Advertisement

“ವಿವೇಕಾನಂದರ ಚಿಂತನೆ ಅರ್ಥೈಸಿದರೆ ಸಾಧನೆ ಸುಲಭ’

06:40 PM Apr 25, 2017 | Team Udayavani |

ನೆಹರೂನಗರ: ಸಮರ್ಪಿತ ಮನೋಭಾವದ ವಿವೇಕಾನಂದರ ಚಿಂತನೆಗಳನ್ನು ಯುವ ಸಮೂಹ ಅರ್ಥ ಮಾಡಿಕೊಂಡರೆ ಜೀವನದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಲು ಸಾಧ್ಯ ಎಂದು ರಾಷ್ಟ್ರೀಯ ವಿಚಾರವಾದಿ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನೂತನವಾಗಿ ಆರಂಭಗೊಂಡ ಚಾರಿತ್ರ್ಯ ನಿರ್ಮಾಣ ಸಂಘಟನೆ “ವಿವೇಕ ಸಂಕಲ್ಪ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಾರದೇ ಬದುಕನ್ನು ಬದಲಾಯಿಸುವ ಶಕ್ತಿ ಇರುವ ವಿವೇಕಾನಂದರ ಚಿಂತನೆಯ ಪ್ರೇರಣೆಯಂತೆ ಭಾರತ ಈಗ ಸಾಗುತ್ತಿದೆ ಎಂದರು.

ಅದ್ಭುತ ಚಿಂತನೆ
ಸ್ವಾಮಿ ವಿವೇಕಾನಂದರ ಭಾವಚಿತ್ರದ ಮುಂದೆ ನಿಂತು ವಿವೇಕಾನಂದರ ಕಣ್ಣುಗಳನ್ನು ನೋಡಿದಾಗ ಅವರ ಶಕ್ತಿಯ ಅರಿವಾಗುತ್ತದೆ. ಮಾತೃಪ್ರೇಮ ಮತ್ತು ಮಾತೃ ಭೂಮಿ ಪ್ರೇಮವನ್ನು ಶ್ರೇಷ್ಠವಾಗಿ ಅಂಗೀಕರಿಸಿಕೊಂಡ ವಿವೇಕಾನಂದರ ಚಿಂತನೆಗಳನ್ನು ಓದಿದವರ ಮನಸ್ಸು ಸುಮ್ಮನಿರುವುದಿಲ್ಲ. ಅಂತವರು ಜೀವನದಲ್ಲಿ ಯಾವುದಾದರೊಂದು ದೊಡ್ಡ ಸಾಧನೆಯನ್ನು ಮಾಡುತ್ತಾರೆ. ಖ್ಯಾತ ಹೋರಾಟಗಾರ ಅಣ್ಣಾ ಹಜಾರೆಯವರ ಮೇಲೂ ವಿವೇಕಾನಂದರ ಚಿಂತನೆಗಳು ಪ್ರಭಾವ ಬೀರಿವೆ ಎಂದರು.

ಅಧ್ಯಕ್ಷತೆ ವಹಿಸಿದ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇ ಜಿನ ಸಂಚಾಲಕ ಕೆ. ರಾಧಾಕೃಷ್ಣ ಭಕ್ತ ಮಾತನಾಡಿ, ಕಾಲೇಜಿನ ಗ್ರಂಥಾಲಯದಲ್ಲಿ ವಿವೇಕಾನಂದರ ಚಿಂತನೆಗಳನ್ನು ಒಳಗೊಂಡ ಪುಸ್ತಕಗಳಿರುವ ವಿಭಾಗ ತೆರೆಯಲಾಗಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ವಾರದಲ್ಲಿ 1 ದಿನ ವಿವೇಕಾನಂದರ ಕುರಿತು ಪಾಠವನ್ನು ಆರಂಭಿಸಲಾಗುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಎಂ. ಎಸ್‌. ಗೋವಿಂದೇ ಗೌಡ, ಕ್ಯಾಂಪಸ್‌ ನಿರ್ದೇಶಕ ವಿವೇಕ್‌ ರಂಜನ್‌ ಭಂಡಾರಿ ಉಪಸ್ಥಿತರಿದ್ದರು. ವಿವೇಕ ಸಂಕಲ್ಪದ ಸಂಯೋಜಕ ಪ್ರೊ| ಗಿರೀಶ್‌ ಹೆಗ್ಡೆ ಪ್ರಸ್ತಾವನೆಗೈದು ಸ್ವಾಗತಿಸಿದರು. ವಿದ್ಯಾರ್ಥಿ ಶರಣ್‌ ವಂದಿಸಿದರು. ಪ್ರೊ| ಸಾಯಿ ಸೌಜನ್ಯಾ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next