Advertisement

ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ: ರಾಮಲಿಂಗಾ ರೆಡ್ಡಿ

02:27 PM Oct 24, 2020 | keerthan |

ಚಿತ್ರದುರ್ಗ: ಕೋವಿಡ್ ಚಿಕಿತ್ಸೆ, ನಿರ್ವಹಣೆಯಲ್ಲಿ ಈಗಾಗಲೇ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಈಗ ವ್ಯಾಕ್ಸಿನ್ ನೀಡುವ ನೆಪದಲ್ಲಿ ಮತ್ತೆ ಅವ್ಯವಹಾರಕ್ಕೆ ಮುಂದಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಭಾರತಕ್ಕೆ ಕೋವಿಡ್ ಬಂದಿದೆ. ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರ ಕಾರ್ಯಕ್ರಮ ಮಾಡದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ. ಈ ಶಾಪ ಬಿಜೆಪಿಗೆ ತಟ್ಟುತ್ತದೆ ಎಂದು ಮಾಜಿ‌ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Advertisement

ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತಾನಾಡಿದರ ಅವರು, ವಿವಿಧ ರಾಜ್ಯಗಳ ಚುನಾವಣೆ ಸಮಯದಲ್ಲಿಯೂ ಸಹಾ ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಜನ ಸಂಕಷ್ಟದಲ್ಲಿರುವಾಗ ಬಿಜೆಪಿಯವರು ಕೋವಿಡ್ ಲಸಿಕೆ ವಿತರಣೆಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಬಿಹಾರ ಚುನಾವಣೆ2020: ಹತ್ತು ಲಕ್ಷ ಉದ್ಯೋಗ,ನಿರುದ್ಯೋಗಿಗಳಿಗೆ 1,500 ಭತ್ಯೆ: RJD ಪ್ರಣಾಳಿಕೆ

ಬಿಹಾರದಲ್ಲಿ ಚುನಾವಣೆ ಬಂದಿದೆ ಇದನ್ನು ಮನಗಂಡ ಸರ್ಕಾರ ಅಲ್ಲಿ ಮಾತ್ರ ಕೋವಿಡ್-19 ವೈರಸ್‍ಗೆ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದೆ. ಯಾಕೆ ಅಲ್ಲಿ ಇರುವವರು ಮಾತ್ರ ಜನವೇ ದೇಶದ ಬೇರೆ ಕಡೆಗೆ ಇರುವವರು ಜನರಲ್ಲವೇ ಕೊಡುವುದಾದರೆ ಎಲ್ಲರಿಗೂ ಉಚಿತವಾಗಿ ನೀಡಲಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

Advertisement

ಇನ್ನೂ ಲಸಿಕೆ ತಯಾರಾಗಿಲ್ಲ ಅದರ ಬಗ್ಗೆ ಪ್ರಯೋಗದ ಹಂತದಲ್ಲಿದೆ ಇದರ ಬಗ್ಗೆ ಈಗಲೇ ಉಚಿತವಾಗಿ ನೀಡುತ್ತೇನೆ ಎಂದು ಹೇಳುವ ಸರ್ಕಾರ ಅದರಲ್ಲಿಯೂ ಸಹಾ ಹಣವನ್ನು ಮಾಡಲು ಮುಂದಾಗುತ್ತಿದೆ. ಸರ್ಕಾರ ಜನತೆಯ ತೆರಿಗೆಯ ಹಣದಿಂದ ಲಸಿಕೆಯನ್ನು ಖರೀದಿ ಮಾಡಿ ಎಲ್ಲರಿಗೂ ನೀಡುವಂತಾಗಲಿ ಎಂದು ರಾಮಲಿಂಗಾರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.

ಗೂಂಡಾಗಳಿರುವುದೇ ಬಿಜೆಪಿಯಲ್ಲಿ: ಗೂಂಡಾಗಿರಿಯನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಗೂಂಡಾಗಳೆಲ್ಲರು ಬಿಜೆಪಿಯಲ್ಲಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಶೋಭಾ ಕರಾಂದ್ಲಾಜೆ ಹತ್ರಾಸ್ ನಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೊಲೆಯ ಬಗ್ಗೆ ಮಹಿಳೆಯಾಗಿ ಒಂದು ಮಾತನ್ನು ಸಹಾ ಆಡದೇ ಈಗ ಕಾಂಗ್ರೇಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದ ಅವರು, ಅವರ ಮಾತಿಗೆ ಬೆಲೆ ಇಲ್ಲ ಪಕ್ಷದಲ್ಲಿ ಒಬ್ಬ ಇಬ್ಬರಾದರೆ ಹೇಳಬಹುದು ಅದರಲ್ಲಿ ಇರುವವರಲ್ಲಿ ಬಹುತೇಕರು ಗೂಂಡಾಗಳಾಗಿದ್ದಾರೆ. ಅಲ್ಲದೆ ಬಿಜೆಪಿಯವರು ಹಿಟ್ಲರ್ ಸಂಪುಟದಲ್ಲಿದ್ದ ಸುಳ್ಳು ಹೇಳುವ ಸಚಿವನಾಗಿದ್ದ ಗ್ಲೋಬಲ್ ವಂಶಸ್ಥರಾಗಿದ್ದಾರೆ. ಸುಳ್ಳನ್ನು ಸತ್ಯ ಮಾಡುವುದರಲ್ಲಿ ಅವರು ನಿಸ್ಸೀಮರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next