Advertisement

ಸೈಬರ್ ವಂಚನೆಗೆ ಪರಿಹಾರ ಒದಗಿಸಲಿದೆ ಗೃಹ ಸಚಿವಾಲಯದ ಈ ಸಹಾಯವಾಣಿ  

10:37 AM Apr 19, 2021 |

ನವ ದೆಹಲಿ : ತಾಂತ್ರಿಕತೆ ಬೆಳೆದಷ್ಟು ಎಷ್ಟು ಲಾಭ ಇದೆಯೋ ಅಷ್ಟೇ ನಷ್ಟವೂ ಕೂಡ ಇದೆ ಎನ್ನುವುದರಲ್ಲಿ  ಅನುಮಾನ ಪಡಬೇಕಾಗಿಲ್ಲ. ತಾಂತ್ರಿಕ ಬೆಳವಣಿಗೆಯನ್ನು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ವಂಚನೆಗೆ ಬಳಸಿಕೊಳ್ಳಲು  ಸೈಬರ್ ಅಪರಾಧಿಗಳು ಬಳಸುತ್ತಿರುವುದು ಹೆಚ್ಚಿತ್ತಿರುವ ಕಾರಣದಿಂದಾಗಿ ದೇಶದ ಅನೇಕ ರಾಷ್ಟ್ರೀಯ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಎಚ್ಚರಿಗೆ ನೀಡದರೂ ಕೂಡ ಗ್ರಾಹಕರು ವಂಚನೆಗೆ ಒಳಗಾಗುತ್ತಿರುವುದು ಕಡಿಮೆಯಾಗುವಂತೆ ಕಾಣುತ್ತಿಲ್ಲ.

Advertisement

ಹೌದು, ಈ  ಆನ್‌ ಲೈನ್ ಯುಗದಲ್ಲಿ ಆನ್ ಲೈನ್  ವಂಚನನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ನಿಗ್ರಹಿಸಲು ಹಾಗೂ ನಿರ್ಮೂಲನೆ ಮಾಡಲು ದೃಷ್ಟಿಯಿಂದ ಕೇಂದ್ರ ಸರ್ಕಾರ ಮುಂದಾಗಿದೆ.

ಓದಿ : ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಅಗ್ನಿ ಅವಘಡ

ಇತ್ತೀಚೆಗೆ, ಕೇಂದ್ರ ಗೃಹ ಸಚಿವಾಲಯ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ ಗ್ರಾಹಕರಿಗೆ ಸಹಾಯವಾಗುವಂತೆ ವಿಶೇಷ ನಂಬರ್ ವೊಂದನ್ನು ನೀಡಿದೆ.

ಹೌದು, ಆನ್ ಲೈನ್ ವಂಚನೆಯಿಂದ ನಿಮ್ಮನ್ನು ಪಾರು ಮಾಡಲು ದೆಹಲಿ ಪೊಲೀಸರು ಸಹಾಯ ವಾಣಿ ನಂಬರ್ ವೊಂದನ್ನು ಕೊಟ್ಟಿದ್ದು, 7 ರಿಂದ 8 ನಿಮಿಷಗಳಲ್ಲಿ ನಿಮಗೆ ಪರಿಹಾರ ಒದಗಿಸುವಲ್ಲಿ ಈ ನಂಬರ್ ಕಾರ್ಯ ನಿರ್ವಹಿಸುತ್ತದೆ. ಹೆಲ್ಪ್ ಲೈನ್ ನಂಬರ್ 155260 ಗೆ ಕರೆ ಮಾಡಿದ 7 ರಿಂದ 8 ನಿಮಿಷಗಳಲ್ಲಿ, ನಿಮ್ಮ ಎಲ್ಲಾ ಹಣವನ್ನು ಮತ್ತೆ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಸರ್ಕಾರ ಹೇಳುತ್ತದೆ.

Advertisement

ನೀವು ಸೈಬರ್ ಅಪರಾಧಿಗಳಿಂದ ನೀವು ವಂಚನೆಗೆ ಒಳಗಾಗಿದ್ದರೆ, ಮೇಲೆ ಸೂಚಿಸಿರುವ ನಂಬರ್ ಗೆ ಕರೆ ಮಾಡಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ದೂರು ಸ್ವೀಕರಾ ಮಾಡಿಕೊಳ್ಳುತ್ತಾರೆ, ಪ್ರಕರಣಕ್ಕ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ಪರಿಶೀಲಿಸಲಾಗುತ್ತದೆ.  ನಿಮ್ಮ ಹಣವನ್ನು ಯಾವ ಖಾತೆ ಅಥವಾ ಐಡಿಗೆ  ವರ್ಗಾಯಿಸಲಾಗಿದೆ ಎಂಬುದನ್ನು ಕಂಡು ಹಿಡಿಯಲಾಗುತ್ತದೆ. ಅದರ ಮಾಹಿತಿ ಸಿಕ್ಕಿದ ತಕ್ಷಣ, ಆ ಬ್ಯಾಂಕ್ ಅಥವಾ ಇ-ಸೈಟ್‌ ಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗುತ್ತದೆ. ನಂತರ, ನಿಮ್ಮ ಹಣವನ್ನು ವಾಪಸ್ ತೆಗೆದುಕೊಳ್ಳಲಾಗುತ್ತದೆ ಎಂದು ಗ್ಋಹ ಸಚಿವಾಲಯ ಮಾಹಿತಿ ನೀಡಿದೆ.

ಓದಿ : ಮುರಳೀಧರನ್ ಗೆ ಹೃದಯ ಸಂಬಂಧಿ ಸಮಸ್ಯೆ: ಲಂಕಾ ಲೆಜೆಂಡ್ ಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ

155260 ಸಹಾಯವಾಣಿಗೆ0 ಕರೆ ಮಾಡಿದಾಗ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ವಂಚನೆ ಸಮಯ, ಬ್ಯಾಂಕ್ ಖಾತೆ ವಿವರಗಳು ಇತ್ಯಾದಿ ವಿವರಗಳನ್ನು ನೀಡಬೇಕು. ಇದಾದ ಮೇಲೆ ನಿಮ್ಮ ದೂರಿನ ಬಗ್ಗೆ ಪರಿಶೀಲಿಸಲಾಗುತ್ತದೆ.

ಮುಂದಿನ ಕ್ರಮಕ್ಕಾಗಿ ಸಹಾಯವಾಣಿ ಸಂಖ್ಯೆ ನಿಮ್ಮ ಮಾಹಿತಿಯನ್ನು ಪೋರ್ಟಲ್‌ಗೆ ಕಳುಹಿಸುತ್ತದೆ. ನಂತರ ವಂಚನೆಯ ಬಗ್ಗೆ ಸಂಬಂಧಪಟ್ಟ ಬ್ಯಾಂಕ್‌ ಗೆ ತಿಳಿಸಲಾಗುವುದು. ನಂತರ ಬ್ಯಾಂಕ್ ಈ ಹಣವನ್ನು ತಡೆಹಿಡಿಯುತ್ತದೆ. ಮತ್ತು ನಿಮ್ಮ ಖಾತೆಗೆ ಅದನ್ನ ವರ್ಗಾಯಿಸುತ್ತದೆ.

ಓದಿ :  ದೇಶಕ್ಕೆ ಅವಳಿ ರೂಪಾಂತರಿ ಕಾಟ : ಡಬಲ್‌ ಮ್ಯುಟೆಂಟ್‌ಗೆ ಭಾರತವೇ ಮೂಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next