Advertisement

ಅತೃಪ್ತರು ಬಂದ್ರೆ ಮಾತ್ರ ಗೆಲ್ತೀವಿ: ಶಾಮನೂರು

10:48 PM Jul 20, 2019 | Team Udayavani |

ದಾವಣಗೆರೆ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ವಿಶ್ವಾಸಮತಯಾಚಿಸಲಿದ್ದು, ಅತೃಪ್ತರು ವಾಪಸ್‌ ಬಂದ್ರೆ ಮಾತ್ರ ಗೆಲ್ತೀವಿ. ಇಲ್ಲ ಅಂದ್ರೆ ಸೋಲ್ತೀವಿ ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

Advertisement

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬೆಗೆ ಹೋದವರು ಸಗಣಿ ತಿಂದು ಹೋಗಿದ್ದಾರೆ. ಗುರುವಾರ ವಿಧಾನ ಸಭೆಯಲ್ಲಿ ಶಾಸಕರು 25-30 ಕೋಟಿ ರೂ. ಪಡೆದು ಮುಂಬಯಿಗೆ ಹೋಗಿರುವುದು ಬಹಿರಂಗವಾಗಿದೆ. ಅವರೇನೂ ಸಾಮೂಹಿಕವಾಗಿ ಹೋಗಿಲ್ಲ. ಬಿಜೆಪಿಯವರೇ ಕರೆದುಕೊಂಡು ಹೋಗಿದ್ದಾರೆ. ಎಲ್ಲರನ್ನೂ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಎಂದು ಪ್ರತಿಕ್ರಿಯಿಸಿದರು.

ಸರ್ಕಾರ ಉಳಿಯೋದು ಇಲ್ಲವೆ ಉರುಳ್ಳೋದು ಸೋಮವಾರ ಫೈನಲ್‌ ಆಗಲಿದೆ. ದುಡ್ಡು ತಗೊಂಡು ಸರ್ಕಾರ ಉರುಳಿಸೋರು ಹೋಟೆಲ್‌ನಲ್ಲಿ ಕುಳಿತು ಕೊಂಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ 16 ಮಂದಿಗೂ ಸಚಿವ ಸ್ಥಾನ ನೀಡ್ತಾರಾ? ಈಗ ನಮ್ಮ ಸ್ಥಿತಿ ಮುಂದೆ ಅವರಿಗೂ ಬರಲಿದೆ. ಓಡಿಹೋಗೋರು ಅಲ್ಲೇ ಇದ್ದಾರೆ. ನಾನು ಎಲ್ಲೂ ಹೋಗೋನಲ್ಲ. ಹಾಗಾಗಿ ದಾವಣಗೆರೆಗೆ ಬಂದಿದ್ದೇನೆ ಎಂದರು.

ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಲು ಬರುವುದಿಲ್ಲ. ಸರ್ಕಾರ ಉಳಿದರೆ ಕುಮಾರಸ್ವಾಮಿಯೇ ಮುಖ್ಯಮಂತ್ರಿ. ಶಾಸಕರು ಓಡಿ ಹೋಗುತ್ತಾರೆಂಬ ಹಿನ್ನೆಲೆಯಲ್ಲಿ ಬಿಜೆಪಿಯವರು ಅವರನ್ನು ಕೂಡಿ ಹಾಕಿದ್ದಾರೆ. ಮುಂದೆ ಬಿಜೆಪಿ ಸರ್ಕಾರ ರಚನೆಯಾದಲ್ಲಿ ಅದು ಸಹ ಬಹಳ ದಿನ ಉಳಿಯುವುದಿಲ್ಲ. ಕುದುರೆ ವ್ಯಾಪಾರ ಜೋರಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next