Advertisement

ಮಾಡಿದರೆ ಯೋಗ ಓಡುವುದು ರೋಗ

05:32 PM Jun 22, 2018 | Team Udayavani |

ಕನಕಗಿರಿ: ಚೈತನ್ಯ ಲವಲವಿಕೆಯಿಂದ ಪ್ರತಿಯೊಬ್ಬ ಮನುಷ್ಯ ಬದುಕಲು ಜೀವನದಲ್ಲಿ ಯೋಗ ಅತ್ಯವಶ್ಯಕತೆ ಇದೆ.
ಯೋಗ ಮಾಡಿದರೆ ರೋಗವು ಓಡಿ ಹೋಗುವುದು ಎಂದು ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದಿ ಆರ್ಟ್‌ ಆಫ್‌ ಲಿವಿಂಗ್‌
ಹಾಗೂ ಸುವರ್ಣಗಿರಿ ಯೋಗ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಯೋಗ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನಾದಿ ಕಾಲದಿಂದಲೂ ಋಷಿ ಮುನಿಗಳು ಯೋಗ ಅಭ್ಯಾಸವನ್ನು ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷದಿಂದ
ಪ್ರಧಾನಿ ನರೇಂದ್ರ ಮೊದಿಯವರು ಇಡೀ ವಿಶ್ವವೇ ಯೋಗ ದಿನಾಚರಣೆಯನ್ನು ಮಾಡುವ ಮೂಲಕ ವಿಶ್ವಕ್ಕೆ ಭಾರತದ ಕೊಡೆಗೆಯನ್ನು ನೀಡಿದ್ದಾರೆ. ಪಟ್ಟಣದಲ್ಲಿ ಯೋಗ ಶಿಬಿರ ಕಟ್ಟಡಕ್ಕೆ ಶಾಸಕರ ಅನುದಾನದಲ್ಲಿ ಹಣ ನೀಡಲಾಗುವುದು, ಪ್ರತಿ ನಿತ್ಯ ಒಂದು ಗಂಟೆ ಕಾಲ ಯೋಗಕ್ಕೆ ಸಮಯವನ್ನು ಮೀಸಲಿಡುವುದರಿಂದ ಆರೋಗ್ಯದ ಕಡೆ ಗಮನ ಹರಿಸಿದಂತಾಗುತ್ತದೆ. ನಾನು ಪ್ರತಿ ನಿತ್ಯ ಯೋಗ ಮಾಡುವುದನ್ನು ರೂಢಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುವರ್ಣಗಿರಿ ಯೋಗ ಟ್ರಸ್ಟ ಅಧ್ಯಕ್ಷ ವಾಗೇಶ ಹಿರೇಮಠ, ಪ.ಪಂ ಅಧ್ಯಕ್ಷ ರವಿ ಭಜಂತ್ರಿ, ಎಪಿಎಂಸಿ ಸದಸ್ಯ ದೇವಪ್ಪ ತೋಳದ್‌, ಪಪಂ ಮುಖ್ಯಾಧಿಕಾರಿ ಶ್ರೀಶೈಲಗೌಡ, ವ್ಯಾಪಾರ ಸಮೀತಿ ಅಧ್ಯಕ್ಷ ಮಹಾಂತೇಶ ಸಜ್ಜನ್‌, ಯೋಗ ಗುರು ಶೇಖರಯ್ಯ ಸ್ವಾಮಿ, ಪ್ರಮುಖರಾದ ಪ್ರಕಾಶ ಹಾದಿಮನಿ, ಅನಂತಪ್ಪ ದಾಯಿಪುಲ್ಲೆ, ಶಿವಾನಂದ ಬೆಲ್ಲದ್‌, ಪರಸಪ್ಪ ಹೊರಪೆಟೆ, ಕೃಷ್ಣವೇಣಿ ಬೊಂದಾಡೆ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next