಯಷ್ಟು ಬೀಜ ಬೇಕಾಗುತ್ತದೆ. ಒಂದೂವರೆ ಅಡಿಯ ಸಾಲು ಬಿಟ್ಟು ಅರ್ಧ ಅಡಿಗೊಂದು ಬೀಜ ಬರು ವಂತೆ ಬಿತ್ತನೆ ಮಾಡಬೇಕು. ಬಿತ್ತನೆಗೂ ಮೊದಲು ಒಂದು ಎಕ್ರೆ ಜಮೀನಿಗೆ 8 ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಬೇಕು. ಅದು ಲಭ್ಯವಿಲ್ಲ ದಿದ್ದರೆ ಹಾಗೇ ಬಿತ್ತನೆ ಮಾಡಿ ಅನಂತರ ಮೊದಲ ಸಲ ಉಳುಮೆ ಮಾಡುವಾಗ ಒಂದು ಟನ್ ನಷ್ಟು ಒಳ್ಳೆ ಗುಣಮಟ್ಟದ ಎರೆಹುಳು ಗೊಬ್ಬರ ಕೊಡಬೇಕು. ಹೊಲ ತೀರ ಫಲವತ್ತಾಗಿರದೇ ಹೋದಲ್ಲಿ ಮಾತ್ರ ಬಿತ್ತನೆ ಮಾಡುವಾಗ 10 ಕೆ.ಜಿ. ಯೂರಿಯಾ, 20 ಕೆ.ಜಿ. ಡಿ.ಎ.ಪಿ., 10 ಕೆ.ಜಿ. ಪೊಟ್ಯಾಶ್ ಗೊಬ್ಬರ ಕೊಡಿ. ಇದಕ್ಕೂ ಹೆಚ್ಚಿಗೆ ಬೇಡ. ಅರ್ಕಾ ಜಯ್ ಹೆಬ್ಟಾಳ, ಅರ್ಕಾ ವಿಜಯ್ ಪ್ರಮುಖ ಅವರೆ ತಳಿ. ಇದರ ಜತೆಗೆ ಅರ್ಕಾ ಸಂಭ್ರಮ…, ಶಿಲ್ಪ, ಎಚ್.ಎ. ಹಲವು ಖಾಸಗಿ ಕಂಪೆನಿಯ ಅಧಿಕ ಇಳುವರಿ ಕೊಡುವ ಬೀಜ ಈಗ ಲಭ್ಯ.
Related Articles
ಸಾವಯವದಲ್ಲಿ ಬೆಳೆಯುವುದಾದರೆ ಒಂದು ತಿಂಗಳಿಗೂ ಮೊದಲು ಅವರೆ ಸಾಲಿನಲ್ಲಿ ಎರೆಹುಳು ಗೊಬ್ಬರ ಹಾಕಿ, ಮಣ್ಣು ಬುಡಕ್ಕೆ ಏರುವ ಹಾಗೆ ಸಾಲು ಮಾಡಿ ನೀರು ಕೊಡಿ. ಹಾಗೆಯೇ 15 ದಿನಕ್ಕೊಮ್ಮೆ ಜೀವಾಮೃತ ಸಿಂಪರಣೆ ಮಾಡಿ. ಅವರೆಕಾಯಿ ಬೆಳೆಯನ್ನು ಕಾಡುವುದು ಕಾಯಿ ಕೊರೆಯುವ ಹುಳ ಹಾಗೂ ಸಸ್ಯ ಹೇನು ಮಾತ್ರ. ಸಾವಯವದಲ್ಲಿ ಇವೆರಡೂ ಕೀಟಬಾಧೆ ಹತೋಟಿ ಮಾಡುವುದಾದರೆ ಪ್ರತಿ ಹದಿನೈದು ದಿನಕ್ಕೊಮ್ಮೆ ಹಸುವಿನ ಗಂಜಲ, ಅರಿಸಿನ ಪುಡಿ, ಹಸಿ ಮೆಣಸಿನಕಾಯಿ ಕಷಾಯ ಹಾಗೂ ಜಜ್ಜಿ ಹಿಂಡಿದ ಬೆಳ್ಳುಳ್ಳಿ ಕಷಾಯ ಮಿಕ್ಸ್ ಮಾಡಿ ಸಿಂಪರಣೆ ಮಾಡಿ. ಇದರಿಂದ ಸಸ್ಯ ಹೇನು ಹಾಗೂ ಕಾಯಿಕೊರಕ ಹುಳು ಹತ್ತಿರ ಸುಳಿಯುವುದಿಲ್ಲ. ಹಸಿಮೆಣಸಿನಕಾಯಿ ಹಾಗೂ ಸೋಪಿನ ಪುಡಿ ದ್ರಾವಣವನ್ನೂ ಸಿಂಪಡಿಸಿ ಕೀಟಗಳ ಹಾವಳಿ ತಡೆಯಬಹುದು. ಅಷ್ಟಾಗಿಯೂ ಕೀಟ ಕಾಡತೊಡಗಿದರೆ ಸಾವಯವ ಕೀಟನಾಶಕ ಕೊಂಡು ತಂದು ಬಳಸಿ.
Advertisement
ಲಾಭ ಜಾಸ್ತಿ2 ಎಕ್ರೆಯಿಂದ ಗರಿಷ್ಠ 12-14 ಟನ್ ಅವರೆಕಾಯಿ ಇಳುವರಿ ಪಡೆಯಬಹುದು. ತೆಂಗಿನ, ಇತರ ತೋಟಗಾರಿಕಾ ಗಿಡಗಳ ನಡುವೆ ಮಿಶ್ರಬೆಳೆಯಾಗಿಯೂ ಅವರೆ ಬೆಳೆಯಬಹುದು. ಇದರಿಂದ ಒಂದೇ ಖರ್ಚಿನಲ್ಲಿ ಎರಡು ಆದಾಯ ಪಡೆಯುವುದರ ಜತೆಗೆ ಅವರೆ ಬೆಳೆಯುವುದರಿಂದ ಭೂಮಿ ಫಲವತ್ತಾಗುವುದು.