Advertisement
ಘಟನೆ ನಂತರ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸುವ ಕೆಲಸ ಮಾಡುತ್ತಾರೆ. ಆದರೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಘಟನಾ ಸ್ಥಳದಲ್ಲಿದ್ದವರೂ ಮಹಿಳೆಯ ರಕ್ಷಣೆಗೆ ಧಾವಿಸುವುದರಿಂದ ಇದು ಮತ್ತಷ್ಟು ಪರಿಣಾಮಕಾರಿ ಆಗಲಿದೆ. ಈ ನಿಟ್ಟಿನಲ್ಲಿ ನಾಗರಿಕರಿಂದಲೇ ಪ್ರಮಾಣ ಸ್ವೀಕರಿಸುವ ಅಭಿಯಾನವನ್ನು ಮಹಿಳಾ ಸಂಘಟನೆಯೊಂದು ಆರಂಭಿಸಿದೆ.
Related Articles
Advertisement
ಏನು ಮಾಡಬೇಕು ಎಂಬ ಗೊಂದಲ: ಆದರೆ, ಅನೇಕರಲ್ಲಿ ಹಲವು ಗೊಂದಲಗಳಿವೆ. ಈ ರೀತಿಯ ಘಟನೆಗಳು ನಡೆದಾಗ, ಮೊದಲನೇಯದಾಗಿ ಏನು ಮಾಡಬೇಕು ಎನ್ನುವುದು ಗೊತ್ತಾಗುವುದಿಲ್ಲ. ರಕ್ಷಣೆಗೆ ಧಾವಿಸುವುದರಿಂದ ನಮಗೇನು ಸಿಗುತ್ತದೆ? ಅಥವಾ ಯಾರು ಏನಾದರೂ ಮಾಡಿಕೊಳ್ಳಲಿ ನಮಗ್ಯಾಕೆ ಎಂಬ ಪ್ರಶ್ನೆಗಳು ಜನರಲ್ಲಿವೆ. ಇವುಗಳನ್ನು ಹಂತ-ಹಂತವಾಗಿ ಜನರ ಮನಸ್ಸಿನಿಂದ ದೂರ ಮಾಡಬೇಕು. ಇದಲ್ಲದೆ, ಅಕ್ಕಪಕ್ಕದಲ್ಲಿದ್ದವರು ಯಾವುದಾದರೂ ಮಹಿಳೆ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕಂಡುಬಂದರೆ, ಹೋಗಿ ಕೇಳುವುದು ಸೇರಿದಂತೆ ಕಾನೂನಾತ್ಮಕ ದೃಷ್ಟಿಯಿಂದಲೂ ಸಲಹೆಗಳನ್ನು ಪಡೆಯಲು ಚಿಂತನೆ ನಡೆದಿದೆ ಎಂದರು.
ಹೀಗೆ ಪ್ರಮಾಣ ಮಾಡಿದವರ ಸಂಖ್ಯೆ 25 ಸಾವಿರ ತಲುಪಿದ ನಂತರ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ, ರಕ್ಷಿಸಿದವರನ್ನು ಗುರುತಿಸಿ, ಸರ್ಕಾರದಿಂದಲೇ ಸನ್ಮಾನಿಸುವಂತೆ ಗೃಹ ಸಚಿವರಿಗೂ ಮನವಿ ಸಲ್ಲಿಸಲಾಗುವುದು. ಇದರ ಉದ್ದೇಶ ಮತ್ತೂಬ್ಬರಿಗೆ ಪ್ರೇರಣೆ ನೀಡುವುದಾಗಿದೆ. “ರಿಯಲ್ ಹೀರೋ’ಗಳ ನಾಮನಿರ್ದೇಶನ ಮಾಡಿದರೆ, ಅದರಲ್ಲಿ 20ರಿಂದ 25 ಜನರನ್ನು ಆಯ್ಕೆ ಮಾಡಿ ಸಂಭ್ರಮಾಚರಣೆ ಮಾಡಬಹುದು ಎಂದು ಹೇಳಿದರು.
ಅಲಾರಾಂ ಪರಿಚಯಿಸಿದ್ದ ದುರ್ಗಾ ಇಂಡಿಯಾ: ಅಂದಹಾಗೆ, ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರ ರಕ್ಷಣೆಗಾಗಿ ಅಳವಡಿಸಿದ “ಅಲಾರಾಂ’ಗಳನ್ನು ಪರಿಚಯಿಸಿದ್ದು ದುರ್ಗಾ ಇಂಡಿಯಾ. ಈಗ 500 ಬಸ್‌ಗಳಲ್ಲಿ ಈ ಅಲಾರಾಂಗಳನ್ನು ಅಳವಡಿಸಲು ಬಿಎಂಟಿಸಿ ನಿರ್ಧರಿಸಿದೆ.
ಬೇಕಾದರೆ ನೀವು ವೋಟ್ ಮಾಡಿ ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನಿಮಗೆ ಕಂಡುಬಂದರೆ, ರಕ್ಷಣೆಗೆ ಧಾವಿಸುವುದಾಗಿ ನೀವು ವೋಟ್ ಮಾಡಿ. ಇದಕ್ಕಾಗಿ //m.facebook.com/questions.php?question_id=1038025162997899 ಕ್ಲಿಕ್ ಮಾಡಿ. * ವಿಜಯಕುಮಾರ್ ಚಂದರಗಿ