Advertisement
ವರ್ಗಾವಣೆ ಸಹಿತ ಇತರ ವಿಷಯಗಳ ಕುರಿತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೇಳಿದ್ದರೂ ಸ್ಪಷ್ಟೀಕರಿಸುತ್ತಿದ್ದೆ. ಈ ವಿಷಯವನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸುವ ಅಗತ್ಯವೇ ಇರಲಿಲ್ಲ ಎಂದರು. ತನಗೂ ಸ್ವಾಭಿಮಾನವಿದೆ. ಉಹಾಪೋಹದ ಸುದ್ದಿ ಆಧರಿಸಿ ತಮ್ಮನ್ನು ಬ್ಲಾಕ್‌ವೆುಲ್ ಮಾಡುವ ತಂತ್ರಗಳಿಗೆ ತಾನು ಬಗ್ಗುವುದಿಲ್ಲ. ನಾನು ವಿಪಕ್ಷದಲ್ಲಿದ್ದು, ಕೆಲಸ ಮಾಡಿರುವವನು ಎಂದ ಅವರು, ತನ್ನ ವಿರುದ್ಧ ಅಪಪ್ರಚಾರ ಮಾಡುವವರು ಈ ಸಂಗತಿ ಅರ್ಥ ಮಾಡಿಕೊಳ್ಳಬೇಕು ಎಂದರು.ಸಮ್ಮಿಶ್ರ ಸರಕಾರಕ್ಕೆ ಕೆಟ್ಟ ಹೆಸರು ತರಬೇಕು. ಆ ಮೂಲಕ ಅಭದ್ರಗೊಳಿಸಬೇಕೆಂಬ ಪ್ರಯತ್ನ ನಡೆಯುತ್ತಿದೆ. ಇಂಥ ಪಿತೂರಿಗಳಿಗೆಲ್ಲ ಜಗ್ಗುವುದಿಲ್ಲ ಎಂದರು.
ಅತಿವೃಷ್ಟಿಯಿಂದ ರಸ್ತೆಗಳಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲು ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದು, ರವಿವಾರ ಹುಬ್ಬಳ್ಳಿಗೆ ಭೇಟಿ ನೀಡಿ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಮಾಹಿತಿ ಪಡೆಯುವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. ರಸ್ತೆ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಎಂಜಿನಿಯರು ಗಳಿಗೆ ಸೂಚನೆ ನೀಡಿದ್ದೇನೆ. ಶನಿವಾರದಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ನಡೆಸುವೆ. ದಕ್ಷಿಣ ಕನ್ನಡ, ಉಡುಪಿ. ಉತ್ತರ ಕನ್ನಡ ಮತ್ತಿತರ ಜಿಲ್ಲೆಗಳಿಗೂ ಭೇಟಿ ನೀಡುವೆ. ಶಿರಾಡಿ ಮತ್ತು ಚಾರ್ಮಾಡಿ ರಸ್ತೆಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.